ಅನಸೂಯಾ ಭಾರದ್ವಾಜ್ ಪುಷ್ಪಾ ಸಿನಿಮಾದಲ್ಲಿ ವಿಲನ್ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡು ಕ್ರೇಜ್ ಗಿಟ್ಟಿಸಿಕೊಂಡ ನಟಿ. ತೆಲುಗು ಕಿರುತೆರೆಯ ಟಾಪ್ ಆ್ಯಂಕರ್ಗಳ ಪಟ್ಟಿಯಲ್ಲಿ ಅನಸೂಯಾ ಕೂಡ ಒಬ್ಬರು.
ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋಸ್ ಹರಿಬಿಟ್ಟು ಹೈಪ್ ಕ್ರಿಯೇಟ್ ಮಾಡುತ್ತಿರುತ್ತಾರೆ. ಇದೀಗ ಲೇಟೆಸ್ಟ್ ಫೋಟೋಗಳನ್ನು ಅನಸೂಯ ಶೇರ್ ಮಾಡಿದ್ದು, ಪಡ್ಡೆ ಹುಡುಗರಿಗೆ ತುಂಬಾ ಇಷ್ಟವಾಗಿದೆ.
ಎರಡು ಮಕ್ಕಳ ತಾಯಿಯಾದರೂ ಅನುಸೂಯಾ ಭಾರಧ್ವಜ್ ಶಿಲ್ಪದಂತೆ ಕಟೆದ ಸೌಂದರ್ಯದಿಂದ ಮೋಡಿ ಮಾಡುತ್ತಿದ್ದಾರೆ. ಸದ್ಯ ಈ ಫೋಟೋಗಳಿಗೆ ಲೈಕ್ಸ್, ಕಾಮೆಂಟ್ಸ್ ಮೂಲಕ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕೆಲವರಂತೂ ನಿಮ್ಮ ಸೌಂದರ್ಯಕ್ಕೆ ಮಾರು ಹೋದೆವು, ನೀವು ಶೃಂಗಾರ ದೇವತೆಯಂತೆ ಕಾಣುತ್ತಿದ್ದೀರಾ, ಹಾಗೂ ನಿಮ್ಮ ಎದೆಯ ಮೇಲೆ ಹಾಕಿಸಿಕೊಂಡಿರುವ ಟ್ಯಾಟೂ ಏನು? ಅಂತೆಲ್ಲಾ ಕಾಮೆಂಟ್ ಮಾಡ್ತಿದ್ದಾರೆ.
ಅನಸೂಯ ತಮ್ಮ ಎದೆ ಹಾಗೂ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಆಕೆಯ ಪತಿಯ ಹೆಸರು ಸುಶಾಂಕ್ ಭಾರಧ್ವಜ್. ಆದರೆ ಅವರಿಗೆ ನಿಕ್ಕು ಎನ್ನುವ ಮುದ್ದು ಹೆಸರು ಇದೆ. ಎಂಗೇಜ್ಮೆಂಟ್ ಆಗಿ ಒಂದೂವರೆ ವರ್ಷದ ನಂತರ ಮದುವೆ ಆಗಿದ್ದರಂತೆ.
ಮೊದಲ ಎಂಗೇಜ್ಮೆಂಟ್ ಆನಿವರ್ಸರಿ ಸಮಯದಲ್ಲಿ ಅನಸೂಯಾ ಪತಿಯ ಮುದ್ದು ಹೆಸರನ್ನು ಎದೆ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾಗಿ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ನಿರೂಪಕಿಯಾಗಿ ಮನರಂಜನಾ ಕ್ಷೇತ್ರಕ್ಕೆ ಅನಸೂಯ ಭಾರಧ್ವಜ್ ಎಂಟ್ರಿ ಕೊಟ್ಟರು. 'ಜಬರ್ದಸ್ತ್' ಕಾಮಿಡಿ ಶೋ ನಿರೂಪಕಿಯಾಗಿ ಜನಪ್ರಿಯತೆ ಗಳಿಸಿದರು. ನಂತರ ಸಿನಿಮಾಗಳನ್ನು ಸಣ್ಣಪುಟ್ಟ ಪಾತ್ರ ಮಾಡಲು ಅನು ಆರಂಭಿಸಿದ್ದರು. ರಾಮ್ಚರಣ್ ನಟನೆಯ 'ರಂಗಸ್ಥಳಂ' ಚಿತ್ರದಲ್ಲಿ ರಂಗಮತ್ತೆ ಪಾತ್ರ ಒಳ್ಳೆ ಹೆಸರು ತಂದುಕೊಟ್ಟಿತ್ತು.