ಹಾಲಿನಲ್ಲಿರುವ ಪೋಷಕಾಂಶಗಳು ಅಂಬೆಗಾಲಿಡುವ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಮತ್ತು ದೈಹಿಕ ಕಾರ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತೆ. ಆದರೆ, ಲೀನ್ ಮಾಂಸ, ಮೀನು ಮತ್ತು ಟೋಫುಗಳಂತಹ ಹಾಲಿನಂತಹ ಅದೇ ಪೋಷಕಾಂಶಗಳನ್ನು ಹೊಂದಿರುವ ಇತರ ಅನೇಕ ಆಹಾರಗಳಿವೆ.
ಸಾಮಾನ್ಯವಾಗಿ, ಮಗು ಹಾಲು ಕುಡಿಯದಿದ್ದರೆ, ಸಮತೋಲಿತ ಆಹಾರದ (balanced food) ಸಹಾಯದಿಂದ, ಮಗುವಿಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡಬಹುದು. ಆದರೆ, ಮಗುವಿನ ಆಹಾರದ ಲಿಸ್ಟ್ ನಿಂದ ಹಾಲನ್ನು ತೆಗೆದುಹಾಕುವ ಮೊದಲು ಪೋಷಕರು ವೈದ್ಯರನ್ನು ಕೇಳಬೇಕು.
ಅಂಬೆಗಾಲಿಡುವ ಮಕ್ಕಳು ಎಷ್ಟು ಹಾಲು ಕುಡಿಯಬೇಕು?
ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಾರ, 12 ತಿಂಗಳ ಆರೋಗ್ಯಕರ ಮಗು ಹಸುವಿನ ಹಾಲನ್ನು ಎದೆಹಾಲು ಅಥವಾ ಫಾರ್ಮುಲಾದೊಂದಿಗೆ ಕುಡಿಸಲು ಪ್ರಾರಂಭಿಸಬಹುದು. ಒಂದರಿಂದ ಎರಡು ವರ್ಷದ ಮಕ್ಕಳಿಗೆ ದಿನಕ್ಕೆ ಎರಡರಿಂದ ಮೂರು ಕಪ್ ಹಾಲು ಮತ್ತು ಎರಡರಿಂದ ಐದು ವರ್ಷದ ಮಕ್ಕಳಿಗೆ 2 ರಿಂದ 2.5 ಕಪ್ ಹಾಲನ್ನು ನೀಡಬೇಕು.
ಸ್ತನ್ಯಪಾನ
ಮಗುವಿಗೆ ಹಸು ಅಥವಾ ಇನ್ನಾವುದೇ ಪ್ರಾಣಿ ಹಾಲನ್ನು ನೀಡಲು ಪ್ರಾರಂಭಿಸೋದರಿಂದ ನೀವು ಸ್ತನ್ಯಪಾನ ಮಾಡೋದನ್ನು ನಿಲ್ಲಿಸಬೇಕು ಎಂದರ್ಥವಲ್ಲ. ನೀವು ಸ್ತನ್ಯಪಾನ (breast feeding) ಮಾಡುವ ಅಂಬೆಗಾಲಿಡುವ ಮಕ್ಕಳಿಗೂ ಹಾಲುಣಿಸಬಹುದು. ಮಗುವಿಗೆ ಹಸು ಅಥವಾ ಎಮ್ಮೆ ಹಾಲಿನ ಅಲರ್ಜಿ ಇದ್ದರೆ, ಸೋಯಾ ಹಾಲನ್ನು ಕುಡಿಸಬಹುದು.
ಅಂಬೆಗಾಲಿಡುವ ಮಕ್ಕಳಿಗೆ ಹಾಲಿನ ಪ್ರಯೋಜನಗಳು
ಎರಡು ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹಾಲು ಅತ್ಯಗತ್ಯ ಏಕೆಂದರೆ ಅದರಲ್ಲಿ ಕ್ಯಾಲ್ಸಿಯಂ, ಕೊಬ್ಬು ಮತ್ತು ಪ್ರೋಟೀನ್ ಇದೆ. ಈ ಸಮಯದಲ್ಲಿ ಮಕ್ಕಳ ಬೆಳವಣಿಗೆಗಾಗಿ ಈ ಮೂರು ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತೆ ಮತ್ತು ಈ ಮೂರು, ಹಾಲಿನಲ್ಲಿ ಸುಲಭವಾಗಿ ಲಭ್ಯವಿದೆ.
ಮಗು ಹೆಚ್ಚು ಹಾಲು ಕುಡಿದರೆ ಏನಾಗುತ್ತೆ?
ಅನೇಕ ಬಾರಿ ಪೋಷಕರು ಮಗುವಿಗೆ ಅಗತ್ಯಕ್ಕಿಂತ ಹೆಚ್ಚು ಹಾಲನ್ನು ನೀಡುತ್ತಾರೆ, ಇದರಿಂದಾಗಿ ಈ ಕೆಲವು ಸಮಸ್ಯೆಗಳು ಸಂಭವಿಸಲು ಪ್ರಾರಂಭಿಸುತ್ತವೆ. ಹಸುವಿನ ಹಾಲಿನಲ್ಲಿ ಕೊಬ್ಬು ಇರುತ್ತೆ ಮತ್ತು ಇದು ಮಗುವಿನ ಹೊಟ್ಟೆಯನ್ನು ಬೇಗನೆ ತುಂಬಿಸುತ್ತೆ ಮತ್ತು ಮಗುವಿಗೆ ಇತರ ವಸ್ತುಗಳನ್ನು ತಿನ್ನಲು ಸಾಧ್ಯವಾಗೋದಿಲ್ಲ. ಇದು ಪೌಷ್ಠಿಕಾಂಶದಲ್ಲಿ ಅಸಮತೋಲನವನ್ನು ಸೃಷ್ಟಿಸುತ್ತೆ ಮತ್ತು ಮಗುವಿನಲ್ಲಿ ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತೆ.
ಇತರ ಪೋಷಕಾಂಶಗಳ ಮೇಲೆ ಪರಿಣಾಮ
ಹಾಲಿನಲ್ಲಿ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಅಧಿಕವಾಗಿದೆ, ಇದರ ಅತಿ ಸೇವನೆಯು ವಿಶೇಷವಾಗಿ ಎರಡು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಲ್ಲಿ ಕ್ಯಾಲೋರಿ ಹೆಚ್ಚಿಸುತ್ತೆ. ಕ್ಯಾಲೋರಿ ಹೆಚ್ಚಿದ್ದರೆ, ಮಗುವಿನ ತೂಕ ಹೆಚ್ಚಾಗಬಹುದು ಮತ್ತು ಟೈಪ್ 2 ಮಧುಮೇಹದಂತಹ ಗಂಭೀರ ಕಾಯಿಲೆ ಮಗುವನ್ನು ಕಾಡಬಹುದು. ಹಾಗಾಗಿ ಮಗುವಿಗೆ ಹೆಚ್ಚು ಹಾಲು ಕೊಡೋ ಮೊದಲು ಒಮ್ಮೆ ಯೋಚಿಸಿ.