ಬಿಕಿನಿಯಲ್ಲಿ ಸಾರಾ ಆಲಿ ಖಾನ್‌ ಹಾಟ್ ಲುಕ್‌, ಝೂಮ್ ಮಾಡಿ ನೋಡಿ ಅಂತಿದ್ದಾರೆ ನೆಟ್ಟಿಗರು!

First Published Nov 22, 2023, 3:13 PM IST

ಬಾಲಿವುಡ್ ನಟಿ ಸಾರಾ ಆಲಿ ಖಾನ್‌ ಆಗಾಗ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಬಟ್ಟೆಗಳ ಆಯ್ಕೆ ಅಥವಾ ಧಾರ್ಮಿಕ ನಂಬಿಕೆಗಳ ಬಗ್ಗೆ ತಮ್ಮದೇ ಆದ ಆಯ್ಕೆಗಳಿದ್ದು, ಬೇರೆಯವರು ಕಮೆಂಟ್ ಮಾಡೋ ಅಗತ್ಯವಿಲ್ಲವೆಂದು ಈ ಹಿಂದೆ ನಟಿ ಹೇಳಿದ್ದರು. ಸದ್ಯ ಸಾರಾ ಬಿಕಿನಿ ಹಾಕ್ಕೊಂಡು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್ ನಟಿ ಸಾರಾ ಆಲಿ ಖಾನ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಟ್ರೆಡಿಶನಲ್ ಹಾಗೂ ಮಾಡರ್ನ್‌ ಡ್ರೆಸ್ ಹಾಕ್ಕೊಂಡು ಸಖತ್ ಕ್ಯೂಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಸೆಲೆಬ್ರಿಟಿಯಾಗಿದ್ರೂ ಸಿಂಪಲ್ ಆಗಿರೋ ಸಾರಾಗೆ ಕೋಟ್ಯಾಂತರ ಅಭಿಮಾನಿಗಳೂ ಇದ್ದಾರೆ. 

ಸಿನಿಮಾರಂಗದ ದೊಡ್ಡ ಯಶಸ್ಸಿಗಾಗಿ ಎದುರು ನೋಡುತ್ತಿರುವ ಸಾರಾ ಅಲಿ ಖಾನ್ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಹೊಸ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ.  ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಸಾರಾ ಹಲವು ಗ್ಲಾಮರಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬಿಕಿನಿ ಹಾಕ್ಕೊಂಡು ಬಂಗಲೆಯ ಮುಂದೆ ನಿಂತು ಬಿಸಿಲಿಗೆ ಮೈಯೊಡ್ಡಿರೋ ಫೋಟೋವನ್ನು ಸಾರಾ ಅಲಿಖಾನ್ ಶೇರ್ ಮಾಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಕಿವಿಗೆ ಹೂವನ್ನಿಟ್ಟು ಮುದ್ದಾಗಿ ಸ್ಮೈಲ್ ಮಾಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಾರಾ ಬಿಕಿನಿ ಲುಕ್‌ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಹಾರ್ಟ್‌, ಸ್ಮೈಲ್‌ ಎಮೋಜಿ ಕಳುಹಿಸಿ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ನಿಮಗೆ ದೇಸಿ ಉಡುಪು ಹೆಚ್ಚು ಸೂಟ್ ಆಗುತ್ತೆ. ಬಿಕಿನಿಯಲ್ಲ' ಎಂದಿದ್ದಾರೆ. ಮತ್ತೊಬ್ಬರು, 'ಬಾಲಿವುಡ್ ನಟಿಯರು ಅವಕಾಶ ಸಿಗದಿದ್ದಾಗ ಹೀಗೆ ಬಟ್ಟೆ ಬಿಚ್ಚುವ ಕೆಲಸ ಮಾಡುತ್ತಾರೆ' ಎಂದು ಕಮೆಂಟಿಸಿದ್ದಾರೆ.

ಇನ್ನೊಬ್ಬರು, 'ಬಿಕಿನಿ ಬೇಬಿ' ಎಂದಿದ್ದಾರೆ. ಮತ್ತೆ ಕೆಲವು ಬಳಕೆದಾರರು, 'ಯಾರೆಲ್ಲಾ ಫೋಟೋವನ್ನು ಝೂಮ್ ಮಾಡಿ ನೋಡಿದ್ರೀ' ಎಂದು ಪ್ರಶ್ನಿಸಿದ್ದಾರೆ. ಸಾರಾ ಪೋಟೋ ಅಭಿಮಾನಿಗಳ ಮನಕ್ಕೆ ಲಗ್ಗೆ ಹಾಕಿರೋದಂತೂ ನಿಜ.

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸಾರಾ ಆಲಿ ಖಾನ್‌, ಇನ್ಸ್ಟಾಗ್ರಾಮ್‌ನಲ್ಲಿ 43 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಫೋಟೋ ಶೇರ್ ಮಾಡುತ್ತಿದ್ದಂತೆ ಸಿಕ್ಕಾಪಟ್ಟೆ ಲೈಕ್ಸ್ ಹರಿದು ಬಂದಿದೆ.  

ಸಿನಿಮಾ ವಿಚಾರಕ್ಕೆ ಬರುವುದಾರೆ ಸಾರಾ ಬಳಿ ಅನೇಕ ಸಿನಿಮಾಗಳಿವೆ. ಜರಾ ಹತ್ಕೆ ಜರಾ ಬಚ್ ಕೆ, ಅತ್ರಂಗಿ ರೇ, ಕೇದಾರ್‌ನಾಥ್‌, ಸಿಂಬಾ, ಲವ್ ಆಜ್‌ ಕಲ್‌,  ಏ ವತನ್ ಮೇರೆ ವತನ್, ಮರ್ಡರ್ ಮುಬಾರಕ್, ಲುಕಾ ಚುಪ್ಪಿ ಸಿನಿಮಾಗಳಲ್ಲಿ ಸಾರಾ ಅಲಿ ಖಾನ್ ನಟಿಸಿದ್ದಾರೆ.

ಬಾಲಿವುಡ್ ನಟಿ ಸಾರಾ ಅಲಿಖಾನ್ ತಮ್ಮ ಮೂವರು ಸೋದರರು ಹಾಗೂ ಕುಟುಂಬದೊಂದಿಗೆ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಪ್ಪ ಸೈಫ್ ಅಲಿ ಖಾನ್ ಮುಸ್ಲಿಂ ಆದರೂ ಸಾರಾ ಅಲಿಖಾನ್ ತನ್ನ ಮೂವರು ಸೋದರರಿಗೆ ಆರತಿ ಬೆಳಗಿ ತಿಲಕವಿಟ್ಟು ಅದ್ದೂರಿಯಾಗಿ ರಕ್ಷಾಬಂಧನ ಹಬ್ಬವನ್ನು ಆಚರಿಸಿದ್ದರು..

ಸಾರಾ ಕುಟುಂಬದ ಬಗ್ಗೆ ಹೇಳುವುದಾದರೆ  ಹಿಂದೂ-ಮುಸ್ಲಿಂ ಧರ್ಮೀಯರಿಂದ ಮೇಳೈಸಿದ ಬಾಲಿವುಡ್ ಕುಟುಂಬವಿದು. ಇಲ್ಲಿ ಸಾರಾ ಅಲಿ ಖಾನ್​ ಅಜ್ಜ ಮತ್ತು ಅಪ್ಪ ಇಬ್ಬರೂ ಮುಸ್ಲಿಂ ಆದರೆ ಅಜ್ಜಿ ಮತ್ತು ತಾಯಿ ಹಿಂದೂ. ಸಾರಾ ಅಲಿ ಖಾನ್ ಹಿಂದೂ ಧರ್ಮವನ್ನು ಫಾಲೋ ಮಾಡುತ್ತಿದ್ದು, ದೇಗುಲಗಳಿಗೆ ಭೇಟಿ ನೀಡುವ ಮೂಲಕ ಅವರು ಆಗಾಗ ಸುದ್ದಿಯಾಗುತ್ತಿರುತ್ತಾರೆ. 

click me!