ಈ ಮೊದಲು, ಜನರು ಮೆಟ್ರೋದಲ್ಲಿ ಎಫ್ ಎಂ ಕೇಳುತ್ತಾ, ಬುಕ್ ಓದುತ್ತಾ ಸಮಯವನ್ನು ಕಳೆಯುತ್ತಿದ್ದರು. ಮೆಟ್ರೋ ಅಥವಾ ರೈಲಿನಲ್ಲಿ, ಬಸ್ ನಲ್ಲಿ ಜನ ಕಡಿಮೆ ಇದ್ರೆ ಆರಾಮವಾಗಿ ಕುಳಿತು ಬಿಡುತ್ತಿದ್ದರು. ಆವಾಗೆಲ್ಲಾ ವಾವ್ ಎಂದು ಫೀಲ್ ಆಗುತ್ತಿತ್ತು. ಆದರೆ ಈಗ ಜನರು ರೀಲ್ಸ್ (reels) ನೋಡೋದ್ರಲ್ಲೇ ಕಾಲ ಕಳೆಯುತ್ತಾರೆ. ರೀಲ್ಸ್ ನೋಡ್ತಾ ನೋಡ್ತಾ ಒಂದು ಗಂಟೆ, ಎರಡು ಗಂಟೆ ಹೇಗೆ ಕಳೆದು ಹೋಗುತ್ತೆ ಅನ್ನೋದೆ ಜನರಿಗೆ ಗೊತ್ತಾಗಲ್ಲ
ಇದು ನಿಜಾ ಅಲ್ವಾ? ಇತ್ತೀಚಿನ ದಿನಗಳಲ್ಲಿ ಜನರು ರೀಲ್ಸ್, ಶಾರ್ಟ್ಸ್ ಗಳಿಗೆ (addicted to shorts and reels) ಎಷ್ಟೊಂದು ಅಡಿಕ್ಟ್ ಆಗಿದ್ದಾರೆ ಎಂದರೆ, ದಿನಪೂರ್ತಿ ಅದನ್ನೇ ನೋಡುತ್ತಾ ಸಮಯ ಕಳೆಯುತ್ತಾರೆ. ಇದರಿಂದ ಆರೋಗ್ಯಕ್ಕೆ ಎಷ್ಟೊಂದು ಅಪಾಯವಾಗುತ್ತೆ ಅನ್ನೋದರ ಪರಿವೇಯೇ ಇಲ್ಲದೆಯೇ ಮಕ್ಕಳಿಂದ ಹಿಡಿದು, ವೃದ್ಧರವರೆಗೆ ಎಲ್ಲರೂ ರೀಲ್ಸ್ ಗಳಲ್ಲಿ ಮುಳುಗುತ್ತಾರೆ.
ರೀಲ್ಸ್ ಮತ್ತು ಶಾರ್ಟ್ಸ್ ಎಂದರೇನು?
30 ಸೆಕೆಂಡುಗಳ ಕಿರು ವೀಡಿಯೊಗಳನ್ನು ಶಾರ್ಟ್ಸ್ ಎಂದು ಕರೆಯಲಾಗುತ್ತದೆ. ಕೆಲವು ವೀಡಿಯೊಗಳು 2 ನಿಮಿಷಗಳವರೆಗೆ ಉದ್ದವಾಗಿರುತ್ತವೆ. ರೀಲ್ ಗಳು ಸಹ ಒಂದು ರೀತಿಯ ಕಿರು ವೀಡಿಯೊಗಳಾಗಿವೆ. ರೀಲ್ಗಳನ್ನು ತಯಾರಿಸುವ ತಂತ್ರವು ಟಿಕ್ಟಾಕ್ ಅಪ್ಲಿಕೇಶನ್ನೊಂದಿಗೆ ಪ್ರಾರಂಭವಾಯಿತು. ಭಾರತದಲ್ಲಿ ಟಿಕ್ ಟಾಕ್ ಅನ್ನು ನಿಷೇಧಿಸಿದ ಕೂಡಲೇ, ಜನರು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ (facebook and instagram) ಎಲ್ಲಾ ರೀತಿಯ ರೀಲ್ಗಳನ್ನು ಹಾಕಲು ಪ್ರಾರಂಭಿಸಿದರು.
ತಮಾಷೆ, ಮಾಹಿತಿಯುಕ್ತ, ಭಾವನಾತ್ಮಕ, ಎಲ್ಲಾ ರೀತಿಯ ವೀಡಿಯೊಗಳು ರೀಲ್ ಗಳಲ್ಲಿ ತುಂಬಿವೆ. ಅದಕ್ಕಾಗಿಯೇ ಜನರು ಇದಕ್ಕೆ ವ್ಯಸನಿಯಾಗುತ್ತಿದ್ದಾರೆ. ಈ ರೀಲ್ ಗಳನ್ನು ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರೂ ಮಾಡುತ್ತಾರೆ, ಆದರೆ ಮಕ್ಕಳು ಮತ್ತು ಯುವಕರಲ್ಲಿ ಹೆಚ್ಚಿನ ಕ್ರೇಜ್ ಇದೆ. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಲಾದ ಸಣ್ಣ ವೀಡಿಯೊಗಳನ್ನು ರೀಲ್ಸ್ ಎಂದು ಕರೆಯಲಾಗುತ್ತದೆ. ಯೂಟ್ಯೂಬ್ ನ ಕಿರು ವೀಡಿಯೊಗಳನ್ನು ಶಾರ್ಟ್ಸ್ ಎಂದು ಕರೆಯಲಾಗುತ್ತದೆ.
ಈ ವ್ಯಸನವು ಖಿನ್ನತೆಗೆ ಕಾರಣವಾಗಬಹುದು (depression)
ಈ ಚಟದಿಂದಾಗಿ ಜನರಲ್ಲಿ ಕಂಡುಬರುವ ಅತಿದೊಡ್ಡ ಸಮಸ್ಯೆಯೆಂದರೆ ಖಿನ್ನತೆ. ವೀಡಿಯೊವನ್ನು ನೋಡುವ ವ್ಯಕ್ತಿಯು ತನ್ನನ್ನು ವೀಡಿಯೊದಲ್ಲಿರುವ ವ್ಯಕ್ತಿಯೊಂದಿಗೆ ಹೋಲಿಸಲು ಪ್ರಾರಂಭಿಸುತ್ತಾನೆ. ಅವರು ತಾನು ಕೂಡ ವೀಡಿಯೋದಲ್ಲಿ ಇರುವವರಂತೆ ಕಾಣಲು, ಅವಳಂತೆ ಬದುಕಲು ಬಯಸುತ್ತಾನೆ ಮತ್ತು ಅದು ಸಂಭವಿಸದಿದ್ದಾಗ, ಕೋಪಗೊಳ್ಳುತ್ತಾರೆ, ಕಿರಿಕಿರಿಗೊಳ್ಳುತ್ತಾರೆ. ಕ್ರಮೇಣ ಈ ಒತ್ತಡವು ಖಿನ್ನತೆಯಾಗಿ ಬದಲಾಗುತ್ತದೆ.
ರೀಲ್ಸ್ ನೋಡಲು ಜನರು ಯಾಕೆ ಅಷ್ಟೊಂದು ಉತ್ಸುಕರಾಗುತ್ತಾರೆ?
- ರೀಲ್ಸ್, ಶಾರ್ಟ್ಸ್ ಹೆಚ್ಚಿನ ಸಂಖ್ಯೆಯ ಹಾಸ್ಯ ವೀಡಿಯೊಗಳನ್ನು ಹೊಂದಿವೆ. ವಯಸ್ಕರಿಂದ ಹಿಡಿದು ಮಕ್ಕಳು, ವೃದ್ಧರು ಈ ವೀಡಿಯೊಗಳನ್ನು ನೋಡಿ ನಗುತ್ತಾರೆ, ಇದು ಅವರ ಮನಸ್ಸನ್ನು ಶಾಂತಗೊಳಿಸುತ್ತದೆ.
ಫ್ಯಾಷನ್ ಮತ್ತು ಟ್ರೆಂಡ್ಸ್ ಕುರಿತು ಅನೇಕ ಸಣ್ಣ ವೀಡಿಯೊಗಳಿವೆ, ವಿಶೇಷವಾಗಿ ಮಹಿಳೆಯರು ಇದನ್ನ ಇಷ್ಟ ಪಡ್ತಾರೆ. ಅವರು ಮಾರುಕಟ್ಟೆಯ ಇತ್ತೀಚಿನ ಟ್ರೆಂಡ್ ಗಳ ಬಗ್ಗೆ ರೀಲ್ಸ್ ಗಳನ್ನು ನೋಡಿ ತಿಳಿದುಕೊಳ್ಳುವುದನ್ನು ಕಾಣಬಹುದು.
ಕೆಲವು ಕಿರು ವೀಡಿಯೊಗಳಲ್ಲಿ, ಜನರು ವಿಚಿತ್ರ ನಟನೆಯನ್ನು ಮಾಡುತ್ತಾರೆ ಮತ್ತು ಸಂಭಾಷಣೆಗಳನ್ನು ಮಾತನಾಡುತ್ತಾರೆ. ಇದನ್ನ ನೋಡಿ ಜನರು ಸಂತೋಷಪಡುತ್ತಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ತಿನ್ನಲು ಹೊಸ ವೆರೈಟ್ ಆಹಾರಗಳು ಮತ್ತು ಭೇಟಿ ನೀಡಲು ಹೊಸ ಸ್ಥಳಗಳ ಬಗ್ಗೆ ತಿಳಿಯಲು ಬಯಸುವ ಹಲವಾರು ಜನರಿದ್ದಾರೆ. ಇಂತಹ ರೀಲ್ಸ್ ಅಥವಾ ಶಾರ್ಟ್ಸ್ ವೀಡಿಯೊಗಳೊಂದಿಗೆ ಅವರು ತಮ್ಮ ಜ್ಞಾನವನ್ನು ಹೆಚ್ಚಿಸುತ್ತಾರೆ.
ರೀಲ್ ವ್ಯಸನವು ಆರೋಗ್ಯಕ್ಕೆ ಹೇಗೆ ಹಾನಿಕಾರಕ?
ತಡರಾತ್ರಿ ರೀಲ್ ಗಳು ಅಥವಾ ಶಾರ್ಟ್ ಗಳನ್ನು ನೋಡುವುದರಿಂದ, ಮಕ್ಕಳು ತಡವಾಗಿ ಮಲಗುತ್ತಾರೆ, ಇದು ಅವರ ನಿದ್ರೆಯ ಮಾದರಿಯನ್ನು ಅಡ್ಡಿಪಡಿಸುತ್ತದೆ. ನಂತರ ಮರುದಿನ ಶಾಲೆ ಅಥವಾ ಕಾಲೇಜಿನಲ್ಲಿ ಪಾಠ ಕೇಳಲು ಸಾಧ್ಯವಾಗದೆ ನಿದ್ರೆ ಮಾಡುತ್ತಾರೆ. ನಿದ್ರೆಯ ಕೊರತೆಯಿಂದಾಗಿ ಒತ್ತಡವು ಪ್ರಾರಂಭವಾಗುತ್ತದೆ, ಇದು ಬಿಪಿ ಹೆಚ್ಚಿಸುವ ಸಮಸ್ಯೆಯೊಂದಿಗೆ ಅನೇಕ ಬಾರಿ ಖಿನ್ನತೆಗೆ ಕಾರಣವಾಗಬಹುದು.
- ಹೆಚ್ಚು ಹೆಚ್ಚು ಸಮಯ ಸ್ಕ್ರೀನ್ ನೋಡುವುದರಿಂದ ಕಣ್ಣುಗಳು ದುರ್ಬಲವಾಗುತ್ತವೆ. ಯಾವುದೇ ದೈಹಿಕ ಚಟುವಟಿಕೆ (Physical activity) ಇರೋದಿಲ್ಲ, ಇದು ತೂಕ ಹೆಚ್ಚಳ ಮತ್ತು ಬೊಜ್ಜು ಸಮಸ್ಯೆಗಳಿಗೆ ಕಾರಣವಾಗಬಹುದು. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತವೆ.
ಈ ಚಟವನ್ನು ತೊಡೆದುಹಾಕುವುದು ಹೇಗೆ?
- ರೀಲ್ಗಳನ್ನು ವೀಕ್ಷಿಸಲು ನೀವು ಕಳೆಯುವ ಸಮಯವನ್ನು ಸ್ನೇಹಿತರೊಂದಿಗೆ ಕಳೆಯಿರಿ. ದೈಹಿಕ ಚಟುವಟಿಕೆ ಹೆಚ್ಚಿಸಿ.
- ನಿರಂತರವಾಗಿ ರೀಲ್ ಗಳನ್ನು ನೋಡುವುದರಿಂದ, ಮಕ್ಕಳು ವರ್ಚುವಲ್ ಆಟಿಸಂಗೆ (virtual autism) ಬಲಿಯಾಗುತ್ತಿದ್ದಾರೆ (ಕಡಿಮೆ ಕಲಿಕಾ ಸಾಮರ್ಥ್ಯ, ತಡವಾಗಿ ಮಾತನಾಡಲು ಪ್ರಾರಂಭಿಸುವುದು, ಇತ್ಯಾದಿ). ಅವರಿಗೆ ಚಿಕಿತ್ಸೆ ಮತ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವೂ ಇರಬಹುದು. ಅವರಿಗೆ ಮೊಬೈಲ್ ಫೋನ್ ನೀಡುವುದನ್ನು ನಿಲ್ಲಿಸಿ.