ಎಐ ಜನರೇಟೆಡ್ ಟೂಲ್ ಬಳಸಿ ನಟಿ ಐಶ್ವರ್ಯಾ ರೈ ಬಚ್ಚನ್ 80ನೇ ವಯಸ್ಸಿನಲ್ಲಿ ಹೇಗೆ ಕಾಣಿಸುತ್ತಾರೆ ಎಂದು ತೋರಿಸಲಾಗಿದೆ. ಆದ್ರೆ ಇದು ಕೇವಲ ಮಧ್ಯಮ ವರ್ಗದ ಜನತೆ ಜೊತೆ ಮಾತ್ರ ಆಗುತ್ತೆ ಎಂದು ಕಮೆಂಟ್ ಮಾಡಿದ್ದಾರೆ.
ಮುಂಬೈ: ಬಾಲಿವುಡ್ ಸುರಸುಂದರಿ, ಕರಾವಳಿ ಚೆಲುವೆ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ವಯಸ್ಸು 50 ಆದರೂ, 30ರ ಹರೆಯದವರಂತೆ ಕಾಣುತ್ತಾರೆ. ಸೌಂದರ್ಯವತಿ ಹೇಗಿರುತ್ತಾಳೆ ಅಂದ್ರೆ ಜನರು ನೀಡುವ ಉದಾಹರಣೆಯೇ ಐಶ್ವರ್ಯಾ ರೈ. ಇಂದಿಗೂ ಸೌಂದರ್ಯವರ್ಧಕ ಉತ್ಪನ್ನಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಐಶ್ವರ್ಯಾ ರೈ ಬಚ್ಚನ್ ಎಲ್ಲಾ ಲುಕ್‌ಗಳಲ್ಲಿಯೂ ಚೆಂದವಾಗಿಯೇ ಕಾಣುತ್ತಾರೆ. ಮಾರ್ಡನ್, ಟ್ರೆಡಿಷನಲ್, ಸಿಂಪಲ್ ಅಟೈರ್ ಸೇರಿದಂತೆ ಎಲ್ಲಾ ಅಟೈರ್‌ನಲ್ಲಿಯೂ ಐಶ್ವರ್ಯಾ ನೋಡುಗರಿಗೆ ಇಷ್ಟವಾಗುತ್ತಾರೆ. 50 ವರ್ಷದ ಐಶ್ವರ್ಯಾ ರೈ ಬಚ್ಚನ್, 80ನೇ ವಯಸ್ಸಿನಲ್ಲಿ ಹೇಗೆ ಕಾಣುತ್ತಾರೆ ಎಂದು ಒಮ್ಮೆ ಕಲ್ಪನೆ ಮಾಡಿಕೊಳ್ಳಿ. ನಿಮ್ಮ ಕಲ್ಪನೆಗೆ ಎಐ ರೂಪವನ್ನು ನೀಡಿದೆ.
ಎಐ ಜನರೇಟೆಡ್ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಐಶ್ವರ್ಯಾ ರೈ ಅವರನ್ನು ಬಾಲ್ಯ, ಯೌವನ ಹಾಗೂ ಮುಪ್ಪಾವಸ್ಥೆಯುಲ್ಲಿ ಹೇಗೆ ಕಾಣಿಸುತ್ತಾರೆ ಎಂಬುದನ್ನು ತೋರಿಸಲಾಗಿದೆ. ಈ ಫೋಟೋ ನೋಡಿದ ನೆಟ್ಟಿಗರು, ಇದನ್ನು ನಂಬಲು ಆಗಲ್ಲ. ಈ ಲುಕ್‌ನಲ್ಲಿ ಐಶ್ವರ್ಯಾ ರೈ ಅವರನ್ನು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಶಿವಣ್ಣನ ಕಾಲಿಗೆರಗಿದ ಐಶ್ವರ್ಯಾ ರೈ ಮಗಳು! ಐಶ್ ಬೇಬಿ ಕಲಿಸಿಕೊಟ್ಟ ಸಂಸ್ಕಾರಕ್ಕೆ ಶಬ್ಬಾಸ್ ಅಂತಿದ್ದಾರೆ ನೆಟ್ಟಿಗರು!
active.suresh ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಐಶ್ವರ್ಯಾ ರೈ ಬಚ್ಚನ್ ಫೋಟೋಗಳನ್ನು ಶೇರ್ ಮಾಡಿಕೊಳ್ಳಲಾಗಿದೆ. ಐಶ್ವರ್ಯಾ ರೀತಿಯಲ್ಲಿಯೇ ಬಾಲಿವುಡ್ ಸ್ಟಾರ್‌ಗಳಾದ ಅನಿಲ್ ಕಪೂರ್, ಮಾಧುರಿ ದೀಕ್ಷಿತ್, ಕರೀನಾ ಕಪೂರ್ ಖಾನ್, ರೇಖಾ, ರಿಷಿ ಕಪೂರ್, ದಿವ್ಯಾ ಭಾರತಿ, ಧರ್ಮೇಂದ್ರ, ಕತ್ರಿನಾ ಕೈಫ್, ಕರೀಷ್ಮಾ ಕಪೂರ್ ಸೇರಿದಂತೆ ಹಲವು ತಾರೆಯರ ಎಐ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. active.suresh ಇನ್‌ಸ್ಟಾಗ್ರಾಂ ಖಾತೆಯನ್ನು 18 ಸಾವಿರಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.
ಸದ್ಯ ಐಶ್ವರ್ಯಾ ರೈ ಅವರ ಎಐ ಫೋಟೋ ಕಂಡು, ಐಶ್ವರ್ಯಾ ರೈ ವಿಶ್ವ ಸುಂದರಿಯಾಗಿದ್ದು, ವಯಸ್ಸು ಹೆಚ್ಚಾಗುತ್ತಿದ್ದಂತೆ ಅವರ ಸೌಂದರ್ಯ ಹೆಚ್ಚಾಗುತ್ತಾ ಹೋಗುತ್ತದೆ. ಈ ಫೋಟೋದಲ್ಲಿ ತೋರಿಸಿದಂತೆ ಮುಪ್ಪು ಕೇವಲ ಮಧ್ಯಮ ವರ್ಗದ ಜನರಿಗೆ ಆಗುತ್ತದೆ ಎಂದು ಅಮಿಶಾ ಎಂಬವರು ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್‌ಗೆ ನೂರಾರು ಲೈಕ್ಸ್ ಬಂದಿದ್ದು, ಹಲವು ಬಳಕೆದಾರರು ಅಮಿಶಾ ಮಾತನ್ನು ಒಪ್ಪಿಕೊಂಡಿದ್ದಾರೆ. ಎಡಿಟಿಂಗ್ ಚೆನ್ನಾಗಿದೆ, ಆದರೆ ಐಶ್ವರ್ಯಾ ರೈ ಹೀಗೆಯೇ ಕಾಣುತ್ತಾರೆ ಎಂಬುವುದು ಸುಳ್ಳು ಎಂದು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಂದಿಷ್ಟು ಮಂದಿ ನಮ್ಮ ಅಜ್ಜಿಯೂ ಹೀಗೆ ಕಾಣ್ತಾರೆ, ಇದು ಐಶ್ವರ್ಯಾ ರೈ ಅಲ್ಲ ಅವರತ್ತೆ ಜಯಾ ಬಚ್ಚನ್ ಲುಕ್ ಎಂದು ಕಮೆಂಟ್ ಮಾಡಿದ್ದಾರೆ.
'ನೀನು ಯಾಕೆ ತಾಯಿಯಾದೆ': ಐಶ್ವರ್ಯಾ ರೈ ಮೇಲೆ ಕೋಪಗೊಂಡು ಲಾಂಗ್ ಮೆಸೇಜ್ ಮಾಡಿದ ನಿರ್ದೇಶಕ ಆರ್‌ಜಿವಿ!