ಗೆಳೆಯ ಗೆಳೆಯ ಎನ್ನುತ್ತಿದ್ದ ಮಂಜುಗೆ 'ಇದೆಲ್ಲ ನನ್ನ ಹತ್ರ ಇಟ್ಕೋಬೇಡ' ಎಂದು ಖಡಕ್ ವಾರ್ನಿಂಗ್ ಕೊಟ್ಟ ಗೌತಮಿ!

By Vaishnavi Chandrashekar  |  First Published Dec 12, 2024, 10:29 AM IST

ಇಷ್ಟು ದಿನ ಕಿತ್ತರೂ ಬಿಡದಂತೆ ಅಂಟುಕೊಂಡಿದ್ದ ಉಗ್ರಂ ಮಂಜುಗೆ ವಾರ್ನಿಂಗ್ ಕೊಟ್ಟ ಮೋಕ್ಷಿತಾ. ಗೆಳೆಯನ್ನು ಪರಿಸ್ಥಿತಿ ನೋಡಿ ನಕ್ಕಿದ ಮನೆ.....
 


ಬಿಗ್ ಬಾಸ್ ಸೀಸನ್ 11ರ 11ನೇ ವಾರದ ಕ್ಯಾಪ್ಟನ್ ಆಗಿ ಗೌತಮಿ ಜಾದವ್ ಮಿಂಚುತ್ತಿದ್ದಾರೆ. ಗೌತಮಿ ಕ್ಯಾಪ್ಟನ್ಸಿಯಲ್ಲಿ ಗೌತಮಿ ಮಾತ್ರ ನಿರ್ಧಾರ ತೆಗೆದುಕೊಳ್ಳ ಬೇಕು ಮಂಜು ಅಲ್ಲ ಎಂದು ಮನೆ ಮಂದು ಹಾಸ್ಯ ಮಾಡುತ್ತಿದ್ದರು. ಇದೀಗ ಮಂಜು ಅದೇ ರೀತಿ ನಡೆದುಕೊಳ್ಳುತ್ತಿರುವ ಕಾರಣ ಗೌತಮಿ ಕೊಂಚ ಗರಂ ಆಗಿದ್ದಾರೆ. ಮಾತಿಗೆ ಮಾತು ಬೆಳೆದು ವಾರ್ನಿಂಗ್ ಕೊಟ್ಟು ಸ್ನೇಹವನ್ನು ಮುರಿದುಕೊಂಡಿದ್ದಾರೆ. ಮೋಕ್ಷಿತಾ ಹೊರ ಬಂದಿರುವುದು ಆಕೆ ತೆಗೆದುಕೊಂಡಿರುವ ಬೆಸ್ಟ್‌ ನಿರ್ಧಾರ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. 

'ಇದು ಹೀಗೆ ಕಂಟಿನ್ಯೂ ಆದರೆ ಇದು ನನ್ನ ಕ್ಯಾಪ್ಟನ್ಸಿ ವೀಕ್ ಆಗಿರೋದ್ರಿಂದ ನನಗೆ ನನ್ನದೇ ಆದ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ನಾನಿಲ್ಲದೆ ಕ್ಯಾಪ್ಟನ್ ಆಗಿ ನೇನೇನು ಮಾಡಬೇಕು? ನನ್ನ ಸ್ಪೇಸ್ ಅನ್ನೋದನ್ನು ಮರೆತು ನೀವು ಮಾತಾಡೋಕೆ ಶುರು ಮಾಡ್ತೀರಾ. ಇದರ ಬಗ್ಗೆ ತಲೆ ಕೆಡಿಸಿಕೊಂಡು ಕೂರೋಕೆ ನಾನು ಬಂದಿಲ್ಲ. ಇದು ಸರಿ ಆಗುತ್ತಿಲ್ಲ' ಎಂದು ಲಿವಿಂಗ್ ಏರಿಯಾದಲ್ಲಿ ಮಂಜುಗೆ ಗೌತಮಿ ಈ ರೀತಿ ಹೇಳಿದ್ದಾರೆ. 

Tap to resize

Latest Videos

ಕೂತ್ಕೊಂಡಿದ್ದಾಗ ಒಂದೇ ಸಮ ಕಾಲು ಅಲುಗಾಡಿಸುತ್ತಿದ್ದರೆ ಈ ರಾಶಿಯವರಿಗೆ ಹಣ ಸಮಸ್ಯೆ ಗ್ಯಾರಂಟಿ!

ಮೋಕ್ಷಿತಾ ವಿಷಯಕ್ಕೂ ಜಗಳ:

ಮೋಕ್ಷಿತಾ ಡವ್ ರಾಣಿ ಮತ್ತು ಬಕೆಟ್ ರಾಣಿ ಎನ್ನುವ ಪಟ್ಟವನ್ನು ಮಂಜು ನೀಡಿದ್ದರು. ಯಾವ ಪಟ್ಟವನ್ನು ನೀಡದಿದ್ದರೂ ಜಗಳವನ್ನು ನಾನು ಸ್ವೀಕರಿಸಬೇಕು ಎಂದು ಗೌತಮಿ ಬೇಸರ ಮಾಡಿಕೊಂಡಿದ್ದಾರೆ. 'ಡಿಸ್ಟರ್ಬ್‌ ನಾನು ಯಾವತ್ತೂ ಆಗಿದ್ದಲ್ಲ. ನಿಮಗೆ ನಿಭಾಯಿಸೋದಕ್ಕೆ ಬರೋದಿಲ್ಲ. ನನಗೆ ಗೊತ್ತಿಲ್ಲ. ನನಗೆ ಯಾಕಿದು? ಆಟದ ಮಧ್ಯೆ? ನಾನು ಸ್ಯಾಂಡ್‌ವಿಚ್ ಆಗಿದ್ದೆ. ನಾನು ಕೊಡದೇ ಇರುವ ಅಭಿಪ್ರಾಯಗಳು ಗೆಳೆತನದಿಂದ ನನ್ನ ಮೇಲೆ ಬರ್ತಾ ಇದೆ. ಇದು ಆಟಕ್ಕೆ ನನಗೆ ತೊಂದರೆ ಆಗ್ತಿದೆ. ಇದು ಎಲ್ಲವೂ ಗೊತ್ತು'ಎಂದು ಗೌತಮಿ ಕೋಪದಲ್ಲಿ ಮಾತನಾಡಿದ್ದಾರೆ. 

'ಇದು ಬಿಗ್ ಬಾಸ್‌ಗಾ? ಓವರ್‌ ಆಲ್‌ ಲೈಫ್‌ಗಾ? ಸರಿ ಗೆಳತಿ. ನಾನು ಇನ್ಮೇಲೆ ಡಿಸ್ಟರ್ಬ್‌ ಮಾಡಲ್ಲ ಗೆಳತಿ. ನಿನ್ನ ಅಟಕ್ಕಾಗಲಿ ಗೆಳತನಕ್ಕಾಗಲಿ ಡಿಸ್ಟರ್ಬ್ ಮಾಡಲ್ಲ' ಎಂದು ಮಂಜು ಉತ್ತರಿಸಿ ಸುಮ್ಮನಾಗಿದ್ದಾರೆ. 

ಮೂಲ ನಕ್ಷತ್ರದ ಹುಡ್ಗೀರು ಯಾಕೆ ಪಳಪಳ ಅಂತಾರೆ; 'ಲಕ್ಷ್ಮಿ ನಿವಾಸ' ಭಾವನ ಲುಕ್ ನೋಡಿ

ಗೌತಮಿ ವಾರ್ನಿಂಗ್:

ಗೌತಮಿ ಮಾತುಗಳನ್ನು ಕೇಳಿ ಮಂಜು 'ಫ್ರೆಂಡ್‌ಶಿಪ್‌ನ ನಿಭಾಯಿಸೋದಕ್ಕೆ ನನ್ನ ಕೈಯಲ್ಲಿ ಆಗ್ತಿಲ್ಲ ಅಲ್ಲದೆ ನನಗೆ ಬರ್ತಾನೂ ಇಲ್ಲ. ಹೀಗಾಗಿ ಅದನ್ನು ಒಪ್ಪಿಕೊಂಡು ನಿಭಾಯಿಸೋದನ್ನು ಕಲಿತಾಗ ಹೇಳ್ತೀನಿ' ಎಂದು ಮಂಜು ಹೇಳಿದ್ದಾಗ.....'ನನ್ನನ್ನು ನೀವು ಏನು ಅಂದುಕೊಂಡಿದ್ದೀರಾ? ನೀವು ನಿಭಾಯಿಸೋದಕ್ಕೆ ಕಲಿತಾಗ ನಾನು ಒಂದು ಫ್ರೆಂಡ್‌ಶಿಪ್ ಮಾಡ್ಬೇಕಾ ನಿಭಾಯಿಸಬೇಕಾ? ಇದೆಲ್ಲಾ ಇಟ್ಟಿಕೊಳ್ಳಬೇಡಿ..ಇದು ವರ್ಕ್ ಅಗಲ್ಲ ನನ್ನನ್ನು ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ಳಬೇಡಿ ನಾನು ನಿಮ್ಮ ವಾಕ್ಯವನ್ನು ವಾಪಸ್‌ ತಗೋಳಿ. ಗೆಳೆಯ ಗೆಳತಿ ಗೆಳೆತನ ಇರಲ್ಲ. ನನ್ನ ಕಡೆಯಿಂದ ಇರೋದಿಲ್ಲ. ಮುಗಿಸ್ತಾ ಇದ್ದೀನಿ. ನೋಡೋಣ ಒಳ್ಳೆದಾಗಲಿ' ಎಂದು ಸಾರಿ ಹೇಳುತ್ತಾ ಗೌತಮಿ ಹೊರಟು ಬಿಟ್ಟರು. 

ವಯಸ್ಸು ಮೀರುತ್ತಿದೆ ಮದುವೆ ಸೆಟ್ ಆಗ್ತಿಲ್ಲ ಅಂದ್ರೆ ಈ ಮಂತ್ರ ಪಠಿಸಿ; 21 ದಿನಗಳಲ್ಲಿ ನಡೆಯಲಿದೆ ಅಚ್ಚರಿ

click me!