49 ವರ್ಷದ ಸುಶ್ಮಿತಾ ಸೇನ್ ಅವರು ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದಾರೆ. ಅವರು ಇನ್ನೂ ಮದುವೆಯಾಗಿಲ್ಲ ಆದರೆ ಹಲವು ಜನರ ಜೊತೆ ಸಂಬಂಧದಲ್ಲಿದ್ದರು.
ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿರುವ 49ರ ಹರೆಯದ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಅವರು ಈವರೆಗೆ ಮದುವೆಯಾಗಿಲ್ಲ. ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಆದರೆ ಅವರ ಜೀವನದಲ್ಲಿ ಹಲವು ಮಂದಿಯ ಜೊತೆಗೆ ಸಂಬಂಧದಲ್ಲಿದ್ದರು. ಯಾರು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ನಿರ್ದೇಶಕ ವಿಕ್ರಮ್ ಭಟ್ ಸುಶ್ಮಿತಾ ಸೇನ್ ಮತ್ತು ಅಮೀಶಾ ಪಟೇಲ್ ಅವರೊಂದಿಗೆ ಸಂಬಂಧ ಹೊಂದಿದ್ದರು. 1997 ರಿಂದ 1999ರವರೆಗೆ ನಟಿಯ ಜೊತೆಗೆ ಸಂಬಂಧದಲ್ಲಿದ್ದರು. ಸುಶ್ಮಿತಾ ಅವರೊಂದಿಗಿನ ಅವರ ಸಂಬಂಧವು ಬಾಲ್ಯದ ಪ್ರಿಯತಮೆ ಅದಿತಿಯೊಂದಿಗಿನ ವಿವಾಹದ ನಂತರ ಕೊನೆಗೊಂಡಿತು.
2006ರಲ್ಲಿ ಸುಶ್ಮಿತಾ ಸೇನ್ ನಟ ರಂದೀಪ್ ಹೂಡಾ ಜೊತೆ ಮೂರು ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು ಮತ್ತು 2009ರಲ್ಲಿ ಸಂಬಂಧ ಮುರಿದುಬಿತ್ತು. ಸಂಬಂಧ ಸರಿ ಇಲ್ಲದಾಗ ಸರಿ ಹೊಂದದಾಗ ಬೇರೆಯಾಗುವುದೇ ಒಳಿತು. ಆಕೆ ವಿಶ್ವಸುಂದರಿ ನಾನು ಸ್ಟಾರ್ ನಟ ಅಲ್ಲ ಎಂದು ಹೇಳಿಕೊಂಡಿದ್ದರು ರಂದೀಪ್ ಹೂಡಾ.
ಚಲನಚಿತ್ರ-ನಿರ್ಮಾಪಕ ಮುದಸ್ಸರ್ ಅಜೀಜ್ ಮತ್ತು ಸುಶ್ಮಿತಾ ಸೇನ್ ಅವರು ತಮ್ಮ ಲಿವ್-ಇನ್ ಸಂಬಂಧದಿಂದ ಹಿಡಿದು ಜೊತೆಯಲ್ಲೇ ಓಡಾಡುತ್ತಿದ್ದರು. 2008ರಿಂದ 2010ರವರೆಗೆ ಡೇಟಿಂಗ್ ನಲ್ಲಿದ್ದರು.
2013 ರಲ್ಲಿ, ವಾಸಿಂ ಅಕ್ರಮ್ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರೊಂದಿಗೆ ಡೇಟಿಂಗ್ ಮಾಡುವ ಬಗ್ಗೆ ಭಾರಿ ಸುದ್ದಿ ಹಬ್ಬಿತು. 2008 ರ ಭಾರತೀಯ ನೃತ್ಯ ಕಾರ್ಯಕ್ರಮ ಏಕ್ ಖಿಲಾಡಿ ಏಕ್ ಹಸೀನಾದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡ ನಂತರ 2010ರಿಂದ ಪ್ರೀತಿಯಲ್ಲಿದ್ದಾರೆಂದು ಸುದ್ದಿ ಹೆಚ್ಚಾಯಿತು. ಆದರೆ ಸುಶ್ಮಿತಾ ಮತ್ತು ನಾನು ಕೇವಲ ಒಳ್ಳೆಯ ಸ್ನೇಹಿತರು ಎಂದು ಹೇಳುವ ಮೂಲಕ ಅಕ್ರಮ್ ನಂತರ ವದಂತಿಗಳನ್ನು ನಿರಾಕರಿಸಿದ್ದರು.
ರೋಹ್ಮನ್ ಶಾಲ್ ಮತ್ತು ಸುಶ್ಮಿತಾ ಸೇನ್ 2018-2021 ರ ನಡುವೆ ಪರಸ್ಪರ ಡೇಟಿಂಗ್ ಮಾಡಿದ್ದಾರೆ. ಅವರು ಡಿಸೆಂಬರ್ 2021 ರಲ್ಲಿ ಬೇರ್ಪಟ್ಟರು, ಅದನ್ನು ಅವರು Instagram ನಲ್ಲಿ ಘೋಷಿಸಿದರು. ತನಗಿಂತ ಕಿರಿಯನ ಜೊತೆಗೆ ಸುಶ್ಮಿತಾ ಸೇನ್ ಲಿವ್ ಇನ್ ಸಂಬಂಧದಲ್ಲಿದ್ದರು.
2022ರಲ್ಲಿ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಅವರು ಸುಶ್ಮಿತಾ ಸೇನ್ ಅವರೊಂದಿಗೆ ಆತ್ಮೀಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದರು. ನನ್ನ ಪಾರ್ಟ್ನರ್ ಸುಶ್ಮಿತಾ ಸೇನ್. ನಾವು ಪ್ರೀತಿಸುತ್ತಿದ್ದೇವೆ. ನಾವು ಮದುವೆಯಾಗಿಲ್ಲ. ಆದರೆ, ಡೇಟಿಂಗ್ ಮಾಡುತ್ತಿದ್ದೇವೆ. ಮದುವೆಯೂ ಒಂದು ದಿನ ಜರುಗಲಿದೆ ಎಂದು ಬರೆದುಕೊಂಡಿದ್ದರು. ಆದರೆ ಬಳಿಕ ಬ್ರೇಕಪ್ ಆಗಿತ್ತು.