5 ಗ್ಯಾರಂಟಿ ಕೊಡಿ ಎಂದು ಜನ ಕೇಳಿದ್ರಾ: ನಿಖಿಲ್ ಕುಮಾರಸ್ವಾಮಿ ಪ್ರಶ್ನೆ

By Kannadaprabha News  |  First Published Nov 9, 2024, 6:54 AM IST

ಐದು ಗ್ಯಾರಂಟಿ ಕೊಡಿ ಎಂದು ಜನ ಕೇಳಿದ್ದರಾ? ಹಾಲಿನ ಬೆಂಬಲ ಬೆಲೆ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದ್ದಾರೆ. ಕಾಂಗ್ರೆಸ್ ನಂಬಿದರೆ ಏನಾಗುತ್ತೆ ಅನ್ನೋದಕ್ಕೆ ಜನರಿಗೆ ಇದೊಂದು ಅದ್ಭುತ ಪಾಠವಾಗಿದೆ ಎಂದು ಚನ್ನಪಟ್ಟಣ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು. 


ಚನ್ನಪಟ್ಟಣ (ನ.09): ಐದು ಗ್ಯಾರಂಟಿ ಕೊಡಿ ಎಂದು ಜನ ಕೇಳಿದ್ದರಾ? ಹಾಲಿನ ಬೆಂಬಲ ಬೆಲೆ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದ್ದಾರೆ. ಕಾಂಗ್ರೆಸ್ ನಂಬಿದರೆ ಏನಾಗುತ್ತೆ ಅನ್ನೋದಕ್ಕೆ ಜನರಿಗೆ ಇದೊಂದು ಅದ್ಭುತ ಪಾಠವಾಗಿದೆ ಎಂದು ಚನ್ನಪಟ್ಟಣ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು. ಕ್ಷೇತ್ರದ ಕೂಡ್ಲೂರು ಹಾಗೂ ಮಳೂರು ಗ್ರಾಮಗಳಲ್ಲಿ ಪ್ರಚಾರದ ವೇಳೆ ಮಾತನಾಡಿ, ಎರಡು ಚುನಾವಣೆಯಲ್ಲಿ ನನ್ನನ್ನು ಕುತಂತ್ರದಿಂದ ಸೋಲಿಸಿದರು. ರಾಮನಗರದಲ್ಲಿ ಗಿಫ್ಟ್ ಕೊಟ್ಟು ಸೋಲಿಸಿದರು. 

ಈಗಲೂ ರಾತ್ರಿ ನಾಲ್ಕು ಗಂಟೆಗೆ ಬಂದು ಕೂಪನ್ ಕೊಡಬಹುದು. ರೇಷನ್ ಕಾರ್ಡ್ ಕೂಪನ್ ಕೊಡ್ತಾರೆ, ಇದು ಕಾಂಗ್ರೆಸ್ ನಾಯಕರ ಕೊಡುಗೆಯೇ ಎಂದು ವಾಗ್ದಾಳಿ ನಡೆಸಿದರು. ಎಚ್‌.ಡಿ.ಕುಮಾರಸ್ವಾಮಿ ಅವರು ಚನ್ನಪಟ್ಟಣ ಅಭಿವೃದ್ಧಿಗೆ 1.5 ಸಾವಿರ ಕೋಟಿ ರು. ಅನುದಾನ ತಂದಿದ್ದಾರೆ. ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನ ಮಾಡಿದ್ದಾರೆ. 1.5 ಕೋಟಿ ರು. ವೆಚ್ಚದಲ್ಲಿ ಮೊದಲನೇ ಹಂತದಲ್ಲಿ ರೇಷ್ಮೆ ಮಾರುಕಟ್ಟೆ ಮಾಡೋದಕ್ಕೆ ಕುಮಾರಸ್ವಾಮಿ ಅವರ ಕೊಡುಗೆ ಇದೆ ಎಂದು ತಿಳಿಸಿದರು.

Tap to resize

Latest Videos

undefined

ಹಿಂದೆ ಡಿಕೆಸು ಅವರೂ ಕಣ್ಣೀರು ಹಾಕಿದ್ರು, ನಾವು ಕೇಳಿದ್ವಾ?: ಚುನಾವಣಾ ಪ್ರಚಾರ ವೇಳೆ ನಾನು ಕಣ್ಣೀರು ಹಾಕಿರುವುದು ಉದ್ದೇಶಪೂರ್ವಕವಾಗಿ ಅಲ್ಲ, ನಾನಷ್ಟೇ ಅಲ್ಲ ಸಾಕಷ್ಟು ಜನ ಸಾರ್ವಜನಿಕ ವೇದಿಕೆಯಲ್ಲಿ ಕಣ್ಣೀರು ಹಾಕಿದ್ದಾರೆ. ಕೆಲ ಸನ್ನಿವೇಶಗಳು ಕಣ್ಣಲ್ಲಿ ನೀರು ತರಿಸುತ್ತೆ. ಕಳೆದ ಚುನಾವಣೆಯಲ್ಲಿ ಸಂಸದ ಡಿ.ಕೆ ಸುರೇಶ್ ಅವರೂ ಕಣ್ಣೀರು ಹಾಕಿದ್ದರು, ಅದನ್ನು ನಾವು ಪ್ರಶ್ನೆ ಮಾಡಿದ್ವಾ? ಎಂದು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದರು. ತಾಲೂಕಿನ ಹುಣಸನಹಳ್ಳಿಯಲ್ಲಿ ಗುರುವಾರ ಪ್ರಚಾರದ ವೇಳೆ ಸುದ್ದಿಗಾರರ ಜತೆ ಮಾತಾನಾಡಿ, ನಾನು ಕಣ್ಣೀರು ಹಾಕಿ ಮತ ಪಡೆಯಲು ಬಂದಿಲ್ಲ, ಅಭಿವೃದ್ಧಿಗಾಗಿ ಇಲ್ಲಿಗೆ ಬಂದಿದ್ದೇನೆ. ಯುವಕರಿಗೆ ಉದ್ಯೋಗ ಕೊಡಿಸುವ ಮತ್ತು ಚನ್ನಪಟ್ಟಣ ತಾಲೂಕಿನ ಕೆರೆ ತುಂಬಿಸುವ ದೊಡ್ಡ ಜವಾಬ್ದಾರಿ ಇದೆ. ಹೀಗಾಗಿ ನನಗೆ ಈ ಬಾರಿ ಅವಕಾಶ ಕೋಡಿ ಎಂದು ಕೇಳುತ್ತಿದ್ದೇನೆ ಎಂದರು.

ಶಾಲೆಗೆ 25 ಎಕರೆ ಕೊಟ್ಟಿದ್ದೇನೆ, ಎಚ್‌ಡಿಕೆ 1 ಗುಂಟೆ ಏನಾದರೂ ದಾನ ಮಾಡಿದ್ದಾರಾ?: ಡಿಕೆಶಿ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೂ ಮತ್ತು ರಾಮನಗರ ಜಿಲ್ಲೆಗೆ ಅವಿನೋಭಾವ ಸಂಬಂಧ ಇದೆ. ದೇವೇಗೌಡರು ರಾಮನಗರ ಜಿಲ್ಲೆಗೆ ಪದಾರ್ಪಣೆ ಮಾಡಿದ್ದು ೧೯೮೩ರಲ್ಲಿ, ನಾನು ಜನಿಸಿದ್ದು ೧೯೮೮ ರಲ್ಲಿ. ಅಂದರೆ ದೇವೇಗೌಡರ ಮತ್ತು ರಾಮನಗರ ಜಿಲ್ಲೆಯ ಸಂಬಂಧ ನಾನು ಹುಟ್ಟುವುದಕ್ಕೂ ಮೊದಲೇ ಇದೆ ಎಂದರು. ಆತ್ಮ ವಿಶ್ವಾಸ ಹೇಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆತ್ಮ ವಿಶ್ವಾಸ ಇದೆ, ಚುನಾವಣೆಗೆ ಇಳಿದಿದೀವಿ ಎರಡು ಪಕ್ಷದ ಕಾರ್ಯಕರ್ತರುಗಳು ನನಗೆ ಧೈರ್ಯ ತುಂಬಿಸುತ್ತಿದ್ದಾರೆ. ಚನ್ನಪಟ್ಟಣ ತಾಲೂಕಿನ ಹೆಣ್ಣು ಮಕ್ಕಳು, ಯುವಕರು, ಹಿರಿಯರ ಆಶೀರ್ವಾದ ಮಾರ್ಗದರ್ಶನದಂದ ನನಗೆ ಆತ್ಮ ಧೈರ್ಯ ಸಿಕ್ಕಿದೆ ಎಂದರು.

click me!