ಝೀ ಕನ್ನಡದಲ್ಲಿ ಪ್ರಸಾರವಾಗ್ತಿರೋ 'ಸೀತಾರಾಮ' ಸೀರಿಯಲ್ನಲ್ಲಿ ಮಿಂಚ್ತಿರೋ ವೈಷ್ಣವಿ ಗೌಡ, ಸೋಷಿಯಲ್ ಮೀಡಿಯಾದಲ್ಲಿ ಯಾವಾಗ್ಲೂ ಆಕ್ಟಿವ್ ಆಗಿರ್ತಾರೆ. ಮಾಡರ್ನ್, ಟ್ರೆಡಿಷನಲ್ ಲುಕ್ನಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸದ್ಯ ಗೋಲ್ಡನ್ ಕಲರ್ ಸೀರೆಯಲ್ಲಿ ಕ್ಯೂಟ್ ಆಗಿ ಮಿಂಚಿದ್ದು ನೆಟ್ಟಿಗರು ವಾವ್ ಅಂದಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಗಿ ನಟಿ ವೈಷ್ಣವಿ ಗೌಡ ತಮ್ಮ ಇನ್ಸ್ಟಾಗ್ರಾಂನಲ್ಲಿ ಹೊಸದಾಗಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಗೋಲ್ಡನ್ ಸೀರೆಯುಟ್ಟುಕೊಂಡು ಸೀತಮ್ಮ ಮಿಂಚುತ್ತಿದ್ದಾರೆ.
ದೊಡ್ಡದಾದ ಗೋಲ್ಡನ್ ಕಲರ್ ಇಯರಿಂಗ್, ಹಸಿರು ಮಣಿಗಳ ದೊಡ್ಡದಾದ ಸರ ಹಾಕ್ಕೊಂಡು ಸುಂದರವಾಗಿ ಕಾಣುತ್ತಿದ್ದಾರೆ. ವೈಷ್ಣವಿ ಗೌಡ ಲೇಟೆಸ್ಟ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಅಭಿಮಾನಿಗಳು ವೈಷ್ಣವಿ ಫೋಟೋಸ್ಗೆ ಲೈಕ್ಸ್, ಹಾರ್ಟ್ ಎಮೋಜಿ ಸೆಂಡ್ ಮಾಡಿದ್ದಾರೆ. ಇನ್ನು ಕೆಲ ಫ್ಯಾನ್ಸ್, ಲುಕ್ಕಿಂಗ್ ಬ್ಯೂಟಿಫುಲ್, ಕ್ಯೂಟಿ ಪೈ, ಡ್ರೀಮ್ ಗರ್ಲ್, ಸೋ ಕ್ಯೂಟ್ ಎಂದೆಲ್ಲಾ ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಬಳಕೆದಾರರು, ಆನೆ ಇರುವೆ ಕಥೆ ಹೇಳಿ ಮೇಡಂ ಎಂದು ಕಾಮೆಂಟ್ ಮಾಡಿದ್ದಾರೆ. ಹಲವರು ಇದೇನು ಆನೆ-ಇರುವೆ ಕಥೆ ಎಂದು ತಲೆಕೆಡಿಸಿಕೊಂಡಿದ್ದಾರೆ. ಸೀತಾರಾಮ್ ಸೀರಿಯಲ್ನಲ್ಲಿ ಇತ್ತೀಚಿಗೆ ಸೀತಮ್ಮ ಆನೆ-ಇರುವೆ ಕಥೆ ಹೇಳೋ ಸೀನ್ ಇದ್ದು, ಇದು ಎಲ್ಲರ ಗಮನ ಸೆಳೆದಿತ್ತು.
ವೈಷ್ಣವಿ ಗೌಡ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದು ಅಗ್ನಿಸಾಕ್ಷಿ ಧಾರಾವಾಹಿ. ಅದಾದ ಬಳಿಕ ಬಿಗ್ ಬಾಸ್ ನಲ್ಲೂ ಕೂಡ ಸಕ್ಕತ್ತಾಗಿ ಆಟ ಆಡಿದ್ದಾರೆ ವೈಷ್ಣವಿ ಗೌಡ. ಇದೀಗ ಸೀತಾ ರಾಮ ಧಾರಾವಾಹಿ ಕೂಡ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ.
ಕಿರುತೆರೆ ನಟಿ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರ್ತಾರೆ. ಮಾಡರ್ನ್, ಟ್ರೆಡಿಷನಲ್ ಲುಕ್ನಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದಕ್ಕೆ ನೆಟ್ಟಿಗರು ಸಹ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಾರೆ.
ಸೀತಾರಾಮ ಧಾರಾವಾಹಿ ಬಹಳ ಸುಂದರವಾಗಿ ಮೂಡಿ ಬರುತ್ತಿದೆ. ಸೀತಾ ಪಾತ್ರದಲ್ಲಿ ನಟಿಸುತ್ತಿರುವ ವೈಷ್ಣವಿ ಗೌಡ ಅವರ ಪಾತ್ರವು ಕೂಡಾ ಉತ್ತಮವಾಗಿದ್ದು, ಪ್ರೇಕ್ಷಕರು ಅವರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.