ಗಂಭೀರ ಕಾಯಿಲೆಯ ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ಅರ್ಜುನ್​ ಕಪೂರ್​! ಮಲೈಕಾ ಬಿಡಲು ಇದೇ ಕಾರಣನಾ?

By Suchethana D  |  First Published Nov 7, 2024, 9:29 PM IST

ನಟಿ ಮಲೈಕಾ ಅರೋರಾ ಅವರಿಂದ ದೂರವಾದ ಬೆನ್ನಲ್ಲೇ ತಮಗಿರುವ  ಕಾಯಿಲೆ ಬಗ್ಗೆ  ರಿವೀಲ್​ ಮಾಡಿದ್ದಾರೆ ನಟ ಅರ್ಜುನ್​ ಕಪೂರ್​! ಮಲೈಕಾ ಬಿಡಲು ಇದೇ ಕಾರಣನಾ? 
 


ಸದ್ಯ ಬಾಲಿವುಡ್​ನಲ್ಲಿ ಹಾಟ್​ ಟಾಪಿಕ್​ಗಳಲ್ಲಿ ಒಂದಾಗಿರುವುದು ನಟರಾದ ಮಲೈಕಾ ಅರೋರಾ ಮತ್ತು ಅರ್ಜುನ್​ ಕಪೂರ್​ ಬ್ರೇಕಪ್​ ಕುರಿತು. ದಶಕದಿಂದ ರಿಲೇಷನ್​ನಲ್ಲಿದ್ದ ಈ ನಟರು ಈಗ ಬ್ರೇಕಪ್​ ಆಗಿರುವುದು ಕನ್​ಫರ್ಮ್​ ಆಗಿದೆ. ಇದಾಗಲೇ ಅರ್ಜುನ್​ ಕಪೂರ್​ ತಾವು ಸಿಂಗಲ್​ ಎಂದು ಹೇಳಿದ್ದಾರೆ. ಹತ್ತು ವರ್ಷ ದೊಡ್ಡವಳಾಗಿರುವ ಮಲೈಕಾ ಜೊತೆ ದಶಕದವರೆಗೆ ಲಿವ್​ ಇನ್​ ರಿಲೇಷನ್​ನಲ್ಲಿದ್ದ ಅರ್ಜುನ್​ ಇದೀಗ ತಮಗಿರುವ ಗಂಭೀರ ಕಾಯಿಲೆಯ ಬಗ್ಗೆ ಹೇಳಿಕೊಂಡಿದ್ದಾರೆ! ಹೌದು. 'ಸಿಂಗಮ್ ಎಗೇನ್' ಚಿತ್ರದಲ್ಲಿ ಅರ್ಜುನ್ ಕಪೂರ್ ಖಳನಾಯಕ ಡೇಂಜರ್ ಲಂಕಾ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರ ಬಗ್ಗೆಯೂ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಬಾಕ್ಸ್ ಆಫೀಸ್ ನಲ್ಲೂ ಚಿತ್ರ ಭರ್ಜರಿ ಗಳಿಕೆ ಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅರ್ಜುನ್ ಕಪೂರ್ ತಮ್ಮ ವೈಯಕ್ತಿಕ ಜೀವನದ ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ತೂಕ ಹೆಚ್ಚಾಗಲು ಕೂ ಇದೇ ಕಾರಣವೆಂದು ಅವರು ತಿಳಿಸಿದ್ದಾರೆ. 

 
'ಹಾಲಿವುಡ್ ರಿಪೋರ್ಟರ್ ಇಂಡಿಯಾ'ಗೆ ನೀಡಿದ ಸಂದರ್ಶನದಲ್ಲಿ ಅರ್ಜುನ್ ಕಪೂರ್ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. ಅಲ್ಲಿ ಅವರು ಕಾಯಿಲೆ ಬಗ್ಗೆ ಮಾತನಾಡಿದ್ದಾರೆ.  ಖಿನ್ನತೆಯಿಂದ ಬಳಲುತ್ತಿರುವ ತಾವು ಹಶಿಮೊಟೊ ಎಂಬ ಕಾಯಿಲೆಯಿಂದಲೂ ಬಳಲುತ್ತಿರುವುದಾಗಿ ಹೇಳಿ ಕೊಂಡಿದ್ದಾರೆ. ಇದು ಥೈರಾಯ್ಡ್ ಕಾಯಿಲೆ ಎಂದು ವಿಶ್ಲೇಷಿಸಿದ್ದಾರೆ.  ಇದರಲ್ಲಿ ತೂಕವೂ ಹೆಚ್ಚುತ್ತದೆ. ಇದರಿಂದ ನನ್ನ ದೇಹವೂ ಸಾಕಷ್ಟು ತೊಂದರೆ ಎದುರಿಸುತ್ತಿದೆ. ನನಗೆ 30 ವರ್ಷದವನಿದ್ದಾಗ ಈ ಕಾಯಿಲೆ ಬಂದಿತ್ತು. ನನ್ನ ತಾಯಿ ಮೋನಾ ಕಪೂರ್ ಅವರಿಗೂ ಈ ಕಾಯಿಲೆ ಇತ್ತು ಮತ್ತು ಅವರ ಸಹೋದರಿ ಅಂಶುಲಾ ಕಪೂರ್ ಅವರಿಗೂ ಇದೆ ಎಂದು ಅವರು ಬಹಿರಂಗಪಡಿಸಿದ್ದಾರೆ. 

Tap to resize

Latest Videos

undefined

ಘಟಾನುಘಟಿ ಪೊಲೀಸರೂ ಕೈಚೆಲ್ಲಿ ಕೂತಿದ್ದ ಕೊಲೆ ಪ್ರಕರಣ ಬೇಧಿಸಿದ ನೊಣಗಳು! ವಿಚಿತ್ರ ಸ್ಟೋರಿ ಇಲ್ಲಿದೆ...

ಇಷ್ಟೇ ಅಲ್ಲದೇ ತಾವು ಖಿನ್ನತೆಯಿಂದ ಬಳಲುತ್ತಿರುವ ಬಗ್ಗೆ ನಟ ತಿಳಿಸಿದ್ದಾರೆ.  ಆ್ಯಕ್ಷನ್ ಚಿತ್ರದ ಚಿತ್ರೀಕರಣದಲ್ಲಿದ್ದಾಗ,  ಸೌಮ್ಯ ಖಿನ್ನತೆಯಿಂದ ಬಳಲುತ್ತಿದ್ದೆ. ಇದರಿಂದಾಗಿ  ಚಿಕಿತ್ಸೆಗೂ ಒಳಗಾಗಬೇಕಾಯಿತು. ವೈದ್ಯರ ಬಳಿ ಹೋಗಿ ಖಿನ್ನತೆಯಿಂದ ಹೊರಬರಲು ಶ್ರಮಿಸಿದೆ ಎಂದಿದ್ದಾರೆ.  ಖಿನ್ನತೆಗೆ ಥೆರಪಿ ತೆಗೆದುಕೊಳ್ಳುವ ಪ್ರಕ್ರಿಯೆಯು ಕಳೆದ ವರ್ಷ ಪ್ರಾರಂಭವಾಯಿತು ಎಂದು  ಹೇಳಿದ್ದಾರೆ.  

'ನಾನು ಖಿನ್ನತೆಗೆ ಒಳಗಾಗಿದ್ದೇನೆ ಎಂದು ನನಗೆ ತಿಳಿದಿರಲಿಲ್ಲ. ಏನೋ ಸರಿಯಾಗಿ ನಡೆಯುತ್ತಿಲ್ಲ ಎಂದು ನನಗೆ ಅರ್ಥವಾಗಲಿಲ್ಲ. ನಾನು ಎಂದಿಗೂ ನಕಾರಾತ್ಮಕ ವ್ಯಕ್ತಿಯಾಗಿರಲಿಲ್ಲ. ಆದರೆ ಆ ಸಮಯದಲ್ಲಿ ನಾನು ತುಂಬಾ ನಕಾರಾತ್ಮಕವಾಗಿ ಯೋಚಿಸುತ್ತಿದ್ದೆ. ಬೇರೆಯವರು ಕೆಲಸ ಮಾಡುವುದನ್ನು ಕಂಡಾಗ ನನಗೆ ಈ ಕೆಲಸ ಮಾಡಲು ಆಗುವುದಿಲ್ಲ ಎಂದು ಅನಿಸುತ್ತಿತ್ತು. ನನಗೆ ಅವಕಾಶ ಸಿಗುತ್ತದೆಯೇ? ನಂತರ ಏನು ನಡೆಯುತ್ತಿದೆ ಎಂದು ನನಗೆ ಅರ್ಥವಾಗದಿದ್ದಾಗ, ನಾನು ವೈದ್ಯರ ಸಹಾಯವನ್ನು ಕೇಳಿದೆ. ನಾನು ಚಿಕಿತ್ಸಕನ ಬಳಿಗೆ ಹೋದೆ. ಆಗ ನನಗೆ ಲಘು ಖಿನ್ನತೆ ಇದೆ ಎಂದು ತಿಳಿಯಿತು. ಅದಕ್ಕಾಗಿ ಟ್ರೀಟ್​ಮೆಂಟ್​ ಪಡೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಇವೆಲ್ಲಾ ಕಾರಣಗಳಿಂದ ಮಲೈಕಾ ಇವರನ್ನು ಬಿಟ್ಟು ಹೋದರೋ ಅಥವಾಇಬ್ಬರ ನಡುವೆ ಇನ್ನೇನು ಆಯಿತೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

ಎಲ್ಲಿಂದಲೋ ಬಂದಳು, ಮದುಮಕ್ಕಳಿಗೆ ಆಶೀರ್ವದಿಸಿ ಮಾಯವಾದಳು! ಬೆಂಗಳೂರಿನ ಕುತೂಹಲದ ಘಟನೆ ವಿಡಿಯೋ ವೈರಲ್‌

click me!