
ರಾಮ್ ಕುಮಾರ್ ಅವರನ್ನು ಧೀರೇನ್ ಆರ್ ರಾಜ್ ಕುಮಾರ್ ಆಗಿ ಕೆ.ಆರ್.ಜಿ.ಸ್ಟೂಡಿಯೋಸ್ ಮರುಪರಿಚಯಿಸಿದೆ. ಧೀರೇನ್ ಅವರ ಹುಟ್ಟುಹಬ್ಬದ ಅಂಗವಾಗಿ ಒಂದು ಹೊಸ ಚಿತ್ರವನ್ನೂ ಕೂಡ ಕೆ.ಆರ್.ಜಿ ಘೋಷಿಸಿದೆ. ಚಿತ್ರದ ಕುರಿತು ಮಾಹಿತಿಯನ್ನು ಸದ್ಯದಲ್ಲೇ ತಿಳಿಸಲಾಗುವುದು. ಈ ಧೀರೇನ್ ಆರ್ ರಾಜ್‌ಕುಮಾರ್ ಅವರು ಹಿಂದೊಮ್ಮೆ ಕನ್ನಡದಲ್ಲಿ ಬಹಳಷ್ಟು ಸಿನಿಮಾಗಳ ಮೂಲಕ ಮಿಂಚಿದ್ದ ನಟ ರಾಮ್‌ಕುಮಾರ್ ಹಾಗೂ ಡಾ ರಾಜ್‌ಕುಮಾರ್ ಮಗಳು ಪೂರ್ಣಿಮಾ ದಂಪತಿಗಳ ಮಗ.
ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶವನ್ನು ಹೊಂದಿರುವ ಕೆ.ಆರ್.ಜಿ ಸಂಸ್ಥೆ, ಇದೀಗ ಈ ನಿಟ್ಟಿನಲ್ಲಿ ಮತ್ತೊಂದು ಮಹತ್ತರ ಹೆಜ್ಜೆಯನ್ನು ಇಟ್ಟಿದೆ. 'ರತ್ನನ್ ಪ್ರಪಂಚ' ಮೂಲಕ ರೋಹಿತ್ ಪದಕಿ, 'ಪೌಡರ್' ಚಿತ್ರದ ಮೂಲಕ ಜನಾರ್ದನ್ ಚಿಕ್ಕಣ್ಣ, 'ಗುರುದೇವ್ ಹೊಯ್ಸಳ' ಚಿತ್ರದ ಮೂಲಕ ವಿಜಯ್ ನಾಗೇಂದ್ರ ಮುಂತಾದ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕೆ.ಆರ್.ಜಿ.ಗೆ ಇದ್ದು, ಈ ರೀತಿ ಹೊಸ ಪ್ರತಿಭೆಗಳನ್ನು ಪರಿಚಯಿಸಿ, ಕನ್ನಡ ಚಿತ್ರರಂಗವನ್ನು ಬಹು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಸಂಸ್ಥೆ ಹೊಂದಿದೆ.
ವಿಷ್ಣುವರ್ಧನ್ ನೆನಪಲ್ಲಿ ಮತ್ತೆ ಶುರು YPL, ಮೇ4-5ಕ್ಕೆ ಯಜಮಾನ ಪ್ರೀಮಿಯರ್ ಲೀಗ್
ಪ್ರಸ್ತುತವಾಗಿ ಬಹು ನಿರೀಕ್ಷಿತ ಉತ್ತರಕಾಂಡ ಚಿತ್ರ ಸೆಟ್ಟೇರಿದ್ದು, ಸದ್ಯ ಉತ್ತರ ಕರ್ನಾಟಕದ ವಿಜಯಪುರ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ ನಟ ಧನಂಜಯ್, ಶಿವರಾಜ್‌ಕುಮಾರ್ ಸೇರಿದಂತೆ ಹಲವಾರು ಕಲಾವಿದರು ನಟಿಸುತ್ತಿದ್ದಾರೆ. ಜತೆಗೆ, ಕೆಆರ್‌ಜಿ ಸ್ಟುಡಿಯೋಸ್‌ನ 'ಪೌಡರ್' ಚಿತ್ರದ ಡಬ್ಬಿಂಗ್ ಕಾರ್ಯ ಕೂಡ ಬಿರುಸಿನಿಂದ ಸಾಗುತ್ತಿದೆ.
'ಪುಷ್ಪಾ' ಬಿಡುಗಡೆ ಟೈಂ ಟೆನ್‌ಷನ್ ಬಿಚ್ಚಿಟ್ಟ ಅಲ್ಲು ಅರ್ಜುನ್; ಥ್ಯಾಂಕ್ಯೂ ಅಂದ್ರಲ್ಲ, ಅದು ಯಾರಿಗೆ?
ಕನ್ನಡದ ಹಿರಿಯ ನಟ ರಾಮ್‌ಕುಮಾರ್ ಅವರು ಕಾವ್ಯ, ಗೆಜ್ಜೆನಾದ, ಸ್ನೇಹಲೋಕ, ನಂಬರ್ 1 ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಡಾ ರಾಜ್‌ಕುಮಾರ್ ಮಗಳು ಪೂರ್ಣಿಮಾ ರಾಜ್‌ಕುಮಾರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ಅವರಿಬ್ಬರ ದಾಂಪತ್ಯದ ಫಲವೇ ಈ ನಟ ಧಿರೇನ್ ಆರ್ ರಾಜ್‌ಕುಮಾರ್. ಸದ್ಯ ಧೀರೇನ್ ಆರ್ ರಾಜ್‌ಕುಮಾರ್ ಅವರು ಸ್ಯಾಂಡಲ್‌ವುಡ್ ಕಡೆ ಸೆಳೆಯಲಗಪಟ್ಟಿದ್ದು, ಸಿನಿಮಾ ನಟರಾಗಲು ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಮೂಲಕ ಚಿತ್ರರಂಗಕ್ಕೆ ಅಡಿಯಿಡಲಿರುವ ಧೀರೇನ್ ಬಣ್ಣದ ಪ್ರಪಂಚದಲ್ಲಿ ಅದೆಷ್ಟು ಮಿಂಚಲಿದ್ದಾರೆ ಎಂಬುದನ್ನು ಕಾಲ ನಿರ್ಧರಿಸಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.