ಸೀತಾಳನ್ನು ಮನೆಗೆ ಕರೆದಿರೋ ತಾತ ದೇಸಾಯಿ ಸಿಹಿಯ ಅಸಲಿಯತ್ತನ್ನು ಕೇಳುತ್ತಿದ್ದಾನೆ. ಇದಕ್ಕೆ ಸೀತಾ ಕೊಡುವ ಉತ್ತರವೇನು?
ಸೀತಾ ಯಾವುದೋ ಒಂದು ಹಾಸ್ಪಿಟಲ್ ನಲ್ಲಿ ಕೆಲ್ಸ ಮಾಡಿರ್ತಾಳೆ. ಅಲ್ಲಿ ಸಿಹಿಗೆ ಶುಗರ್ ಇದೆ ಎಂದು ಅವಳ ಅಪ್ಪ-ಅಮ್ಮ ಬಿಟ್ಟೋಗಿರ್ತಾರೆ. ಆಗ ಸೀತಾ ಆ ಮಗುನಾ ನಾನೇ ಸಾಕ್ತಿನಿ ಅ೦ತಾ ದತ್ತು ತೊಗೋಳ್ತಾಳೆ. ಸೀತಾ ಮನೆಯವರು ಬೇಡ ಅ೦ದ್ರೂ ದತ್ತು ತೊಗೊ೦ಡಿದ್ದಕ್ಕೆ ಮನೆಗೆ ಸೀತಾನ್ನ ಸೇರಿಸಲ್ಲ. ಆದ್ದರಿಂದ ಅವಳು ಮನೆಯವರಿ೦ದ ದೂರ ಬ೦ದು ಮಗು ಜೊತೆ ವಾಸ ಮಾಡ್ತಿರ್ತಾಳೆ. ಇದೇ ಸಿಹಿಯ ನಿಜವಾದ ಕಥೆ. ಈಕೆ ಸೀತಾಳ ಮಗುವೇ ಅಲ್ಲ...
ಅಲ್ಲಪ್ಪ ಅಲ್ಲ.. ಸೀತಾಳದ್ದು ಡಬಲ್ ರೋಲ್ ಆಗಿರುತ್ತೆ. ಸಿಹಿ ಗೀತಾಳ ಮಗಳು. ಆದರೆ ಅವಳು ಇರಲ್ಲ ಎಂದು ಸೀತಾ ಅವಳ ಮಗುವನ್ನು ತಂದು ಸಾಕೋತಾಳೆ. ಹಾಗೂ ಅಲ್ಲ. ಡಬಲ್ ರೋಲ್ ಏನೂ ಇಲ್ಲ. ಸಿಹಿ ಸೀತಾಳ ಅಕ್ಕನ ಮಗಳೋ ಇಲ್ಲವೇ ಸಂಬಂಧಿಕರ ಮಗಳು... ಒಟ್ಟಿನಲ್ಲಿ ಸಿಹಿ ಸೀತಾಳ ಹೆತ್ತ ಮಗುವೇ ಅಲ್ಲ, ಸೀತಾಳಿಗೆ ಮದ್ವೆನೇ ಆಗಿಲ್ಲ. ಅಷ್ಟಕ್ಕೂ ಎಲ್ಲರಿಗೂ ಸಿಹಿ ಅಪ್ಪ ಯಾರು ಎಂದು ಕೇಳೋ ಕುತೂಹಲ. ಒಟ್ನಲ್ಲಿ ನೋಡ್ತೀರಿ ಹೀಗೇ ಆಗೋದು...
ಅವ್ರು ಸುರಸುಂದರ... ಮದ್ವೆಯಾಗಲು ನನಗೇ ತೊಂದ್ರೆ ಇಲ್ಲ, ನಿಮ್ಮದೇನ್ರಿ? ಟ್ರೋಲಿಗರ ಕೆನ್ನೆಗೆ ಬಾರಿಸಿದ ನಟಿ ವರಲಕ್ಷ್ಮಿ
ಸೀತಾರಾಮ ಸೀರಿಯಲ್ನ ಕಥೆಯನ್ನು ಹೀಗೆಲ್ಲಾ ಬರೆಯುತ್ತಿದ್ದಾರೆ ಸೀತಾರಾಮ ಫ್ಯಾನ್ಸ್! ಕುಮಾರ್ ಎನ್ನುವವರು ಆಸ್ಪತ್ರೆ ಕಥೆಯನ್ನು ಹೆಣೆದಿದ್ದರೆ, ಇನ್ನು ಕೆಲವು ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಈ ಸೀರಿಯಲ್ನ ಕಥೆಯನ್ನು ಹೇಳುತ್ತಿದ್ದಾರೆ. ಆದರೆ, ಅಸಲಿಗೆ ಸೀರಿಯಲ್ನಲ್ಲಿ ಸೀತಾಳಿಗೆ ಅಗ್ನಿ ಪರೀಕ್ಷೆ. ಸೀತಾರಾಮ ಸೀರಿಯಲ್ ಇದೀಗ ಕುತೂಹಲದ ಘಟ್ಟ ತಲುಪಿದೆ. ಸೀತಾಳ ಮನೆ ಹುಡುಕಿಕೊಂಡು ಬಂದಿದ್ದ ತಾತ ದೇಸಾಯಿ ಅವರಿಗೆ ಸೀತಾ-ಸಿಹಿಯ ಸಂಬಂಧ ತಿಳಿದಿದೆ. ಯಾವುದನ್ನು ಮುಚ್ಚಿಡಲು ಭಾರ್ಗವಿ ಸೀತಾಳಿಗೆ ಫೋರ್ಸ್ ಮಾಡಿ, ಹಾಗೆ ಮಾಡುವಲ್ಲಿ ಸಕ್ಸಸ್ ಆಗಿದ್ದಳೋ ಆ ಸತ್ಯ ಕೊನೆಗೂ ಬಂದು ಬಿಟ್ಟಿದೆ. ತಾತ ದೇಸಾಯಿಗೆ ಸೀತಾಳಿಗೆ ಓರ್ವ ಮಗಳು ಇದ್ದಾಳೆ ಎನ್ನುವ ಸತ್ಯ ತಿಳಿದುಬಂದಿದೆ. ತಾತನ ಆರೋಗ್ಯದ ಬಗ್ಗೆ ಬ್ಲ್ಯಾಕ್ಮೇಲ್ ಮಾಡಿ ಸೀತಾಳಿಂದ ಈ ಸತ್ಯ ಹೇಳದಂತೆ ಯಶಸ್ವಿಯಾಗಿದ್ದ ಭಾರ್ಗವಿಗೆ ಈಗ ಸಂಕಟವೂ ಹೌದು, ಖುಷಿಯೂ ಹೌದು. ಈ ವಿಷಯವನ್ನು ನನ್ನಿಂದ ಯಾಕೆ ಮುಚ್ಚಿಟ್ಟಿದ್ದು ಎಂದು ಭಾರ್ಗವಿಗೆ ತಾತ ಕೇಳಿದ್ದಾರೆ. ಈಗ ಭಾರ್ಗವಿಗೆ ಸೀತಾಳ ಮೇಲೆ ಗೂಬೆ ಕುಳ್ಳರಿಸುವುದು ದೊಡ್ಡ ವಿಷಯವೇ ಅಲ್ಲ. ಆದರೆ ಇದನ್ನು ಎಲ್ಲರ ಎದುರು ಅವಳು ಹೇಗೆ ನಿಭಾಯಿಸುತ್ತಾಳೆ ಎನ್ನುವುದು ಈಗಿರುವ ಪ್ರಶ್ನೆ.
ಸೀತಾಳ ಜೊತೆ ಮಾತನಾಡಲು ತಾತ ಆಕೆಯನ್ನು ಕರೆದಿದ್ದಾನೆ. ಸಿಹಿ ಅಥವಾ ರಾಮ್ ಎರಡರಲ್ಲಿ ಒಂದನ್ನು ಆಯ್ಕೆ ಮಾಡುವ ಪರಿಸ್ಥಿತಿ ಬಂದರೆ ಏನು ಮಾಡುವುದು ಎನ್ನುವ ಆತಂಕದಲ್ಲಿದ್ದಾಳೆ ಸೀತಾ. ಇದೇ ವಿಷಯವನ್ನು ರಾಮ್ಗೂ ಫೋನ್ನಲ್ಲಿ ಹೇಳಿದ್ದಾಳೆ. ನನ್ನ ಆಯ್ಕೆ ಯಾವುದು ಎಂದು ನಿಮಗೆ ಗೊತ್ತಾಲ್ವಾ ಎಂದಿದ್ದಾಳೆ. ಅದಕ್ಕೆ ರಾಮ್ ಕೂಡ ನಿಮ್ಮ ಆಯ್ಕೆ ಸಿಹಿಯೇ ಆಗಿರಬೇಕು. ನಮ್ಮಿಬ್ಬರನ್ನೂ ಒಂದು ಮಾಡಿದ್ದು ಅವಳೇ ಅಲ್ವಾ ಎನ್ನುತ್ತಲೇ ತನ್ನ ಪ್ರೀತಿಯ ನಿವೇದನೆಯನ್ನೂ ಮಾಡಿಕೊಂಡಿದ್ದಾನೆ. ಇದೀಗ ಧರ್ಮ ಸಂಕಟದಲ್ಲಿದ್ದಾಳೆ ಸೀತಾ. ಇದು ನನ್ನ ಮೊಮ್ಮಗನ ಭವಿಷ್ಯದ ಪ್ರಶ್ನೆ. ಸಿಹಿಯ ಅಪ್ಪ ಬದುಕಿದ್ದಾರಾ ಎಂದು ದೇಸಾಯಿ ಸೀತಾಳಿಗೆ ಕೇಳಿದ್ದು, ಅದರ ಪ್ರೊಮೋ ಬಿಡುಗಡೆಯಾಗಿದೆ. ಸೀರಿಯಲ್ ಕಥೆಯನ್ನು ಈಗ ನೆಟ್ಟಿಗರೇ ಬರೆದಿದ್ದಾರೆ. ಸೀತಾ ಏನು ಹೇಳುತ್ತಾರೆ, ಅಸಲಿ ನಿರ್ದೇಶಕರಿಂದ ಯಾವ ಟ್ವಿಸ್ಟ್ ಇರಲಿದೆ ಎಂದು ಕಾದು ನೋಡಬೇಕು.
ಅವರು ಮನೆಗೆ ಬಂದಾಗ ಮೂರೇ ಮೂರು ನಿಮಿಷ ಅಷ್ಟೇ... ಕಾಸ್ಟಿಂಗ್ ಕೌಚ್ ಕುರಿತು ನಟಿ ಅನಸೂಯಾ ಹೇಳಿದ್ದೇನು?