ಕೊಚ್ಚೆಯಿಂದ ಈಗ ದೂರ ಇದ್ದೇನೆ ಜಮೀರ್ ಮತ್ತು ಆ ನಾಲ್ಕು ಮಂದಿ ಜೊತೆಗೆ ಇದ್ದದ್ದು ನನ್ನ ಜೀವನದ ಅತ್ಯಂತ ಕರಾಳ ದಿನಗಳು. ಈಗ ಕೊಚ್ಚೆ ಎಂದು ಅವರನ್ನು ದೂರ ಇಟ್ಟಿದ್ದೇನೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ಮೈಸೂರು(ನ.16): ನಾನು ಯಾವತ್ತೂ ಅವರನ್ನು (ಜಮೀರ್) ಕುಳ್ಳ ಎಂದು ಕರೆದಿಲ್ಲ. ನಮ್ಮ ಸ್ನೇಹ ಇದ್ದದ್ದು ರಾಜಕೀಯವಾಗಿ ಅಷ್ಟೆ. ದುಡ್ಡಿನ ಮದದಿಂದ ಅವರು ಈ ರೀತಿ ಮಾತಾಡ್ತಿದ್ದಾರೆ. ನಿಯತ್ತಾಗಿ ಬಸ್ ಓಡಿಸಿ ಬಂದ ದುಡ್ಡಾ ಅದು? ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ಪ್ರಶ್ನಿಸಿದ್ದಾರೆ.
ಶುಕ್ರವಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿ, ಚಾಮುಂಡಿ ತಾಯಿ ಮುಂದೆ ನಿಂತು ಹೇಳ್ತಿದ್ದೇನೆ ಕೇಳಿ. ಕರಿಯ, ಕುಳ್ಳ ಎಂದು ಮಾತಾಡಿಸಿಕೊಳ್ಳುವ ಸಂಸ್ಕೃತಿ ಯಿಂದ ಬಂದವನು ನಾನಲ್ಲ. ಅವರ ಮಾತುಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕುಟುಕಿದರು.
undefined
ಅಕ್ರಮ ಆಸ್ತಿ: ಸಚಿವ ಜಮೀರ್ ಅಹ್ಮದ್‌ಗೆ ಲೋಕಾ ಬುಲಾವ್
ಜಮೀರ್ ಜೊತೆಗಿನ ಸಹವಾಸ ನನ್ನ ಜೀವನದ ಅತ್ಯಂತ ಕರಾಳ ದಿನಗಳು. ಜಮೀರ್ ಮತ್ತು ಆ ನಾಲ್ಕು ಮಂದಿ ಜೊತೆಗೆ ಇದ್ದದ್ದು ನನ್ನ ಜೀವನದ ಕರಾಳ ದಿನ. ಈಗ ಕೊಚ್ಚೆ ಎಂದು ಅವರನ್ನು ದೂರ ಇಟ್ಟಿದ್ದೇನೆ ಎಂದರು. ಸಿಎಂ ಹಾಗೂ ಡಿಸಿಎಂ ಜಮೀರ್ ಅವರ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಇದು ನಾಗರಿಕ ಸರ್ಕಾರನಾ? ಇಂತಹ ಹೇಳಿಕೆಯನ್ನು ಅಮಾಯಕರು ಕೊಟ್ಟರೆ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತಾರೆ. ಈಗ ಯಾಕೆ ಸುಮ್ಮನೆ ಇದ್ದಾರೆ ಎಂದು ಅವರು ಕಿಡಿಕಾರಿದರು.
ಹೊರಟ್ಟಿಗೆ ಹೊಡೆಯಲು ಹೋಗಿದ್ದ ಜಮೀರ್:
ಬಸವರಾಜ ಹೊರಟ್ಟಿಯವರು ಹಿಂದೆ ನನ್ನನ್ನು ಕುಮಾರ ಎಂದು ಕರೆದಾಗ ಅವರನ್ನು ಹೊಡೆಯಲು ಹೋದ ಗಿರಾಕಿ ಇವರು (ಜರ್ಮೀ), ಹೊರಟ್ಟಿ ಅವರು ಈಗಲೂ ಇದ್ದಾರೆ. ಬೇಕಾದರೆ, ಅವರನ್ನೇ ಕೇಳಿ. ಆವತ್ತು ಅವರನ್ನು ಹೊಡೆಯಲು ಇವರುಹೋಗಿರಲಿಲ್ವಾ ಅಂತಾ ಎಂದು ಪ್ರಶ್ನಿಸಿದರು.
ಕೊಚ್ಚೆಯಿಂದ ಈಗ ದೂರ ಇದ್ದೇನೆ ಜಮೀರ್ ಮತ್ತು ಆ ನಾಲ್ಕು ಮಂದಿ ಜೊತೆಗೆ ಇದ್ದದ್ದು ನನ್ನ ಜೀವನದ ಅತ್ಯಂತ ಕರಾಳ ದಿನಗಳು. ಈಗ ಕೊಚ್ಚೆ ಎಂದು ಅವರನ್ನು ದೂರ ಇಟ್ಟಿದ್ದೇನೆ. ಚನ್ನಪಟ್ಟಣದಲ್ಲಿ ಜನತೆಯ ಆಶೀರ್ವಾದ ಆಗಿದೆ. ಉತ್ತಮವಾದ ರೀತಿಯಲ್ಲಿ ಗೆಲ್ಲುತ್ತೇವೆ. ರಾಜಕೀಯ ಏನ್ ನಡೆದಿದೆ ಎಂಬುದನ್ನು ಯೋಗೇಶ್ವರ್‌ಅವರೇ ವಿಮರ್ಶೆ ಮಾಡಿದ್ದಾರೆ. ಜಮೀರ್ ಹೇಳಿಕೆಯಿಂದ ಏನೂ ವ್ಯತ್ಯಾಸ ಆಗಿಲ್ಲ. ನಾವು ಚನ್ನಪಟ್ಟಣದಲ್ಲಿ ಗೆಲ್ಲುತ್ತೇವೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.