'ನಿಮ್ಮೊಂದಿಗೆ ಸಮಯ ಕಳೆಯುವುದು ತುಂಬಾ ಖುಷಿ' ಎಂದು ಹಾಟ್ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ

First Published Dec 26, 2022, 5:02 PM IST

ನಟಿ ರಶ್ಮಿಕಾ ಮಂದಣ್ಣ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಟಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೌತ್ ಮತ್ತು ನಾರ್ತ್ ಎರಡೂ ಕಡೆ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಸದ್ಯ ಕೂರ್ಗ್ ಸುಂದರಿ ಬಾಲಿವುಡ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಮಿಷನ್ ಮಜ್ನು ಸಿನಿಮಾ ಮೂಲಕ ರಶ್ಮಿಕಾ ಒಟಿಟಿಗೆ ಎಂಟ್ರಿ ಕೊಡುತ್ತಿದ್ದಾರೆ. 

ಸದ್ಯ ಮಿಷನ್ ಮಜ್ನು ಸಿನಿಮಾದ ಪ್ರಪೋಷನ್ ನಡೆಯುತ್ತಿದೆ. ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ರಶ್ಮಿಕಾ ತೆರೆ ಹಂಚಿಕೊಂಡಿದ್ದಾರೆ. ಸದ್ಯ ಈ ಸಿನಿಮಾದ ರೊಮ್ಯಾಂಟಿಕ್ ಹಾಡು ರಿಲೀಸ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿದೆ. ರಶ್ಮಿಕಾ ಮತ್ತು ಸಿದ್ದಾರ್ಥ್ ಕಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಮಿಷನ್ ಮಜ್ನು ಈವೆಂಟ್‌ನಲ್ಲಿ ಭಾಗಿಯಾಗಿದ್ದ ನಟಿ ರಶ್ಮಿಕಾ ಮಂದಣ್ಣ ಒಂದಿಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ರಶ್ಮಿಕಾ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ.  

ಫೋಟೋಗಳನ್ನು ಶೇರ್ ಮಾಡಿ ರಶ್ಮಿಕಾ ಅಭಿಮಾನಿಗಳನ್ನು ಭೇಟಿಯಾಗುವ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ಕೆಲವು ಅಭಿಮಾನಿಗಳನ್ನು ಭೇಟಿಯಾದೆ. ನಿಮ್ಮನ್ನು ಭೇಟಿಯಾಗುವುದು ಯಾವಾಗಲೂ ನನಗೆ ತುಂಬಾ ಖುಷಿ. ಹಾಡು ಇಷ್ಟ ಆಯಿತು ಎಂದು ಭಾವಿಸುತ್ತೇನೆ. ಸದ್ಯದಲ್ಲೇ ಎನಲ್ಲರನ್ನೂ ಸಾಮಾಜಿಕ ಜಾಲತಾಣದ ಮೂಲಕ ಭೇಟಿಯಾಗುತ್ತೇನೆ. ನಿಮ್ಮ ಜೊತೆ ಸಮಯ ಕಳೆಯುವುದು ನನಗೆ ಯಾವಾಗಲೂ ಖುಷಿ ಎಂದು ಹೇಳಿದ್ದಾರೆ. 

ರಶ್ಮಿಕಾ ಸದ್ಯ ಕೊನೆಯದಾಗಿ ಗುಡ್‌ಬೈ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಮಗಳಾಗಿ ಕಾಣಿಸಿಕೊಂಡಿದ್ದರು. ಆದರೆ ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಸಿಕ್ಕಿಲ್ಲ. ಮೊದಲ ಹಿಂದಿ ಸಿನಿಮಾ ನೆಲಕಚ್ಚಿತು. 

ಸದ್ಯ ಮಿಷನ್ ಮಜ್ನು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದೆ. ಆದರೆ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾ ಜೊತೆಗೆ ರಶ್ಮಿಕಾ ತೆಲುಗು ಮತ್ತು ತಮಿಳು ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ದಳಪತಿ ವಿಜಯ್ ಜೊತೆ ವಾರಿಸು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗಿನಲ್ಲಿ ಪುಷ್ಪ 2 ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.   

click me!