ಕೋರ್ಟ್ ಎದುರು ಮೆಡಿಕಲ್ ರಿಪೋರ್ಟ್.. ದರ್ಶನ್‌ಗೆ ಢವ ಢವ: ಡಾಕ್ಟರ್ಸ್ ವರದಿಯ ಅಸಲಿ ವಿಷ್ಯವೇನು?

Nov 8, 2024, 10:05 AM IST

ದರ್ಶನ್​ಗೆ ಮಧ್ಯಂತರ ಜಾಮೀನು ಕೊಟ್ಟಿದ್ದ ಕೋರ್ಟ್ ಒಂದು ವಾರದ ಒಳಗೆ ಮೆಡಿಕಲ್ ರಿಪೋರ್ಟ್ ಸಲ್ಲಿಸಿ ಅನ್ನೋ ಸೂಚನೆ ಕೊಟ್ಟಿತ್ತು. ಇದೀಗ ದರ್ಶನ್ ಗಿರೋ ಸಮಸ್ಯೆಗಳ ತಪಾಸಣೆ ಮಾಡಿರೋ ವೈದ್ಯರು ಕೋರ್ಟ್​ಗೆ ಮೆಡಿಕಲ್ ರಿಪೋರ್ಟ್​ನ ಸಲ್ಲಿಕೆ ಮಾಡಿದ್ದಾರೆ. ಹಾಗಾದ್ರೆ ಈ ರಿಪೋರ್ಟ್​​ನಲ್ಲಿ ಏನಿದೆ..? ಕೆಡಿ ಭವಿಷ್ಯ ಏನಾಗಲಿದೆ..? ದರ್ಶನ್​ಗೆ ಹೈಕೋರ್ಟ್ ಬೇಲ್ ನಿಡಿರೋದೇ ಮೆಡಿಕಲ್ ಗ್ರೌಂಡ್ಸ್ ಮೇಲೆ. ದರ್ಶನ್ ಬೆನ್ನುನೋವಿನ ಸಮಸ್ಯೆಗೆ ಸರ್ಜರಿ ಆಗಬೇಕು.. ಇಲ್ಲದೇ ಹೋದ್ರೆ ಲಕ್ವಾ ಹೊಡೆಯೋ ಸಾಧ್ಯತೆ ಇದೆ ಅಂತ ನ್ಯಾಯಾದೀಶರ ಮುಂದೆ ವಾದ ಮಾಡಿದ್ದ ವಕೀಲರು, ದರ್ಶನ್​ಗೆ ಬೇಲ್ ಕೊಡಿಸೋದ್ರಲ್ಲಿ ಯಶಸ್ವಿಯಾಗಿದ್ರು. ಈ ಮಧ್ಯಂತರ ಜಾಮೀನು ನೀಡುವ ಮುನ್ನ ಹಲವು ಷರತ್ತುಗಳನ್ನ ಹಾಕಿದ್ದ ಹೈಕೋರ್ಟ್, ಚಿಕಿತ್ಸೆಯ ವಿವರಗಳನ್ನ ಕೋರ್ಟ್​ಗೆ ಸಲ್ಲಿಸಬೇಕು ಅಂತ ಸೂಚನೆ ಕೊಟ್ಟಿತ್ತು. 

ದರ್ಶನ್​ಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಎಂಆರ್​ಐ, ಸಿಟಿ ಸ್ಕ್ಯಾನಿಂಗ್ ಮತ್ತು ಎಕ್ಸ್ ರೇ ಮಾಡಿಸಿದ್ದು, ಅದರ ವಿವರಗಳನ್ನ ವೈದ್ಯರ ತಂಡ ಹೈಕೋರ್ಟ್​ಗೆ ಸಲ್ಲಿಕೆ ಮಾಡಿದೆ. ಒಂದು ವಾರದಲ್ಲಿ ಮೆಡಿಕಲ್ ರಿಪೋರ್ಟ್ ಸಲ್ಲಿಸುವಂತೆ ಕೋರ್ಟ್ ನೀಡಿದ್ದ ಸೂಚನೆಯನ್ನ ಪಾಲಿಸಲಾಗಿದೆ. ಆದ್ರೆ ಮೆಡಿಕಲ್ ರಿಪೋರ್ಟ್ ಸಲ್ಲಿಸಿದ ಬೆನ್ನಲ್ಲೇ ದರ್ಶನ್​ಗೆ ಢವ ಢವ ಶುರುವಾಗಿದೆ. ಮೆಡಿಕಲ್ ವರದಿ ಬಗ್ಗೆ ಪ್ರಾಸಿಕ್ಯೂಶನ್ ನವರು ಏನ್ ಹೇಳ್ತಾರೆ.. ಕೋರ್ಟ್ ಏನು ತೀರ್ಮಾನ ತೆಗೆದುಕೊಳ್ಳುತ್ತೆ ಅನ್ನೋ ಬಗ್ಗೆ ದಾಸನಿಗೆ ಟೆನ್ಶನ್ ಶುರುವಾಗಿದೆ. ದರ್ಶನ್​ಗೆ 6 ವಾರಗಳ ಕಾಲ ಬೇಲ್ ಸಿಕ್ಕಿದ್ದು ಅದ್ರಲ್ಲಿ ಒಂದು ವಾರ ಈಗಾಗ್ಲೇ ಕಳೆದಾಯ್ತು. ಇನ್ನುಳಿದ 5 ವಾರಗಳಲ್ಲಿ ದರ್ಶನ್ ಟ್ರೀಟ್​​ಮೆಂಟ್ ಪಡೆದುಕೊಂಡು ಜೈಲಿಗೆ ಮರಳಬೇಕಿದೆ. ಅಲ್ಲಿಗೆ ಡಾಕ್ಟರ್ಸ್ ಏನು ರಿಪೋರ್ಟ್ ಕೊಟ್ಟಿದ್ದಾರೆ ಅನ್ನೋದ್ರ ಮೇಲೆ ದರ್ಶನ್ ಭವಿಷ್ಯ ನಿಂತುಕೊಂಡಿದೆ. 

ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್ ಬೆನ್ನುಹುರಿಯ ನೋವಿನ ಮೂಲ ಮತ್ತು ಪರಿಹಾರ ಕಂಡುಹಿಡಿಯೋದಕ್ಕೆ ಎಂ.ಆರ್.ಐ ಮತ್ತು ಸಿಟಿ ಸ್ಕ್ಯಾನಿಂಗ್ ಮಾಡಲಾಗಿದೆ. ಜೊತೆಗೆ ಲಿವರ್ ಫಕ್ಷನಿಂಗ್ ಟೆಸ್ಟ್, ಬ್ಲಡ್ ಟೆಸ್ಟ್, ಬಿಪಿ, ಇಸಿಜಿ, ಎಕ್ಸ್ ರೇ ಸೇರಿದಂತೆ ದರ್ಶನ್ ಗೆ ಹತ್ತಕ್ಕೂ ಅಧಿಕ ವೈದ್ಯಕೀಯ ಪರೀಕ್ಷೆಗಳನ್ನ  ಮಾಡಿಸಲಾಗಿದೆ. ಖ್ಯಾತ ನರರೋಗ ತಜ್ಞ ನವೀನ್ ಬಿಜಿಎಸ್​ನಲ್ಲಿರೋ ತಜ್ಞ ವೈದ್ಯರ ಜೊತೆಗೆ ಈ ರಿಪೋರ್ಟ್​​ಗಳನ್ನಿಟ್ಟುಕೊಂಡು ಚರ್ಚೆ ಮಾಡಿದ್ದಾರೆ. ಇಂಥಾ ಕೇಸ್​​ನಲ್ಲಿ ರೋಗಿಗೆ ಯಾವ ರೀತಿಯ ಟ್ರೀಟ್​ಮೆಂಟ್ ನೀಡೋದು ಸೂಕ್ತ ಅಂತ ಬೇರೆ ಬೇರೆ ವೈದ್ಯರ ಸಲಹೆ ಸೂಚನೆ ಪಡೆದುಕೊಂಡಿದ್ದಾರೆ. ಇದೆಲ್ಲದರ ಪೂರ್ಣ ವರದಿಯನ್ನ ಕೋರ್ಟ್​ಗೆ ಸಲ್ಲಿಕೆ ಮಾಡಲಾಗಿದೆ.