
‘ಛೂ ಮಂತರ್ ಸಿನಿಮಾದ ಒಂದೊಂದು ಪೋಸ್ಟರ್ ಬಿಟ್ಟಾಗಲೂ ಈ ಸಿನಿಮಾ ರಿಲೀಸ್ ಅನ್ನು ಜನ ಎಲ್ಲಿ ತೋಳ ಬಂತು ತೋಳ ಕಥೆ ಅಂದುಕೊಂಡು ಬಿಡ್ತಾರೇನೋ ಅಂತ ಆತಂಕ ಆಗ್ತಿತ್ತು. ಆದರೆ ಜ.10ರಂದು ನಿಜಕ್ಕೂ ಸಿನಿಮಾ ರಿಲೀಸ್ ಆಗ್ತಿದೆ’ ಎಂದು ನಟ ಶರಣ್ ಹೇಳಿದ್ದಾರೆ. ಶರಣ್ ನಾಯಕನಾಗಿರುವ ಕರ್ವ ನವನೀತ್ ನಿರ್ದೇಶನದ ‘ಛೂ ಮಂತರ್’ ಸಿನಿಮಾದ ಟೀಸರ್ ಬಿಡುಗಡೆ ಇತ್ತೀಚೆಗೆ ನಡೆಯಿತು. ಈ ವೇಳೆ ಮಾತನಾಡಿದ ಶರಣ್, ‘ಬಹಳಷ್ಟು ಸಮಯದಿಂದ ಕನ್ನಡದಲ್ಲಿ ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಆಗಿಲ್ಲ. ಕಾರಣ ಈ ವೇಳೆ ಪರಭಾಷೆಯ ಬಿಗ್ ಬಜೆಟ್ ಸಿನಿಮಾ ರಿಲೀಸ್ ಆಗುವ ಭಯ.
ಆದರೆ ನನ್ನ ಪ್ರಶ್ನೆ ಸಂಕ್ರಾಂತಿಗೆ ಕನ್ನಡ ಸಿನಿಮಾ ಬೇಡ್ವಾ? ಈ ನಿಟ್ಟಿನಲ್ಲಿ ನಾವು ಛೂಮಂತರ್ ಸಿನಿಮಾ ರಿಲೀಸ್ ಮಾಡ್ತಿದ್ದೀವಿ. ಇದು ಉತ್ತಮ ಪ್ರದರ್ಶನ ಕಂಡರೆ ಮುಂದೆಯೂ ಒಳ್ಳೊಳ್ಳೆ ಕನ್ನಡ ಸಿನಿಮಾಗಳನ್ನು ಸಂಕ್ರಾಂತಿಗೆ ಬಿಡುಗಡೆ ಮಾಡುವ ಧೈರ್ಯ ಮಾಡ್ತಾರೆ’ ಎಂದು ಹೇಳಿದರು. ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ಈ ಸಿನಿಮಾ ನಿರ್ಮಿಸಿದ್ದಾರೆ. ನವನೀತ್, ಅದಿತಿ ಪ್ರಭುದೇವ, ಮೇಘನಾ ಗಾಂವ್ಕರ್, ಚಿಕ್ಕಣ್ಣ, ದಿಲೀಪ್ ರಾಜ್ ಸುದ್ದಿಗೋಷ್ಠಿಯಲ್ಲಿದ್ದರು.
ಪೋಸ್ಟರ್ ಬಿಡುಗಡೆ: ಶರಣ್ ನಟನೆಯ ‘ಛೂ ಮಂತರ್’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ಶರಣ್, ‘ಚಿಕ್ಕವಯಸ್ಸಿನಿಂದಲೂ ನಾನು ಹಾರರ್ ಚಿತ್ರಗಳ ಅಭಿಮಾನಿ. ಹೀಗಾಗಿ ಈ ಸಿನಿಮಾ ನನಗೆ ಬಹಳ ಮುಖ್ಯವಾದದ್ದು. ನನ್ನ ಹಾಗೂ ಚಿಕ್ಕಣ್ಣ ಅವರ ಕಾಂಬಿನೇಶನ್ ಬಗ್ಗೆ ಪ್ರೇಕ್ಷಕರಿಗೆ ನಿರೀಕ್ಷೆ ಇರುತ್ತದೆ. ಆ ನಂಬಿಕೆ ಹುಸಿಯಾಗಲ್ಲ. ಈ ಚಿತ್ರದ ಮತ್ತೊಂದು ಹೈಲೆಟ್ ಎಂದರೆ ಅನೂಪ್ ಅವರ ಛಾಯಾಗ್ರಹಣ’ ಎಂದರು. ನಿರ್ಮಾಪಕ ತರುಣ್ ಶಿವಪ್ಪ ಈ ಸಿನಿಮಾಗೂ ಮುಂಚೆ ಉಪೇಂದ್ರ ನಟನೆಯ ಚಿತ್ರಕ್ಕೆ ಬಂಡವಾಳ ಹೂಡಬೇಕಿತ್ತಂತೆ.
ಸಾಮಾನ್ಯ ಬಸ್ ಕಂಡಕ್ಟರ್ ಆಗಿದ್ದ ಶಿವಾಜಿ ರಾವ್ 'ರಜನಿಕಾಂತ್' ಆದದ್ದು ಹೇಗೆ?: ಇವರ ಆಸ್ತಿ ಎಷ್ಟು ಗೊತ್ತಾ?
‘ಆ ಸಿನಿಮಾ ಮುಂದೆ ಹೋಗಿದೆ. ಛೂ ಮಂತರ್ ಮೋಡಿ ಮಾಡುವ ವಿಶ್ವಾಸವಿದೆ’ ಎಂದರು. ‘ಚಿತ್ರದಲ್ಲಿ ಮೂರು ಕಥೆಯ ಎಳೆ ಇದೆ. ಕಂಪ್ಲೀಟ್ ಹಾರರ್ ಸಿನಿಮಾದಲ್ಲಿ ಶರಣ್ ನಟಿಸುತ್ತಿರುವುದು ಇದೇ ಮೊದಲು. ಕಾಮಿಡಿ ಹಾಗೂ ಥ್ರಿಲ್ಲರ್ ಅಂಶಗಳೂ ಇವೆ’ ಎಂದರು ನಿರ್ದೇಶಕ ನವನೀತ್. ನಾಯಕಿಯರಾದ ಮೇಘನಾ ಗಾಂವ್ಕರ್ ಹಾಗೂ ಅದಿತಿ ಪ್ರಭುದೇವ ಪಾತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಪ್ರಭು ಮುಂಡ್ಕರ್, ಧರ್ಮ, ರಜನಿ ಭಾರದ್ವಾಜ್ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅವಿನಾಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಂದನ್ ಶೆಟ್ಟಿಸಂಗೀತವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.