ಗುರು-ಶಿಷ್ಯರ ರಣಕಾಳಗಕ್ಕೆ ಸಾಕ್ಷಿಯಾದ ಚನ್ನಪಟ್ಟಣ; ಗೌಡರ ಸೇಡು.. ಸಿದ್ದು ಜಿದ್ದು.. ಧಗಧಗಿಸಿದ ದುಷ್ಮನಿ..!

Nov 8, 2024, 6:16 PM IST

ಅವರಿಬ್ಬರೂ ರಾಜ್ಯ ರಾಜಕಾರಣ ದೈತ್ಯ ಶಕ್ತಿಗಳು.. ಆ ಶಕ್ತಿಗಳೆರಡು ರಣರಂಗದಲ್ಲಿ ಮುಖಾಮುಖಿಯಾದರೆ ಅಲ್ಲಿ ನಡೆಯೋದು ಬೆಂಕಿಯುದ್ಧ. ಅಂಥಾ ಒಂದು ಅಗ್ನಿಕಾಳಗಕ್ಕೆ ಸಾಕ್ಷಿಯಾಗಿದೆ ಚನ್ನಪಟ್ಟಣ ರಣರಂಗ.. ಗುರು-ಶಿಷ್ಯರ ಕುರುಕ್ಷೇತ್ರದಲ್ಲಿ ಧಗಧಗಿಸಿದ ರಣರೋಷ, ರಣದ್ವೇಷದ ಕಿಚ್ಚು..! ಬೊಂಬೆಯಾಟದಲ್ಲಿ ಭುಗಿಲೆದ್ದು ನಿಂತ ಸೇಡು, ಜಿದ್ದು, ಚರಿತ್ರೆ ಮರೆಯದ ದುಷ್ಮನಿಯ ಹೊಸ ಅಧ್ಯಾಯವೇ ಇವತ್ತಿನ ಸುವರ್ಣ ಸ್ಪೆಷಲ್,

ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು 20 ವರ್ಷದ ರಾಜಕೀಯ ದ್ವೇಷ. ಆ ದ್ವೇಷದ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕುರುಕ್ಷೇತ್ರದಲ್ಲಿ ದೊಡ್ಡ ಯುದ್ಧವೇ ನಡೆದಿದೆ. ಇದು ಗುರು-ಶಿಷ್ಯದ ಮಹಾಯುದ್ಧದ ಕಥೆಯಾದ್ರೆ, ಮತ್ತೊಂದ್ಕಡೆ ಗೌಡರ ಮಗ ಕುಮಾರಸ್ವಾಮಿ ಡಿಕೆ ಬ್ರದರು ವಿರುದ್ಧ ರೊಚ್ಚಿಗೆದ್ದು ಬಿಟ್ಟಿದ್ದಾರೆ. ಗುರು-ಶಿಷ್ಯರ ಮಹಾಯುದ್ಧದಲ್ಲಿ ಹಿಮಾಲಯ ಪರ್ವತ ಮತ್ತು ಕಲ್ಲು ಬಂಡೆಯ ಕಥೆ ಹೇಳಿದ್ದಾರೆ ಸರ್ವೋಚ್ಛ ದಳಪತಿ ದೇವೇಗೌಡರು. ಒಂದು ಕಾಲದ ಗುರು-ಶಿಷ್ಯರ ಮಧ್ಯೆ ಚನ್ನಪಟ್ಟಣ ರಣರಂಗದಲ್ಲಿ ನಡೆದಿರೋದು ರಣರಣ ಕಾಳಗ.. ಗುರು-ಶಿಷ್ಯರ ಮಹಾಯುದ್ಧದಲ್ಲಿ ಹಿಮಾಲಯ ಪರ್ವತ ಮತ್ತು ಕಲ್ಲು ಬಂಡೆಯ ಕಥೆ ಹೇಳಿದ್ದಾರೆ. ಆದರೆ, ಈ ಕಥೆಯ ಅಸಲಿ ಸಾರಾಂಶ ಇಲ್ಲಿದೆ ನೋಡಿ.