ಸೀರೆ, ಕುರ್ತಾದಿಂದ ಬರುತ್ತಿದೆ ಪೆಟಿ​ಕೋಟ್​ ಕ್ಯಾನ್ಸರ್​! ಕಂಡುಹಿಡಿಯೋದು ಹೇಗೆ? ವೈದ್ಯರ ಸಲಹೆ ಕೇಳಿ

By Suchethana D  |  First Published Nov 7, 2024, 11:14 PM IST

ಸೀರೆ ಮತ್ತು ಕುರ್ತಾ ಧರಿಸುವ ಸಂದರ್ಭದಲ್ಲಿ ಸೊಂಟದ ಸುತ್ತಲೂ ಬಿಗಿದುಕೊಳ್ಳುವ ದಾರದಿಂದ ಪೆಟಿಕೋಟ್​ ಕ್ಯಾನ್ಸರ್​ ಬರುತ್ತಿದೆ. ಇಲ್ಲಿದೆ ವೈದ್ಯರ ಎಚ್ಚರಿಕೆ! 
 


ಇಂದು ಕ್ಯಾನ್ಸರ್​ ಎನ್ನುವುದು ಹಲವರ ಬಾಳನ್ನು ಕಿತ್ತು ತಿನ್ನುತ್ತಿವೆ. ಅಪಾಯಕಾರಿ ಕ್ಯಾನ್ಸರ್​ಗಳು ಹೇಗೆಲ್ಲಾ ಬರುತ್ತಿವೆ ಎಂದು ಹೇಳುವುದೇ ಕಷ್ಟವಾದಂಥ ಸ್ಥಿತಿ ಇದೆ. ಬೇರೆ ಬೇರೆ ರೀತಿಯ ಕ್ಯಾನ್ಸರ್​ಗಳು ಇವೆ. ಅದರಲ್ಲಿ ಮಹಿಳೆಯರನ್ನು ಕಾಡುವ ಕ್ಯಾನ್ಸರ್​ಗಳಲ್ಲಿ ಅತ್ಯಂತ ಮುಖ್ಯವಾದದ್ದು ಸ್ತನ, ಗರ್ಭಕೋಶದ ಕ್ಯಾನ್ಸರ್​, ಯೋನಿ, ಅಂಡಾಶಯದ ಕ್ಯಾನ್ಸರ್​ಗಳು. ಆದರೆ ಇದೀಗ ಎರಡು ಪ್ರಕರಣಗಳಲ್ಲಿ ಪೆಟಿಕೋಟ್​ ಕ್ಯಾನ್ಸರ್​ ಕಂಡುಹಿಡಿಯಲಾಗಿದೆ! ಪ್ರತಿನಿತ್ಯ ಸೀರೆ ಉಡುವವರಿಗೆ ಈ ಕ್ಯಾನ್ಸರ್​ ಬಂದಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ.  ವಾರ್ಧಾದ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಬಿಹಾರದ ಮಧುಬನಿ ವೈದ್ಯಕೀಯ ಕಾಲೇಜಿನ ವೈದ್ಯರು ನಡೆಸಿದ ಇತ್ತೀಚಿನ ಸಂಶೋಧನೆಯ ಪ್ರಕಾರ, ಪ್ರತಿನಿತ್ಯ ಸೀರೆ ಧರಿಸುವ ಮಹಿಳೆಯರು ಇದರಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

ಇದಕ್ಕೆ ಕಾರಣ, ಸೀರೆ ಧರಿಸುವಾಗ ಒಳಗಡೆ ಲಂಗ ಅಂದರೆ ಪೆಟಿಕೋಟ್​ ಹಾಕುವುದು ಮಾಮೂಲು. ಅದಕ್ಕೆ ಕಟ್ಟಿರುವ ದಾರವು ಅಪಾಯವನ್ನು ತಂದೊಡ್ಡುತ್ತಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಅಧ್ಯಯನದಲ್ಲಿ ಸೀರೆಯ ಬಗ್ಗೆ ಮಾತ್ರ ಉಲ್ಲೇಖವಾಗಿದ್ದರೂ, ಚೂಡಿದಾರ್​, ಕುರ್ತಾ ಹಾಕುವವರೂ ಇದೇ ರೀತಿ ದಾರವನ್ನು ಬಿಗಿದುಕೊಳ್ಳಲೇಬೇಕಾಗುತ್ತದೆ. ಇದನ್ನು ಬಿಗಿಯಾಗಿ ಕಟ್ಟುವುದರಿಂದ  ಕ್ಯಾನ್ಸರ್ ಬರಬಹುದು ಎಂದು ಎಚ್ಚರಿಕೆ ನಿಡಿದ್ದಾರೆ.  ಪೆಟಿಕೋಟ್ ಅಥವಾ ಪ್ಯಾಂಟ್​ ಅನ್ನು ತುಂಬಾ ಬಿಗಿಯಾಗಿ ಕಟ್ಟಿದ ಸಂದರ್ಭದಲ್ಲಿ ಆ ಹಗ್ಗವು ಚರ್ಮಕ್ಕೆ ಅಂಟಿಕೊಂಡಿರುತ್ತದೆ. ಸೀರೆ ಜಾರಿ ಹೋಗಬಾರದು ಎನ್ನುವ ಕಾರಣಕ್ಕೆ ಸಾಮಾನ್ಯವಾಗಿ ಬಿಗಿಯಾಗಿ ಕಟ್ಟಲಾಗುತ್ತದೆ. ಪ್ರತಿ ನಿತ್ಯವೂ ಸೀರೆ ಉಡುವವರು ಹೀಗೆ ಬಿಗಿಯಾಗಿ ಕಟ್ಟುವ ಹಿನ್ನೆಲೆಯಲ್ಲಿ,  ಚರ್ಮವು ಕೆಂಪಾಗುತ್ತದೆ. ನಮ್ಮ ಅರಿವಿಗೆ ಬಾರದೇ ಅದು  ಊದಿಕೊಳ್ಳುತ್ತದೆ. ಇದೇ ನಂತರ ಹುಣ್ಣುಗಳಾಗಿ  ಕ್ಯಾನ್ಸರ್‌‌ಗೆ ಕಾರಣವಾಗಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

Latest Videos

ತೆಳ್ಳಗಾಗಲು ಹರ್ಬಲ್​ ಹೆಸರಿನ ಜ್ಯೂಸ್ ಕುಡಿತಿದ್ದೀರಾ? ಕಿಡ್ನಿ-ಲೀವರ್​ ದಾನಿಗಳನ್ನು ಈಗ್ಲೇ ಹುಡುಕಿಕೊಳ್ಳಿ! ವೈದ್ಯೆ ಹೇಳಿದ್ದೇನು?
 
ಆರಂಭದಲ್ಲಿ ಮಹಿಳೆಯರಲ್ಲಿ ಕಂಡು ಬಂದ ಈ ಕ್ಯಾನ್ಸರ್​ಗೆ ಸೀರೆ ಕಾರಣ ಎಂದು ತಿಳಿದುಕೊಳ್ಳಲಾಗಿತ್ತು. ಆದರೆ ಬಳಿಕ ಇದಕ್ಕೆ ಕಾರಣ, ಲಂಗ ಎನ್ನುವುದು ತಿಳಿದು ಬಂದಿರುವ ಹಿನ್ನೆಲೆಯಲ್ಲಿ ಪೆಟಿಕೋಟ್​ ಕ್ಯಾನ್ಸರ್​ ಎಂದು ಹೇಳಲಾಗಿದೆ.   70 ವರ್ಷದ ಮಹಿಳೆಯೊಬ್ಬರಿಗೆ ಇದು ಕಾಣಿಸಿಕೊಂಡಿದೆ. ಹೊಟ್ಟೆ ಸುತ್ತಲೂ ಹುಣ್ಣು ಕಾಣಿಸಿಕೊಂಡಿದ್ದು 18 ತಿಂಗಳು ಕಳೆದರೂ ಅದು ಕಡಿಮೆಯಾಗಿರಲಿಲ್ಲ. ಬಳಿಕ ಇದನ್ನು  ಮಾರ್ಜೋಲಿನ್ ಅಲ್ಸರ್ ಎಂಬ ಚರ್ಮದ ಕ್ಯಾನ್ಸರ್ ಎನ್ನುವುದು ತಿಳಿಯಿತು. ಬಳಿಕ ಇನ್ನೋರ್ವ ಮಹಿಳೆಗೂ ಇದು ಪತ್ತೆಯಾಗಿದೆ.  ವೈದ್ಯರು ಹೇಳುವ ಪ್ರಕಾರ, ಪೆಟಿಕೋಟ್ ಅನ್ನು ತುಂಬಾ ಬಿಗಿಯಾಗಿ ಕಟ್ಟುವುದು ಹೊಟ್ಟೆ ಮತ್ತು ಸೊಂಟದ ಮೇಲೆ ನಿರಂತರ ಒತ್ತಡ ಉಂಡಾಗುತ್ತದೆ. ಇದು ಘರ್ಷಣೆಯಾಗಿ ಚರ್ಮವನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ಗಾಯಗಳು ಅಥವಾ ಹುಣ್ಣು ಆಗುತ್ತದೆ.  ಚಿಕಿತ್ಸೆ ನೀಡದೆ ಹಾಗೇ ಬಿಟ್ಟರೆ ಕ್ಯಾನ್ಸರ್ ಆಗಿ ಪರಿವರ್ತನೆಯಾಗುವ ಅಪಾಯವಿದೆ ಎಂದಿದ್ದಾರೆ.

ಈ ರೀತಿ ಹುಣ್ಣು, ಗಾಯಗಳಾದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಎಂದು ಸಲಹೆ ನೀಡಲಾಗಿದೆ. ಪ್ರತಿನಿತ್ಯ ಸೀರೆ ಉಡುವವರು ಅಥವಾ ದಾರ ಇರುವ ಲಂಗ ಬಳಸುವವರು ಇದರ ಬದಲು ಸಾಧ್ಯವಾದಷ್ಟು ಎಲಾಸ್ಟಿಕ್​ ಇರುವ ಲಂಗ ಬಳಸುವಂತೆ ಸಲಹೆ ನೀಡಲಾಗಿದೆ. ಇಲ್ಲದೇ ಹೋದರೆ, ಚರ್ಮದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು  ಸಡಿಲವಾದ ಸ್ಕರ್ಟ್‌‌ಗಳನ್ನು ಧರಿಸುವಂತೆ ವೈದ್ಯರು ಸೂಚಿಸಿದ್ದಾರೆ.  ಅದೇ ರೀತಿ, ಸೊಂಟದ ಸುತ್ತ ವಾರ, ತಿಂಗಳುಗಳವರೆಗೆ ವಾಸಿಯಾಗದ ಹುಣ್ಣು ಇದ್ದರೆ ಕೂಡಲೇ ಪರೀಕ್ಷೆ ಮಾಡಿಕೊಳ್ಳುವಂತೆ ಹೇಳಲಾಗಿದೆ.    

ಉರಿ ಮೂತ್ರಕ್ಕೆ ಐದೇ ನಿಮಿಷಗಳಲ್ಲಿ ಪರಿಹಾರ: ಸದ್ಗುರು ಜಗ್ಗಿ ವಾಸುದೇವ ಟಿಪ್ಸ್​ ಕೇಳಿ...

click me!