ಇವ್ರ ಮಾತನ್ನು ಸರಿಯಾಗಿ ಕೇಳಿಸ್ಕೊಳಿ... ಈಕೆ ಹಿಜಾಬ್‌ ಧರಿಸ್ತಿರೋದಕ್ಕೆ ನಾನ್‌ ಕಾರಣ ಅಲ್ಲ ಎಂದ ಸನಾ ಪತಿ

By Suchethana D  |  First Published Nov 27, 2024, 6:27 PM IST

ಬಿಕಿನಿ ಬಿಟ್ಟು ಹಿಜಾಬ್‌ ಕೈಹಿಡಿದ ನಟಿ ಸನಾ ಖಾನ್‌ ಈ ನಿರ್ಧಾರಕ್ಕೆ ಬಂದಿರುವ ಹಿಂದೆ ತಮ್ಮಪಾತ್ರ ಇಲ್ಲ ಎಂದು ಪತಿ ಹೇಳಿದ್ದಾರೆ. ಅವರು ಹೀಗೇಕೆ ಹೇಳಿದ್ರು ಕೇಳಿ... 
 


  ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ಹಾಗೂ ಕನ್ನಡದ ಕೂಲ್​ ಸಿನಿಮಾದಲ್ಲಿ ನಟಿಸಿರುವ ನಟಿ ಸನಾ ಖಾನ್ ಬಣ್ಣದ ಲೋಕ ತ್ಯಜಿಸಿ ನಾಲ್ಕು ವರ್ಷಗಳಾಗಿವೆ. ಮಿನಿ ಸ್ಕರ್ಟ್​, ಬಿಕಿನಿ ಎಲ್ಲವನ್ನೂ ಬಿಟ್ಟು ಹಿಜಾಬ್​ ಧರಿಸಿದ್ದ ಬಾಲಿವುಡ್​ ನಟಿ ಸನಾ ಖಾನ್​  2020ರಲ್ಲಿ ಗುಜರಾತ್‌ನ ಅಂಕಲೇಶ್ವರದ ಮುಫ್ತಿ ಅನಾಸ್ ಸೈಯದ್ (Mufti Anas Sayed)ಅವರನ್ನು ವಿವಾಹವಾದರು. ಕಳೆದ ವರ್ಷ ಮೊದಲ ಮಗುವಿಗೆ ಜನ್ಮ ನೀಡಿದ್ದ ಸನಾ, ಈಗ ಎರಡನೆಯ ಬಾರಿ ಗರ್ಭಿಣಿಯಾಗಿದ್ದಾರೆ. ಈ ಬಗ್ಗೆ ಅವರು ಈಚೆಗೆ, ಪೋಸ್ಟ್‌ ಮಾಡಿ ವಿಷಯ ತಿಳಿಸಿದ್ದರು. ಸರ್ವಶಕ್ತನಾದ ಅಲ್ಲಾಹನ ಆಶೀರ್ವಾದದಿಂದ, ನಮ್ಮ ಮೂವರ ಕುಟುಂಬವು ಸಂತೋಷದಿಂದ ನಾಲ್ಕಕ್ಕೆ ಬೆಳೆಯುತ್ತಿದೆ. ಆಶೀರ್ವಾದವು ದಾರಿಯಲ್ಲಿದೆ. ಸೈಯದ್ ತಾರಿಕ್ ಜಮೀಲ್ ಅಣ್ಣನಾಗಲು ಉತ್ಸುಕರಾಗಿದ್ದಾನೆ. ಪ್ರೀತಿಯ ಅಲ್ಲಾ, ನಮ್ಮ ಹೊಸ ಆಶೀರ್ವಾದವನ್ನು ಸ್ವಾಗತಿಸಲು ಮತ್ತು ಪಾಲಿಸಲು ನಾವು ಕಾಯಲು ಸಾಧ್ಯವಿಲ್ಲ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಬರೆದುಕೊಂಡಿದ್ದರು. 

ಆದರೆ ಬಿಕಿನಿಯಿಂದಲೇ ಫೇಮಸ್‌ ಆಗಿದ್ದ ನಟಿ, ಹಿಜಾಬ್‌ ಧರಿಸಿ ಫುಲ್‌ ಕವರ್‍‌ ಮಾಡಿಕೊಂಡಿರುವುದಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಥರಹೇವಾರಿ ರೀತಿಯಲ್ಲಿ ಕಮೆಂಟ್ಸ್‌ ಸುರಿಮಳೆಯಾಗುತ್ತಲೇ ಇದೆ. ಇದೇ ವೇಳೆ ಇದಕ್ಕೆ ಸನಾ ಪತಿಯೂ ಕಾರಣ ಎಂಬ ಅರ್ಥದಲ್ಲಿ ಬರೆಯಲಾಗುತ್ತಿದೆ. ಆದರೆ ನಿಜವಾಗಿಯೂ ಇದಕ್ಕೆ ಕಾರಣ ನಾನಲ್ಲ, ನನ್ನನ್ನು ಆರೋಪಿಯಾಗಿ ಮಾಡ್ಬೇಡಿ ಎಂದು ಮುಫ್ತಿ ಅನಾಸ್ ಸೈಯದ್ ಹೇಳಿದ್ದಾರೆ. ಅಷ್ಟಕ್ಕೂಅವರು ಹೇಳಲು ಕಾರಣವೂ ಇದೆ. ಅದೇನೆಂದ್ರೆ, ಈ ಪತ್ರಕರ್ತ ಫರಿದೂ ಅವರು ಅಚಾನಕ್‌ ಆಗಿ ಈ ದಂಪತಿಯನ್ನು ಮೀಟ್‌ ಮಾಡಿದ್ದಾರೆ. ಫರಿದೂ ಅವರು ಸನಾ ಅವರು ನಟಿಯಾಗಿದ್ದ ಸಂದರ್ಭದಲ್ಲಿ ಮಾಡಿದ್ದ ಸಂದರ್ಶನವೊಂದನ್ನು ಈಗ ನೆನಪಿಸಿಕೊಂಡಿದ್ದಾರೆ. ಆಗ ನಾನು ನಿಮ್ಮ ಸಂದರ್ಶನ ಮಾಡಿದ್ದಾಗ, ನೀವು ನಾನು ಈ ವೇಷವನ್ನೆಲ್ಲಾ ಬಿಟ್ಟು ಹಿಜಾಬ್‌ ಧರಿಸುತ್ತೇನೆ ಎಂದು ಹೇಳಿದ್ರಿ, ನೆನಪಿದ್ಯಾ? ಈಗ ನಿಮ್ಮನ್ನು ಹಿಜಾಬ್‌ನಲ್ಲಿ ನೋಡುತ್ತಿದ್ದೇನೆ ಎಂದಿದ್ದಾರೆ. ಆಗ ಒಹ್ ಹೌದಾ, ನಾನು ಹೇಳಿದ್ದು ಎಂದು ಅಚ್ಚರಿಪಟ್ಟುಕೊಂಡಿದ್ದಾರೆ.

Tap to resize

Latest Videos

ಕನ್ನಡದ 'ಕೂಲ್' ನಟಿ ಮತ್ತೆ ಗರ್ಭಿಣಿ: ಯಾ ಅಲ್ಲಾ.. ಎನ್ನುತ್ತಲೇ ಭಾವುಕ ಪೋಸ್ಟ್‌ ಮಾಡಿದ ಸನಾ

ಆಗ ಮುಫ್ತಿ ಅನಾಸ್ ಸೈಯದ್ ಅವರು, ಇವರ ಮಾತನ್ನು ಕೇಳಿಸ್ಕೊಳಿ, ಹಿಜಾಬ್‌ ಧರಿಸ್ತಿರೋದಕ್ಕೆ ನನ್ನನ್ನು ಆರೋಪಿ ಮಾಡ್ಬೇಡಿ ಎಂದು ತಮಾಷೆಯ ರೂಪದಲ್ಲಿ ಹೇಳಿದ್ದಾರೆ. ಅಷ್ಟಕ್ಕೂ, ಸನಾ ಅವರು, ಮದುವೆಗೂ ಮುನ್ನ ನಟಿ, ಸಿನಿಮಾರಂಗ ತೊರೆಯುವ ನಿರ್ಧಾರದ ಬಗ್ಗೆ ಮಾತನಾಡಿ ಭಾವುಕರಾಗಿದ್ದರು. ಸನಾ ಖಾನ್ (Sana Khan) ಈ ಹಿಂದೆ ಹಿಜಾಬ್ ಧರಿಸಲು ನಿರ್ಧರಿಸಿದ್ದ ಬಗ್ಗೆ ಬಹಿರಂಗ ಪಡಿಸಿ ಕಣ್ಣೀರಿಟ್ಟಿದ್ದರು. ಸಮಾಜ ಸೇವೆ ಮಾಡಲು ಮತ್ತು  ಸೃಷ್ಟಿಕರ್ತನ ಆದೇಶವನ್ನು ಅನುಸರಿಸುವ ಕಾರಣಕ್ಕೆ ಬಣ್ಣದ ಲೋಕ ತೆರೆಯಬೇಕಾಯಿತು ಎಂದು ಹೇಳಿದ್ದರು. ಈ ಬಗ್ಗೆ ವಿಡಿಯೋ ಸಂದರ್ಶನ ನೀಡಿದ್ದ ಸನಾ ಖಾನ್ ಆಧ್ಯಾತ್ಮಿಕ ದಾರಿ ಹಿಡಿಯಲು ಹಿಂದಿನ ಕಾರಣವೇನು ಎಂದು ವಿವರಿಸಿದ್ದರು. ಹೆಸರು, ಖ್ಯಾತಿ, ಹಣ ಬಿಟ್ಟು ಹಿಜಾಬ್ ಧರಿಸಲು ಪ್ರಾರಂಭಿಸಿದ್ದೇಕೆ ಎಂದು ಬಹಿರಂಗ ಪಡಿಸಿದ್ದರು. 'ನನ್ನ ಹಳೆಯ ಜೀವನದಲ್ಲಿ ಸಹಜವಾಗಿ ಎಲ್ಲವೂ ಇತ್ತು. ಹಣ, ಹೆಸರು, ಖ್ಯಾತಿ ಎಲ್ಲಾ ಇತ್ತು. ನಾನು ಏನು ಬೇಕಾದರೂ ಮತ್ತು ಎಲ್ಲವನ್ನೂ ಮಾಡಬಹುದಿತ್ತು. ಆದರೆ ಒಂದು ವಿಷಯ ಮಾತ್ರ ಕಳೆದು ಹೋಗಿತ್ತು ನನ್ನ ಹೃದಯದ ಶಾಂತಿ. ನಾನು ಎಲ್ಲವನ್ನೂ ಹೊಂದಿದ್ದೆ ಆದರೆ ಸಂತೋಷ ಇರಲಿಲ್ಲ,  ಅದು ತುಂಬಾ ಕಠಿಣವಾಗಿತ್ತು ಮತ್ತು ಖಿನ್ನತೆಯ ದಿನಗಳು ಇತ್ತು. ನಾನು ದೇವರ ಸಂದೇಶವನ್ನು ದಿನಗಳು ಇದ್ದವು' ಎಂದು ನಟನೆ ಬಿಟ್ಟು ಹಿಜಾಬ್​ ಧರಿಸುವ ಕುರಿತು ಹೇಳಿಕೊಂಡಿದ್ದರು.

ಅಂದಹಾಗೆ,    ಮುಫ್ತಿ ಅನಾಸ್ ಸೈಯದ್  ಜೊತೆ ಇವರ ಮೊದಲ ಭೇಟಿ 2017ರಲ್ಲಿ ಮೆಕ್ಕಾದಲ್ಲಿ ನಡೆದಿತ್ತು. ಅನಾಸ್ ಸೈಯದ್ ಸೌಂದರ್ಯವರ್ಧಕ, ಪರ್ಸನಲ್ ಕೇರ್ ಲೈನ್ ನ ಸಂಸ್ಥಾಪರಾಗಿದ್ದಾರೆ. ಗರ್ಭಿಣಿಯಾಗಿರುವ ವಿಷಯ ತಿಳಿಸಿದ್ದ ಸನಾ ಖಾನ್​, ಮಗು ಹುಟ್ಟಿದ ಮೇಲೆ ಇದುವರೆಗೆ ಅದರ ಮುಖ ರಿವೀಲ್​ ಮಾಡಿರಲಿಲ್ಲ. ಹಲವು ತಿಂಗಳ ಬಳಿಕ ಮುಖ ರಿವೀಲ್‌ ಮಾಡಿದ್ದರು.   ಅಂದಹಾಗೆ, ಬಾಲಿವುಡ್ (Bollywood) ಸಿನಿಮಾಗಳ ಜೊತೆಗೆ ಸನಾ ಖಾನ್ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ವಿಶೇಷ ಎಂದರೆ ಕನ್ನಡದಲ್ಲಿಯೂ ಅಭಿನಯಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೂಲ್ (Cool) ಸಿನಿಮಾದಲ್ಲಿ ಸನಾ ನಟಿಸಿದ್ದಾರೆ. ಇಷ್ಟೆಲ್ಲಾ ಉತ್ತುಂಗದಲ್ಲಿ ಇರುವಾಗಲೇ ಸಿನಿಮಾ ಬಿಡುವ ನಿರ್ಧಾರ ಮಾಡಿದ್ದು, ಅವರ ಅಭಿಮಾನಿಗಳಿಗೆ ಶಾಕ್​ ಆಗಿತ್ತು. ಆದರೆ ದೃಢ ಸಂಕಲ್ಪದೊಂದಿಗೆ ನಟಿ ಬಣ್ಣದ ಬದುಕಿಗೆ ವಿದಾಯ ಹೇಳಿದ್ದರು.

 

click me!