ಸರ್ವರಿಗೂ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು!

First Published | Aug 5, 2022, 6:02 AM IST

ವರಮಹಾಲಕ್ಷ್ಮೀ ಹೊಸ್ತಿಲಲ್ಲಿದ್ದಾಳೆ. ಆಕೆಯನ್ನು ಒಳ ಬರ ಮಾಡಿಕೊಳ್ಳುವ ಈ ಶುಭ ಸಂದರ್ಭದಲ್ಲಿ ಪ್ರೀತಿಪಾತ್ರರಿಗೆ ವಾಟ್ಸಾಪ್, ಫೇಸ್‌ಬುಕ್ ಸ್ಟೇಟಸ್‌ನಲ್ಲಿ ಈ ದಿನದ ಶುಭಾಶಯ ಹೇಳಲು, ಸಂದೇಶ ಕಳುಹಿಸಲು ಫೋಟೋಗಳು, ಸಂದೇಶಗಳು ಇಲ್ಲಿವೆ.. ಎಲ್ಲವನ್ನೂ ಹಂಚಿಕೊಂಡು ಅದ್ಧೂರಿಯಾಗಿ ಹಬ್ಬ ಮಾಡಿ.. ಸರ್ವರಿಗೂ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು. 

ಸರಸಿಜನಿಲಯೇ ಸರೋಜಹಸ್ತೇ
ಧವಳತಮಾಂಶುಕಗಂಧಮಾಲ್ಯಶೋಭೇ
ಭಗವತಿ ಹರಿವಲ್ಲಭೇ ಮನೋಘ್ಯೇ
ತ್ರಿಭುವನಭೂತಿಕರಿ ಪ್ರಸೀದ ಮಹ್ಯಮ್

ಇಂದು, ಆಗಸ್ಟ್ 5ರಂದು ವರಮಹಾಲಕ್ಷ್ಮೀ ಹಬ್ಬ. ಶ್ರಾವಣ ಮಾಸದ ಶುಕ್ಲ ಪಕ್ಷದ ಮೊದಲ ಶುಕ್ರವಾರ ನಾವು ಈ ಹಬ್ಬ ಆಚರಿಸುತ್ತೇವೆ. ಶ್ರಾವಣ ಹುಣ್ಣಿಮೆಗೂ ಮೊದಲು ಬರುವ ಶುಕ್ರವಾರ ಎಂದರೂ ಸರಿಯೇ. 

ಕಮಲೇ ಕಮಲಾಕ್ಷವಲ್ಲಭೇ ತ್ವಂ
ಕರುಣಾಪೂರತರಂಗಿತೈರಪಾಂಗೈಃ
ಅವಲೋಕಯ ಮಾಮಕಿಂಚನಾನಂ
ಪ್ರಥಮಂ ಪಾತ್ರಮಕ್ರತ್ರಿಮಂ ದಯಾಯಃ

ಹಬ್ಬಗಳು ಉತ್ತರಾಯಣದಲ್ಲಿ ಹೆಚ್ಚು ಬಂದರೆ, ವ್ರತ ದಕ್ಷಿಣಾಯಣದಲ್ಲಿ ಬರುತ್ತದೆ. ವರಮಹಾಲಕ್ಷ್ಮೀಯು ವ್ರತವಾಗಿದ್ದು, ಅಷ್ಟಲಕ್ಷ್ಮಿಯರನ್ನು ಒಲಿಸಿಕೊಳ್ಳಲು ವಿವಾಹಿತ ಮಹಿಳೆಯರು ಇದನ್ನು ಆಚರಿಸುತ್ತಾರೆ. 

Tap to resize

ದೇವಿ ಪ್ರಸೀದ ಜಗಧೀಶ್ವರಿ ಲೋಕಮಾತಃ
ಕಲ್ಯಾಣಗಾತ್ರಿ ಕಮಲೇಕ್ಷಣಜೀವನಾಥೆ
ದಾರಿದ್ರ್ಯಭೀತಿಹ್ರದಯಂ ಶರಣಾಗತಂ ಮಾಮ್
ಅಲೋಕಯ ಪ್ರತಿದಿನಂ ಸದಯೈರಪಾಂಗೈ

ವರಲಕ್ಷ್ಮಿಯು ಭಗವಾನ್ ವಿಷ್ಣುವಿನ ಪತ್ನಿಯೇ ಆಗಿದ್ದು, ಮಹಾಲಕ್ಷ್ಮಿಯ ಹಲವು ರೂಪಗಳಲ್ಲಿ ಒಂದಾಗಿದೆ. ವರಮಹಾಲಕ್ಷ್ಮಿ ದೇವಿಯು ಮೊದಲ ಬಾರಿಗೆ ಕ್ಷೀರಸಾಗರದಿಂದ ಪ್ರಕಟಗೊಂಡಳು.

ದೇವಿ ಪ್ರಸೀದ ಜಗಧೀಶ್ವರಿ ಲೋಕಮಾತಃ
ಕಲ್ಯಾಣಗಾತ್ರಿ ಕಮಲೇಕ್ಷಣಜೀವನಾಥೆ
ದಾರಿದ್ರ್ಯಭೀತಿಹ್ರದಯಂ ಶರಣಾಗತಂ ಮಾಮ್
ಅಲೋಕಯ ಪ್ರತಿದಿನಂ ಸದಯೈರಪಾಂಗೈ

ಈಕೆ ತನ್ನ ಭಕ್ತರ ಎಲ್ಲ ಬೇಡಿಕೆಗಳನ್ನು ಈಡೇರಿಸುವವಳಾದ್ದರಿಂದಲೇ ಅವಳ ಹೆಸರು ವರ ಮಹಾಲಕ್ಷ್ಮೀ ಎಂದಿದೆ. ಹಾಗಾಗಿ, ವರಮಹಾಲಕ್ಷ್ಮೀ ವ್ರತವನ್ನು ಭಕ್ತಿಯಿಂದ ಆಚರಿಸುವ ಮಹಿಳೆಯರು ಸಕಲ ಸಂಪನ್ನಗಳನ್ನು ಪಡೆಯುತ್ತಾರೆ. 

ಸ್ತುವಂತಿ ಯೇ ಸ್ತುತಿಭಿರಮೀಭಿರನ್ವಹಂ
ತ್ರಯೀಮಯೀಂ ತ್ರಿಭುವನಮಾತರಂ ರಮಾಮ್
ಗುಣಾಧಿಕಾ ಗುರುತರಭಾಗ್ಯಭಾಗಿನೋ
ಭವಂತಿ ತೇ ಭುವಿ ಬುಧಭಾವಿತಾಶಯಾಃ

ಈ ಬಾರಿ ವರಮಹಾಲಕ್ಷ್ಮೀ ವ್ರತದ ಬೆಳಗಿನ ಮುಹೂರ್ತವು ಬೆಳಗ್ಗೆ 6ರಿಂದ 8.20ರವರೆಗೆ ಇರಲಿದೆ. ಬೆಳಗ್ಗೆ 09:53 ರಿಂದ 11:29 ರವರೆಗೆ ಅಮೃತ ಕಾಲವಿದೆ. ಸಂಜೆ 6.40ರಿಂದ 7.40 ರವರೆಗೆ ಸಂಜೆಯ ಮುಹೂರ್ತವಿದೆ. 

ನಮಸ್ತೇಸ್ತು ಮಹಾಮಾಯೇ ಶ್ರೀ ಪೀಠೇ ಸುರಪೂಜಿತೇ|
ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮೀ ನಮೋಸ್ತುತೇ||

ಈ ದಿನ ವ್ರತ ಆಚರಿಸುವ ಹೆಣ್ಣುಮಕ್ಕಳು, ಕೊನೆಯಲ್ಲಿ ಕುಟುಂಬಕ್ಕೆ ಸಂತೋಷ, ಸಮೃದ್ಧಿ ಬೇಡಿ, ಶನಿವಾರ ಬೆಳಗ್ಗೆ ಸ್ನಾನದ ನಂತರ ವಿಸರ್ಜನೆ ಮಾಡಬಹುದು. 

ಜಾತಕದಲ್ಲಿ ಧನಬಲವಿಲ್ಲದವರು, ಶುಭಗ್ರಹಗಳು ಪಾಪಸ್ಥಾನದಲ್ಲಿರುವವರಿಗೆ ಸಂಪತ್ತನ್ನು ಅನುಭವಿಸುವ ಯೋಗ ತಂದುಕೊಡುತ್ತದೆ ವರಮಹಾಲಕ್ಷ್ಮೀ ವ್ರತ. 

ಸರ್ವರಿಗೂ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು. ಈ ವ್ರತವು ನಿಮ್ಮ ಸಕಲ ಇಷ್ಟಾರ್ಥಗಳನ್ನು ಈಡೇರಿಸಲಿ ಎಂದು ತಾಯಿಯಲ್ಲಿ ಪ್ರಾರ್ಥಿಸಿಕೊಳ್ಳುವೆ..

Latest Videos

click me!