ನಟಿ ಸಮಂತಾ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಆದರೆ ಇನ್ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿದ್ದಾರೆ. ಸ್ಟೈಲಿಶ್ ಪೋಟೋಗಳನ್ನು ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇತ್ತೀಚಿಗೆ ರೆಡ್ ಸ್ಯಾರಿಯುಟ್ಟ ಡ್ರಿಜ್ಲಿಂಗ್ ಪೋಟೋವನ್ನು ಶೇರ್ ಮಾಡಿದ್ದಾರೆ.
ಬ್ಲಡ್ ರೆಡ್ನ ಶೈನಿಂಗ್ ಸೀರೆಯುಟ್ಟು ವೈಟ್ ಕರ್ಟನ್ ಮುಂದೆ ನಿಂತು ಹಾಟ್ ಆಗಿ ಫೋಟೋಗೆ ಫೋಸ್ ನೀಡಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲ್ತಿದ್ದ ಸಮಂತಾ ಹಲವು ಸಮಯಗಳಿಂದ ಸುದ್ದಿಯಲ್ಲಿರಲ್ಲಿಲ್ಲ. ಹೀಗಾಗಿ ಸ್ಯಾಮ್ ಕಂ ಬ್ಯಾಕ್ಗೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಸಮಂತಾ ರೆಡ್ ಸ್ಯಾರಿ ಲುಕ್ಗೆ ಲಕ್ಷಾಂತರ ಮಂದಿ ಲೈಕ್ಸ್ ಹಾಗೂ ಕಾಮೆಂಟ್ ಮಾಡಿದ್ದಾರೆ. ಬ್ಯೂಟಿ, ಹಾಟ್, ಕ್ಯೂಟ್, ಸೆಕ್ಸೀ ಎಂದೆಲ್ಲಾ ಕಾಮೆಂಟ್ನಲ್ಲಿ ತಿಳಿಸಿದ್ದಾರೆ. ಮತ್ತೆ ಕೆಲವರು 'ಉಫ್ ಬ್ಯಾಕ್ ಲುಕ್ ಸೂಪರ್' ಎಂದು ಹೊಗಳಿದ್ದಾರೆ.
ಮತ್ತೊಬ್ಬ ಅಭಿಮಾನಿ, ರೆಡ್ ರೋಸ್ ಎಂದು ಕಾಮೆಂಟ್ ಮಾಡಿದ್ದಾರೆ. 'ಚೆರ್ರಿ ಚೆರ್ರಿ ಲೇಡಿ' ಎಂದು ಇನ್ನೊಬ್ಬ ಅಭಿಮಾನಿ ಹೊಗಳಿದ್ದಾರೆ. ಮತ್ತೆ ಹಲವರು 'ವೆಲ್ಕಂ ಟು ಮಲೇಷ್ಯಾ' ಎಂದು ತಿಳಿಸಿದ್ದಾರೆ.
ರಿಯಾಲಿಟಿ ಶೋ MTV ಹಸ್ಲ್ ಹೊಸ ಸೀಸನ್ ಶುರುವಾಗ್ತಿದೆ. ಮುಂಬರುವ ಸಂಚಿಕೆಯಲ್ಲಿ ನಟಿ ಸಮಂತಾ ಅವರು ಕೇಡೆನ್ ಶರ್ಮಾ ಅವರ ರಾಪ್ಗೆ ಗ್ರೂವ್ ಮಾಡಿದ್ದು, ಪ್ರೋಮೋವನ್ನು ಸಹ ಹಂಚಿಕೊಂಡಿದ್ದರು.
ಕೊನೆಯದಾಗಿ ವಿಜಯ್ ದೇವರಕೊಂಡ ಜೊತೆ 'ಖುಷಿ' ಚಿತ್ರದಲ್ಲಿ ನಟಿಸಿ ಬ್ಲಾಕ್ ಬಸ್ಟರ್ ಹಿಟ್ ಪಡೆದಿದ್ದು ಗೊತ್ತೇ ಇದೆ. ಅದಕ್ಕೂ ಮುನ್ನ ‘ಯಶೋದಾ’, ‘ಶಾಕುಂತಲಂ’ ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.
ಆದರೆ 'ಯಶೋದಾ' ಚಿತ್ರದ ನಂತರ ಸ್ಯಾಮ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮೆಯೋಸಿಟಿಸ್ನಿಂದ ಬಳಲುತ್ತಿದ್ದರು. ಇದರಿಂದ ಚೇತರಿಸಿಕೊಳ್ಳಲು ಸುಮಾರು ಒಂದು ವರ್ಷ ಸಿನಿಮಾಗಳಿಂದ ವಿರಾಮ ತೆಗೆದುಕೊಂಡರು. ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
ಖ್ಯಾತ ನಟಿಯಾಗಿರುವ ಸಮಂತಾ ರುತ್ ಪ್ರಭು ಅವರು ಕೇವಲ ನಟನೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಮಾತ್ರವಲ್ಲ, ಉಡುಪು ಬ್ರಾಂಡ್ ಸಾಕಿ ಮತ್ತು ಏಕಮ್ ಪ್ರಿ-ಸ್ಕೂಲ್ ಬಿಸಿನೆಸ್ನಂತಹ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸಮಂತಾ ಅವರು ಆಹಾ ಒಟಿಟಿಯಲ್ಲಿ ಸ್ಯಾಮ್ ಜಾಮ್ ಮತ್ತು ಒಂದೆರಡು ಸಂದರ್ಶನಗಳನ್ನು ಹೋಸ್ಟ್ ಮಾಡಿದ್ದಾರೆ. ಹಾಗಾಗಿ ಹೊಸ ಹೊಸ ಕೆಲಸ, ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು ಸಮಂತಾ ಅವರ ನೆಚ್ಚಿನ ಹವ್ಯಾಸಗಳಲ್ಲಿ ಒಂದು.
ಸಮಂತಾ 'ದಿ ಫ್ಯಾಮಿಲಿ ಮ್ಯಾನ್ 2' ಮೂಲಕ ಒಟಿಟಿಗೆ ಕಾಲಿಟ್ಟರು. ಮೊದಲ ವೆಬ್ಸಿರೀಸ್ನಲ್ಲಿಯೇ ಭರ್ಜರಿ ಸಕ್ಸಸ್ ಕಂಡಿದ್ದಾರೆ ಈ ಸೌತ್ ಚೆಲುವೆ, ಈಗ ನಟಿ ಇನ್ನೊಂದು ವೆಬ್ ಸಿರೀಸ್ ಮಾಡಿದ್ದಾರೆ.