ಸುಡೋ ಬೇಸಿಗೆಯಿಂದ ಸ್ತನಗಳ ಕೆಳಗೆ ಆಗೋ ದದ್ದಿಗೆ ಇಲ್ಲಿದೆ ಪರಿಹಾರ!

First Published May 10, 2024, 7:54 PM IST

ನಿರಂತರ, ಬೆವರು ಮತ್ತು ತೇವಾಂಶವು ಸ್ತನಗಳ ಕೆಳ ಭಾಗದಲ್ಲಿ ದದ್ದುಗಳ ಸಮಸ್ಯೆ ಹೆಚ್ಚುತ್ತದೆ. ಆದರೆ ಕೆಲವು ಸರಳ ಪರಿಹಾರಗಳ ಮೂಲಕ ಈ ಸಮಸ್ಯೆಯನ್ನು ಪರಿಹರಿಸಬಹುದು.ಅವುಗಳ ಬಗ್ಗೆ ತಿಳಿಯೋಣ. 
 

ತಾಪಮಾನ ವೇಗವಾಗಿ ಏರುತ್ತಿದೆ, ಆದ್ದರಿಂದ ಬೆವರು, ಚರ್ಮದ ದದ್ದು (skin rashes) ಮತ್ತು ತುರಿಕೆಯಂತಹ ಸಮಸ್ಯೆಗಳು ಸಹ ಜನರನ್ನು ಕಾಡುತ್ತಿದೆ. ದೀರ್ಘ ಕಾಲದ ಶಾಖದಿಂದ, ದೇಹದ ಇತರೆ ಭಾಗಗಳಂತೆ ಸ್ತನಗಳ ಕೆಳಗೆ ಕೆಂಪಾಗುವಿಕೆ, ಊತ ಮತ್ತು ದದ್ದು ಹೆಚ್ಚಾಗುತ್ತವೆ. ಅತಿಯಾದ ಬೆವರಿನಿಂದ, ಸ್ತನಗಳ ಕೆಳಗೆ ಸೋಂಕು ಬೆಳೆಯಲು ಪ್ರಾರಂಭಿಸುತ್ತದೆ. ಇದು ಅಂಡರ್ಬೂಬ್ ದದ್ದುಗಳು (underboob rashes), ಬ್ಯಾಕ್ಟೀರಿಯಾದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ, ಜನರು ಈ ಸಮಸ್ಯೆಯನ್ನು ಪರಿಹರಿಸಲು ಔಷಧಿಗಳು ಅಥವಾ ಮುಲಾಮಿನ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಆದರೆ ಸಿಂಪಲ್ ಉಪಾಯಗಳ ಮೂಲಕ ನೀವು ಈ ಸಮಸ್ಯೆ ಬಗೆಹರಿಸಬಹುದು. 
 

ಅಂಡರ್ಬೂಬ್ ದದ್ದು ಸಮಸ್ಯೆ ಏಕೆ ಹೆಚ್ಚುತ್ತದೆ? 
ನಿರಂತರ ಬೆವರು (sweating) ಮತ್ತು ತೇವಾಂಶ ಸ್ತನಗಳ ಕೆಳಗಿನ ದದ್ದಿನ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಶಾಖದಿಂದ ಉಂಟಾದ ದದ್ದು ಸ್ತನಗಳ ಕೆಳಗೆ ಊತ ಮತ್ತು ಗಾಯಗಳಿಗೆ ಕಾರಣವಾಗುತ್ತದೆ. ಬೆವರುವಿಕೆಯ ಹೊರತಾಗಿ, ಹಾರ್ಮೋನುಗಳ ಬದಲಾವಣೆ, ಬೊಜ್ಜು ಮತ್ತು ಮಾಸ್ಟಿಟಿಸ್ ಸಮಸ್ಯೆಗಳು ಸಹ ಸ್ತನಗಳ ಕೆಳಗಿನ ದದ್ದುಗಳಿಗೆ ಮುಖ್ಯ ಕಾರಣವಾಗಿದೆ. ಸ್ತನ್ಯಪಾನ ಮಾಡುವ ಮಹಿಳೆಯರು ಮಾಸ್ಟಿಟಿಸ್‌ಗೆ ಒಳಗಾಗುತ್ತಾರೆ. ಈ ಸಮಸ್ಯೆ ತಪ್ಪಿಸಲು, ಸ್ತನವನ್ನು ಕ್ಲೀನ್ ಆಗಿಟ್ಟುಕೊಳ್ಳುವುದು ತುಂಬಾ ಮುಖ್ಯ. 

ಸ್ತನಗಳ ಕೆಳಗಿನ ದದ್ದುಗಳನ್ನು ತೆಗೆದುಹಾಕಲು ಸುಲಭ ಸೂತ್ರಗಳು
ಕೋಲ್ಡ್ ಕಂಪ್ರೆಶನ್

ತುರಿಕೆ ಮತ್ತು ಬರ್ನಿಂಗ್ ಇದ್ದರೆ , ಅದರಿಂದ ಪರಿಹಾರ ಪಡೆಯಲು ಕೋಲ್ಡ್ ಕಂಪ್ರೆಸ್ ಉತ್ತಮ ಪರಿಹಾರ. ಇದರಿಂದ ಸ್ತನಗಳ ಕೆಳಗೆ ಬೆಳೆಯುತ್ತಿರುವ ದದ್ದು ನಿವಾರಣೆಯಾಗುತ್ತವೆ ಮತ್ತು ಉರಿಯೂತದ ಸಮಸ್ಯೆ ಕಡಿಮೆಯಾಗುತ್ತದೆ. 8 ರಿಂದ 10 ನಿಮಿಷಗಳ ಕಾಲ ಕೋಲ್ಡ್ ಕಂಪ್ರೆಸ್ ಬಳಸುವುದರಿಂದ ಸ್ತನಗಳ ಕೆಳಗೆ ಬೆಳೆಯುತ್ತಿರುವ ಮೊಡವೆಗಳಿಂದ ಪರಿಹಾರ ಸಿಗುತ್ತದೆ.

ಸ್ತನಗಳು ಒದ್ದೆಯಾಗದಂತೆ ರಕ್ಷಿಸಿ
ಸ್ತನಗಳ ಸುತ್ತಲೂ ಬೆಳೆಯುವ ಗುಳ್ಳೆಗಳನ್ನು ತೆಗೆದು ಹಾಕಲು ಅಂಡರ್ ಬೂಬ್ ಕ್ಲೀನಿಂಗ್ ಬಗ್ಗೆ ಕಾಳಜಿ ವಹಿಸಿ. ಸ್ತನಗಳ ಕೆಳಗೆ ದೀರ್ಘಕಾಲದ ತೇವಾಂಶದಿಂದಾಗಿ, ಯೀಸ್ಟ್ ಸೋಂಕು ಮತ್ತು ಕಪ್ಪು ಚರ್ಮದ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಇದಲ್ಲದೆ, ದಿನವಿಡೀ ತುರಿಕೆ ಸಹ ಇರುತ್ತದೆ. ಹಾಗಾಗಿ ಸ್ತನಗಳು ಒದ್ದೆಯಾಗದಂತೆ ರಕ್ಷಿಸಿ. 

ದೀರ್ಘಕಾಲದವರೆಗೆ ಬ್ರಾ ಧರಿಸುವುದನ್ನು ತಪ್ಪಿಸಿ
ದೀರ್ಘಕಾಲದವರೆಗೆ ಬ್ರಾ (Bra) ಧರಿಸುವ ಮಹಿಳೆಯರು ಹೆಚ್ಚಾಗಿ ಸ್ತನಗಳ ಕೆಳಗೆ ದದ್ದುಗಳ ಸಮಸ್ಯೆಯನ್ನು ಎದುರಿಸುತ್ತಾರೆ. ಸ್ತನಗಳ ಕೆಳಗೆ ತೇವಾಂಶ ಸಂಗ್ರಹವಾಗುವುದರಿಂದ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದೀರ್ಘಕಾಲದವರೆಗೆ ಬ್ರಾ ಧರಿಸುವುದನ್ನು ತಪ್ಪಿಸಿ ಮತ್ತು ಅಂಡರ್ಬೂಬ್ ಪ್ರದೇಶವನ್ನು ಸ್ವಚ್ಛವಾಗಿಡಲು ಪ್ರಯತ್ನಿಸಿ.

ಓಟ್ ಮೀಲ್ ಸ್ನಾನ
ಯುಎಸ್ಡಿಎ ಪ್ರಕಾರ, ಎಸ್ಜಿಮಾದಿಂದ ಸುಟ್ಟಗಾಯಗಳವರೆಗಿನ ಚರ್ಮದ ಕಾಯಿಲೆಗಳ ಚಿಕಿತ್ಸೆಯಲ್ಲಿ ಓಟ್ ಮೀಲ್ (oat meal)ಬೆಸ್ಟ್ ಪರಿಹಾರ. ಸ್ತನಗಳ ಕೆಳಗಿನ ತುರಿಕೆಯನ್ನು ತಪ್ಪಿಸಲು, 1 ಕಪ್ ಓಟ್ಸ್ ಪುಡಿಯನ್ನು ಬಾತ್ ಟಬ್ ನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಬ್ಯಾಕ್ಟೀರಿಯಾದ ಸೋಂಕಿನಿಂದ ಪರಿಹಾರ ಸಿಗುತ್ತದೆ. ಇದಲ್ಲದೆ, ಚರ್ಮದ ಮೇಲೆ ಬೆಳೆಯುತ್ತಿರುವ ತುರಿಕೆ ಸಮಸ್ಯೆಯೂ ಪರಿಹಾರವಾಗಲು ಪ್ರಾರಂಭಿಸುತ್ತದೆ.

ತೆಂಗಿನ ಎಣ್ಣೆ
ತೆಂಗಿನ ಎಣ್ಣೆ (coconut oil)ಚರ್ಮದ ಮೇಲಿನ ಶುಷ್ಕತೆ ಮತ್ತು ತುರಿಕೆಯಿಂದ ಪರಿಹಾರ ನೀಡುತ್ತದೆ. ಉರಿಯೂತ ನಿವಾರಕ ಆಗಿರುವ ತೆಂಗಿನ ಎಣ್ಣೆಯನ್ನು ನಿಯಮಿತವಾಗಿ ತುರಿಕೆ ಇದ್ದಲ್ಲಿ ಹಚ್ಚೋದರಿಂದ ಅಲರ್ಜಿಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಸ್ತನಗಳ ಕೆಳಗೆ ತುರಿಕೆ ಸಮಸ್ಯೆಯನ್ನು ಕಡಿಮೆ ಮಾಡಲು, ಸ್ತನಗಳ ಕೆಳಗೆ ನಿಯಮಿತವಾಗಿ ತೆಂಗಿನ ಎಣ್ಣೆಯನ್ನು ಹಚ್ಚಿ.

ಕಾಟನ್ ಬ್ರಾ ಆಯ್ಕೆಮಾಡಿ
ಬೇಸಿಗೆಯಲ್ಲಿ ಸಿಂಥೆಟಿಕ್ ಬ್ರಾ ಧರಿಸುವುದರಿಂದ ಸ್ತನಗಳು ಹೆಚ್ಚು ಒದ್ದೆಯಾಗಿರುತ್ತವೆ. ಇದಲ್ಲದೆ, ಬಿಗಿಯಾದ ಬ್ರಾಗಳು ದದ್ದುಗಳಿಗೆ ಕಾರಣವಾಗುತ್ತವೆ. ಈ ಸಂದರ್ಭದಲ್ಲಿ, ಬ್ರಾ ಬಟ್ಟೆಯು ಉಸಿರಾಡಲು ಸಾಧ್ಯವಾಗುವುದು ಮುಖ್ಯ. ಹಾಗಾಗಿ ಕಾಟನ್ ಬ್ರಾ (Cotton Bra) ಧರಿಸಿ. ಇದರಿಂದ ತುರಿಕೆ, ದದ್ದು ಉಂಟಾಗೋದಿಲ್ಲ. 

click me!