ಸಾಯಿಬಾಬಾ ಭಕ್ತರು ನೀವಾಗಿದ್ದರೆ ಈ ದೇವಸ್ಥಾನಕ್ಕೆ ತಪ್ಪದೆ ಭೇಟಿ‌‌ ನೀಡಲೋಬೇಕು!

By Suvarna News  |  First Published Apr 29, 2024, 1:12 PM IST

ಕರುಣೆ, ಕ್ಷಮೆ, ಪ್ರೀತಿಗೆ ಇನ್ನೊಂದು ಹೆಸರು ಸಾಯಿಬಾಬಾ. ಶಿರಡಿಯಲ್ಲಿ ನೆಲೆಯೂರಿದ್ದ ಸಾಯಿಬಾಬಾ, ಜನರಿಗೆ ಜೀವನ ಪಾಠ ಹೇಳಿದ್ದಾರೆ. ವಿಶ್ವದಾದ್ಯಂತ ಸಾಯಿಬಾಬಾ ಭಕ್ತರ ಸಂಖ್ಯೆ ಹೆಚ್ಚಿದ್ದು, ನೋಡಬೇಕಾದ ಅವರ ದೇವಸ್ಥಾನ ಕೂಡ ಸಾಕಷ್ಟಿದೆ.
 


ಪ್ರಸಿದ್ಧ ಸಂತ ಮತ್ತು ದೇವರ ಅವತಾರ ಸಾಯಿಬಾಬಾ ಎಂದು ಅವರ ಭಕ್ತರು ನಂಬಿದ್ದಾರೆ. ಸಾಯಿಬಾಬಾ, ಕ್ಷಮೆ, ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಹಾಗೂ ದೈವಿಕ ಪ್ರೀತಿಗೆ ಸಾಕ್ಷಿ. ಸಾಯಿಬಾಬಾ ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ. ನಾನು ಯಾವ ಧರ್ಮದ ಜೊತೆಯೂ ಸಂಬಂಧ ಹೊಂದಿಲ್ಲ ಎಂದು ಸಾಯಿಬಾಬಾ ಹೇಳ್ತಿದ್ದರು. ಹಾಗಾಗಿಯೇ ಸಾಯಿಬಾಬಾ ಅವರನ್ನು ನಾನಾ ಧರ್ಮಗಳನ್ನು ಅನುಸರಿಸುವ ಜನರು ಪೂಜಿಸುತ್ತಾರೆ, ಆರಾಧಿಸುತ್ತಾರೆ. ಸಾಯಿಬಾಬಾ ಅವರಿಗೆ ಅಸಂಖ್ಯಾತ ಭಕ್ತರಿದ್ದಾರೆ. ದೇಶದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಅಪಾರ ಭಕ್ತ ಸಮೂಹವನ್ನು ಸಾಯಿಬಾಬಾ ಹೊಂದಿದ್ದಾರೆ. ಸಾಯಿಬಾಬಾ ತತ್ವ, ಆದರ್ಶಗಳನ್ನು ಅವರ ಅನುಯಾಯಿಗಳು, ಜನರಿಗೆ ಬೋಧಿಸುತ್ತಾರೆ.

ಸಾಯಿಬಾಬಾ (Sai Baba) ಮೇಲೆ ಜನರು ಅಪಾರ ನಂಬಿಕೆ ಹೊಂದಿದ್ದಾರೆ. ಅವರು ಬೋಧಿಸಿದ ಜೀವನದ ಪಾಠವನ್ನು ಭಕ್ತರು (Devotees) ಪಾಲಿಸಿಕೊಂಡು ಬರ್ತಿದ್ದಾರೆ. ಸಾಯಿಬಾಬಾ ಭಕ್ತರು, ನಾನಾ ರೀತಿಯಲ್ಲಿ ದಾನ ನೀಡಿ ವಿಶ್ವದ ಅನೇಕ ಕಡೆ ದೇವಸ್ಥಾನಗಳನ್ನು ನಿರ್ಮಿಸಲು ನೆರವಾಗಿದ್ದಾರೆ. ಆಧ್ಯಾತ್ಮಿಕ (Spiritual) ಸಂತರ ದರ್ಶನ ಪಡೆಯಲು ದೂರದೂರುಗಳಿಂದ ಸಾಯಿಬಾಬಾ ಮಂದಿರಕ್ಕೆ ಭಕ್ತರು ಬರ್ತಾರೆ. ನೀವೂ ಸಾಯಿಬಾಬಾ ಭಕ್ತರಾಗಿದ್ದು, ಅವರ ಪ್ರಸಿದ್ಧ ದೇವಸ್ಥಾನಗಳ ಭೇಟಿಗೆ ಆಸಕ್ತಿ ಹೊಂದಿದ್ದರೆ ನಾವಿಂದು ಸಾಯಿಬಾಬಾರ ಕೆಲ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡ್ತೇವೆ. ಸಾಯಿಬಾಬಾ ಮಂದಿರ ಶಾಂತಿ – ನೆಮ್ಮದಿಯ ತಾಣವಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಕೆಲ ದೇವಸ್ಥಾನಕ್ಕೆ ಪ್ರತಿ ದಿನ ಲಕ್ಷಾಂತರ ಭಕ್ತರು ಹರಿದು ಬರ್ತಾರೆ.

Tap to resize

Latest Videos

ಮೇ ನಲ್ಲಿ ಶನಿ ನಕ್ಷತ್ರ ಬದಲಾವಣೆ, ಮೇ 12 ನಂತರ ಈ ರಾಶಿಗೆ ಅದೃಷ್ಟ,ವೃತ್ತಿ ಜೀವನದಲ್ಲಿ ಭಾರೀ ಸಕ್ಸಸ್

ಸಾಯಿಬಾಬಾರ ಪ್ರಸಿದ್ಧ ದೇವಸ್ಥಾನ : 
ಶಿರಡಿ ಸಾಯಿಬಾಬಾ ಮಂದಿರ :
ಸಾಯಿಬಾಬಾ ಎಂದಾಗ ಮೊದಲು ನೆನಪಾಗೋದು ಶಿರಡಿ. ಸಾಯಿಬಾಬಾ ತಮ್ಮ ಜೀವನದ ಬಹುತೇಕ ಸಮಯವನ್ನು ಶಿರಡಿಯಲ್ಲಿ ಕಳೆದಿದ್ದಾರೆ. ಅನೇಕ ಪವಾಡಗಳಿಗೆ ಶಿರಡಿ ಸಾಕ್ಷಿಯಾಗಿದೆ. ಸಾಯಿಬಾಬಾ ಈಗ್ಲೂ ಇದ್ದಾರೆ ಎಂದೇ ನಂಬುವ ಭಕ್ತರು ಅವರ ದರ್ಶನಕ್ಕಾಗಿ ಶಿರಡಿಗೆ ಬರ್ತಾರೆ. ಸಾಯಿಬಾಬಾ ಅನುಯಾಯಿಗಳ ಪ್ರಸಿದ್ಧ ಯಾತ್ರಾಸ್ಥಳ ಇದು.

ಕ್ಯಾಲಿಫೋರ್ನಿಯಾದ ಶಿರಡಿ ಸಾಯಿ ಪರಿವಾರ : ಶಿರಡಿ ಸಾಯಿ ಪರಿವಾರ, ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿದೆ. ಅಮೆರಿಕಾದ ಪ್ರಸಿದ್ಧ ದೇವಸ್ಥಾನಗಳಲ್ಲಿ ಇದೂ ಒಂದು. ಇಲ್ಲಿ ಭಜನೆ, ಆರತಿ ಜೊತೆ ಹಬ್ಬಗಳ ಆಚರಣೆ ಅತ್ಯಂತ ಸಂಭ್ರಮದಿಂದ ನಡೆಯುತ್ತದೆ. ಇಲ್ಲಿಗೆ ಪ್ರತಿದಿನ ಸಾವಿರಾರು ಭಕ್ತರು ಬರ್ತಾರೆ. ಸಾಯಿಬಾಬಾ ಅನುಯಾಯಿಗಳು ನೋಡಲೇಬೇಕಾದ ದೇವಸ್ಥಾನಗಳಲ್ಲಿ ಇದೂ ಒಂದು.

ಸಿಡ್ನಿ ಶ್ರೀ ಶಿರಡಿ ಸಾಯಿಬಾಬಾ ಮಂದಿರ : ಮೊದಲೇ ಹೇಳಿದಂತೆ ಭಾರತ ಮಾತ್ರವಲ್ಲ ವಿದೇಶದಲ್ಲೂ ಸಾಯಿಬಾಬಾ ಮಂದಿರವಿದೆ. ಅದ್ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಮಂದಿರ ಪ್ರಸಿದ್ಧವಾಗಿದೆ. ಸಾಯಿಬಾಬಾರವರ ಬೋಧನೆಗಳು ಮತ್ತು ತತ್ವಗಳನ್ನು ಇಲ್ಲಿ ಪ್ರಚಾರ ಮಾಡಲಾಗುತ್ತದೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಉತ್ಸವಗಳು ಇಲ್ಲಿ ನಡೆಯುತ್ತಿರುತ್ತವೆ. ಆಸ್ಟ್ರೇಲಿಯಾದಲ್ಲಿರುವ ಭಕ್ತರು, ಸಾಯಿಬಾಬಾ ದರ್ಶನ ಪಡೆಯಲು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬರ್ತಾರೆ. ನಿಮ್ಮ ಜೀವಮಾನದಲ್ಲಿ ಒಮ್ಮೆಯಾದ್ರೂ ಇಲ್ಲಿಗೆ ಭೇಟಿ ನೀಡಿ, ಸಾಯಿಬಾಬಾರ ದರ್ಶನ ಪಡೆಯಿರಿ. 

ಲೈಫಲ್ಲಿ ಜಿರಳೆಗಳ ಹಾಗೆ ಬದುಕಿ, ಸಕ್ಸಸ್‌ ಆಗ್ತೀರ ಎಂದಿದ್ದ್ಯಾಕೆ ಚೇತನ್ ಭಗತ್‌?

ಚೆನ್ನೈನ ಶಿರಡಿ ಸಾಯಿಬಾಬಾ ದೇವಸ್ಥಾನ : ಈ ಸಾಯಿಬಾಬಾ ಮಂದಿರ ಮೈಲಾಪುರದಲ್ಲಿದೆ. ಇದು ಅತ್ಯಂತ ಹಳೆಯ ದೇವಸ್ಥಾನಗಳಲ್ಲಿ ಒಂದು. 1952ರಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಸಾಯಿಬಾಬಾರ ಜೀವನ, ಸಾಧನೆ, ತತ್ವಗಳನ್ನು ಇಲ್ಲಿ ಬೋಧಿಸಲಾಗುತ್ತದೆ. ಬಿಳಿ ಅಮೃತ ಶಿಲೆಯಲ್ಲಿ ಸಾಯಿಬಾಬಾರ ಮೂರ್ತಿಯನ್ನು ನಿರ್ಮಿಸಲಾಗಿದೆ. ಈ ದೇವಸ್ಥಾನದ ಅತ್ಯಂತ ಪ್ರಮುಖ ಆಕರ್ಷಣೆ ಅಂದ್ರೆ ಶಿರಡಿ ಜ್ಯೋತಿಯಾಗಿದೆ. ವಿದೇಶಕ್ಕೆ ಹೋಗಿ ಶಿರಡಿ ಸಾಯಿಬಾಬಾರ ದರ್ಶನ ಪಡೆಯಲು ಸಾಧ್ಯವಿಲ್ಲ ಎನ್ನುವವರು ಚೆನ್ನೈನಲ್ಲಿರುವ ಈ ಪುರಾತನ ದೇವಸ್ಥಾನಕ್ಕೆ ಭೇಟಿ ನೀಡಬಹುದು. 

click me!