ಸಮಂತಾ ಹಾಟ್ ಬಿಕಿನಿ ಪೋಸ್ ನೋಡಿ ನಟಿ ಅನುಷ್ಕಾ ಶರ್ಮಾ ಹೇಳಿದ್ದೇನು?

First Published | Jun 7, 2022, 11:43 AM IST

ನಟಿ ಸಮಂತಾ ಶೇರ್ ಮಾಡಿರುವ ಬಿಕಿನಿ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅಭಿಮಾನಿಗಳು ಬೆಂಕಿ ಎನ್ನುತ್ತಿದ್ದಾರೆ. ಅಭಿಮಾನಿಗಳ ಜೊತೆಗೆ ಸ್ಟಾರ್ ನಟಿಯರು ಸಹ ಕಾಮೆಂಟ್ ಹಾಡಿ ಹಾಡಿಹೊಗಳುತ್ತಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಶೇರ್ ಮಾಡಿರುವ ಹೊಸ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಇಬ್ಬಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಸಮಂತಾ ಸದಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.

ಸದ್ಯ ಸಮಂತಾ ಶೇರ್ ಮಾಡಿರುವ ಬಿಕಿನಿ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅಭಿಮಾನಿಗಳು ಬೆಂಕಿ ಎನ್ನುತ್ತಿದ್ದಾರೆ. ಅಭಿಮಾನಿಗಳ ಜೊತೆಗೆ ಸ್ಟಾರ್ ನಟಿಯರು ಸಹ ಕಾಮೆಂಟ್ ಹಾಡಿ ಹಾಡಿಹೊಗಳುತ್ತಿದ್ದಾರೆ.

Tap to resize

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕಾಮೆಂಟ್ ಮಾಡಿ 'ಹಾಟಿ' ಎಂದು ಹೇಳಿ ಬೆಂಕಿ ಇಮೋಜಿ ಹಾಕಿದ್ದಾರೆ. ಇನ್ನು ನಟಿ ಲಕ್ಷ್ಮಿ ಮಂಚು, ಹನ್ಸಿಕಾ, ಚಿರಂಜೀವಿ ಪುತ್ರಿ ಸುಶ್ಮಿತಾ ಸೇರಿದಂತೆ ಅನೇಕರು ಕಾಮೆಂಟ್ ಮಾಡಿ ಹಾಡಿಹೊಗಳುತ್ತಿದ್ದಾರೆ.

ಸಮಂತಾ ಸದ್ಯ ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜೊತೆಗೆ ವೆಬ್ ಸೀರಿಸ್ ಕೂಡ ಮಾಡುತ್ತಿದ್ದಾರೆ. ಫ್ಯಾಮಿಲಿ ಮ್ಯಾನ್-2 ಬಳಿಕ ಸಮಂತಾ ಸಿಕ್ಕಾಪಟ್ಟೆ ಖ್ಯಾತಿಗಳಿಸಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ.

ಸಮಂತಾ ಸದ್ಯ ತೆಲುಗಿನಲ್ಲಿ ಶಾಕುಂತಲಂ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾ ಬಳಿಕ ಯಶೋಧ ಮತ್ತು ಖುಷಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಖುಷಿಯಲ್ಲಿ ಸಮಂತಾ ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ದೇವರಕೊಂಡ ಜೊತೆ ನಟಿಸುತ್ತಿದ್ದಾರೆ.

ಇತ್ತೀಚಿಗಷ್ಟೆ ಸಮಂತಾ ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ರಣ್ವೀರ್ ಮತ್ತು ಸಮಂತಾ ಸೆಲ್ಫಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಂದಹಾಗೆ ಇಬ್ಬರೂ ಜಾಹೀರಾತು ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಚಿತ್ರೀಕರಣ ವೇಳೆ ಕ್ಲಿಕ್ಕಿಸಿದ ಫೋಟೋ ಅದಾಗಿತ್ತು.

Latest Videos

click me!