ಅಂಗಡಿಯಿಂದ ತರುವ ಪ್ಯಾಕೆಟ್‌ ಹಾಲನ್ನು ಬಿಸಿ ಮಾಡಿದರೆ ಈ ಅಪಾಯ ಗ್ಯಾರಂಟಿ!

First Published | Nov 27, 2024, 5:14 PM IST

ಅಂಗಡಿಯಿಂದ ತರುವ ಪ್ಯಾಕೆಟ್‌ ಹಾಲುಗಳನ್ನು ಪದೇ ಪದೇ ಬಿಸಿ ಮಾಡುತ್ತೀರಾ? ಹಸಿ ಹಾಲಿಗೂ ಪ್ಯಾಕೆಟ್ ಹಾಲಿಗು ಇರುವ ವ್ಯತ್ಯಾಸ ಏನು?

ಪ್ರತಿಯೊಬ್ಬರು ದಿನ ನಿತ್ಯ ಹಾಲು ಬಳಸುತ್ತಾರೆ. ದೊಡ್ಡವರಿಗೆ ಕಾಫಿ-ಟೀ ಮಾಡಲು, ಮಕ್ಕಳಿಗೆ ಬೋಸ್ಟ್‌- ಹಾರ್ಲಿಕ್ಸ್‌ಗಾಗಿ. ಹಬ್ಬದ ದಿನಗಳಲ್ಲಿ ಸಹಿ ತಿನಿಸು ಮಾಡಲು ಕೂಡ ಹಾಲು ಬಳಸುತ್ತಾರೆ. ಒಟ್ಟಾರೆ ಸೌತ್‌ ಇಂಡಿಯನ್ಸ್‌ ಮನೆಯಲ್ಲಿ ಬೆಳಗ್ಗೆ ಹಾಲು ಉಕ್ಕಲೇ ಬೇಕು.

ಹಳ್ಳಿಗಳಲ್ಲಿ ಇರುವ ಜನರಿಗೆ ಹಸು, ಎಮ್ಮೆ ಮತ್ತು ಮೇಕೆಯ ಹಸಿ ಹಾಲು ಸಿಗುತ್ತದೆ ಆದರೆ ಸಿಟಿಯಲ್ಲಿ ವಾಸಿಸುವ ಜನರು ಪ್ಯಾಕೆಟ್ ಹಾಲನ್ನು ಹೆಚ್ಚಾಗಿ ಖರೀದಿಸುತ್ತಾರೆ. ಆದರೆ ಅವರಿಗೆ ತಿಳಿಯದ ಒಂದು ವಿಚಾರವನ್ನು ಇಲ್ಲಿ ರಿವೀಲ್ ಮಾಡುತ್ತೀವಿ. 

Latest Videos


ಸಾಮಾನ್ಯವಾಗಿ ನಾವು ಅಂಗಡಿಗಳಲ್ಲಿ ಖರೀದಿಸುವ ಪ್ಯಾಕೆಟ್ ಹಾಲುಗಳು ಆಗಲೇ ಪಾಶ್ಚರೀಕರಿಸಿರುತ್ತಾರೆ. ಹಾಲನ್ನು ಇಂತಿಷ್ಟು ಪ್ರಮಾಣದಲ್ಲಿ ಬಿಸಿ ಮಾಡಿ ಅದನ್ನು ಪ್ಯಾಕೆಟ್‌ನಲ್ಲಿ ತುಂಬಿಸಿರುತ್ತಾರೆ. 

ಕೆಲವೊಂದು ಹಾಲಿನ ಪ್ಯಾಕೆಟ್‌ಗಳ ಮೇಲೆ ಯಾವ ಹಾಲನ್ನು ಯಾವುದಕ್ಕೆ ಬಹಳಸಬೇಕು ಎಂದು ಸ್ಪಷ್ಟವಾಗಿ ಬರೆದಿರುತ್ತಾರೆ. ಹಾಲು ತಂದಿದ್ದೀವಿ ಅಂತ ಒಮ್ಮೆ ಬಿಸಿ ಮಾಡಿದರೆ ಸಾಕು..ಪದೇ ಪದೇ ಬಿಡಿ ಮಾಡಿದರೆ ಉಪಯೋಗವಿಲ್ಲ.

ಆಗಲೇ ಬಿಸಿಯಾಗಿ ಪ್ಯಾಕೆಟ್‌ಗೆ ತುಂಬಿರುವ ಹಾಲನ್ನು ಮತ್ತೆ ಉಕ್ಕಿಸಿದರೆ ಅದರಲ್ಲಿ ಇರುವ ಪೌಷ್ಟಿಕಾಂಶ ನಾಶವಾಗುತ್ತದೆ. ಹಾಲಿನಲ್ಲಿ ಇರುವ ವಿಟಮಿಟ್ ಬಿ 12 ನಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ..ಅದನ್ನು ಬಿಸಿ ಮಾಡಿದಷ್ಟು ನಾಶವಾಗುತ್ತದೆ.
 

ಹಸಿ ಹಾಲಿನಲ್ಲಿ ಕ್ರಿಪ್ಟೋಸ್ಟೊರಿಡಿಯಮ್, ಕ್ಯಾಂಪಿಲೋಬ್ಯಾಕ್ಟರ್, ಬ್ರೂಸೆಲ್ಲಾ ಮತ್ತು ಲಿಸ್ಟೇರಿಯಾ ಎಂದು ಹಾನಿಕಾರಿ ಬ್ಯಾಕ್ಟೀರಿಯಾಗಳು ಇರುತ್ತದೆ ಹೀಗಾಗಿ ಬಿಸಿ ಮಾಡಿ ಕುಡಿದರೆ ಇವುಗಳು ನಾಶವಾಗುತ್ತದೆ ಮತ್ತು ಹಾಲು ಸುರಕ್ಷಿತವಾಗುತ್ತದೆ.

ದಿನ ಹಾಲು ಕುಡಿಯುವವರು ತಮ್ಮ ಪ್ಯಾಕೆಟ್ ಹಾಲನ್ನು ಬಿಸಿ ಮಾಡುವ ಅಗತ್ಯ ಇರುವುದಿಲ್ಲ ಬದಲು ಸ್ವಲ್ಪ ಬೆಚ್ಚಗೆ ಮಾಡಿಕೊಂಡು ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. 

click me!