ಪ್ರತಿವರ್ಷ ತಿರುಪತಿ ಬೆಟ್ಟ ಮೊಣಕಾಲಲ್ಲಿ ಏರುವ ಜಾಹ್ನವಿ: ಕಾರಣ ಕೇಳಿ ಶ್ಲಾಘನೆಗಳ ಮಹಾಪೂರ

By Suchethana D  |  First Published Nov 18, 2024, 5:40 PM IST

ಪ್ರತಿವರ್ಷವೂ ನಟಿ ಜಾಹ್ನವಿ ಕಪೂರ್​ ತಿರುಪತಿ ಬೆಟ್ಟವನ್ನು ಮೊಣಕಾಲಿನಿಂದ ಏರುತ್ತಾರೆ. ಇದಕ್ಕೆ ಕಾರಣವೂ ಇದೆ. ಅವರ ಬಾಯಲ್ಲೇ ಕೇಳಿ.. 
 


ಸದ್ಯ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ಅವರು ಸಾಕಷ್ಟು ಗಾಸಿಪ್​ಗಳಿಂದ ಸುದ್ದಿಯಲ್ಲಿ ಇರುತ್ತಿದ್ದಾರೆ. ಅಷ್ಟಕ್ಕೂ ಬಣ್ಣದ ಲೋಕ ಅದರಲ್ಲಿಯೂ ಬಾಲಿವುಡ್​ ಗಾಸಿಪ್​ಗಳಿಗೇನೂ ಕಮ್ಮಿ ಇಲ್ಲ. ಒಬ್ಬರ ಜೊತೆ ಇನ್ನೊಬ್ಬರ ಹೆಸರು ಥಳಕು ಹಾಕಿಕೊಳ್ಳುತ್ತಲೇ ಇರುತ್ತದೆ. ಇದೆ ರೀತಿ, ಕೆಲ ದಿನಗಳ ಹಿಂದೆ ಕದ್ದುಮುಚ್ಚಿ ನಟಿ ಜಾಹ್ನವಿ ಕಪೂರ್​ ಮತ್ತು ಅವರ ಬಾಯ್​ಫ್ರೆಂಡ್​ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ, ಶಿಖರ್​ ಪಹರಿಯಾ (Shikhar Pahariya) ಅವರ ಮದ್ವೆಯಾಗೋಯ್ತು ಎಂದು ಭಾರಿ ಸುದ್ದಿಯಾಗಿತ್ತು.  ಇವರ ಸುದ್ದಿ ಗಾಸಿಪ್​ ಅನ್ನುವುದಕ್ಕಿಂತಲೂ ಹೆಚ್ಚಾಗಿ ಇಬ್ಬರೂ ನಡೆಡುಕೊಳ್ಳುತ್ತಿರುವ ರೀತಿಯಿಂದ ಮದುವೆಯಾಗುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ.  ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಈ ಜೋಡಿ ಭೇಟಿ ನೀಡಿದ್ದ ಜೋಡಿ ಅಲ್ಲಿ ಒಟ್ಟಿಗೆ ಕುಳಿತು ದಂಪತಿಯಂತೆ ವಿಶೇಷ ಪೂಜೆ ಸಲ್ಲಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಇಬ್ಬರು ಒಟ್ಟಿಗೆ ಪೂಜೆ ಸಲ್ಲಿಸಿದ ಫೋಟೋಗಳು  ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು.  ಮದುವೆ ಆಗೋಯ್ತಾ ಅಥವಾ ಶೀಘ್ರವೇ ಮದ್ವೆ ಆಗಲಿದ್ದಾರೆ ಎನ್ನುವ ಚರ್ಚೆ ಬಿ-ಟೌನ್​ನಲ್ಲಿ ಶುರುವಾಗಿತ್ತು. ಈ ಬಗ್ಗೆ ನಟಿಯಾಗಲೀ ಶಿಖರ್​ ಆಗಲೀ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.  

ಆದರೆ ಇದರ ನಡುವೆಯೇ ಕುತೂಹಲದ ವಿಷಯವೊಂದು ರಿವೀಲ್​ ಆಗಿದೆ. ಅದೇನೆಂದರೆ, ಜಾಹ್ನವಿ ಕಪೂರ್​ ಪ್ರತಿ ವರ್ಷವೂ ತಿರುಪತಿ ಬೆಟ್ಟವನ್ನು ಮೊಣಕಾಲಿನಲ್ಲಿ ಏರುತ್ತಾರಂತೆ! ಈ ಕುರಿತು ಖುದ್ದು ಅವರೇ ರಿವೀಲ್​ ಮಾಡಿದ್ದಾರೆ. ಅಷ್ಟಕ್ಕೂ ನಟಿ ಹೀಗೆ ಮಾಡಲು ಕಾರಣವೂ ಇದೆ. ಏಕೆಂದ್ರೆ ಅವರ ಅಮ್ಮ, ದಿವಂಗತ ನಟಿ ಶ್ರೀದೇವಿ, ಅವರ ಮದುವೆಗೂ ಮೊದಲು ಪ್ರತಿವರ್ಷವೂ ತಮ್ಮ ಹುಟ್ಟುಹಬ್ಬದಂದು ಹೀಗೆ ಮೊಣಕಾಲ ಮೇಲೆ ತಿರುಪತಿ ಬೆಟ್ಟವನ್ನು ಹತ್ತುತ್ತಿದ್ದರಂತೆ. ಮದುವೆಯಾದ ಮೇಲೆ ಬೆಟ್ಟ ಏರುವುದನ್ನು ಬಿಟ್ಟರಂತೆ. ಆದರೆ ಅವರ ನಿಧನದ ಬಳಿಕ, ಅಮ್ಮನ ಹಾದಿಯನ್ನೇ ತಾವು ತುಳಿಯುವ ನಿರ್ಧಾರ ಮಾಡಿದ್ದಾರಂತೆ ಜಾಹ್ನವಿ. ಇದೇ ಕಾರಣಕ್ಕೆ ಶ್ರೀದೇವಿ ಅವರ ಹುಟ್ಟುಹಬ್ಬದಂದು ಪ್ರತಿವರ್ಷವೂ ಮೊಣಕಾಲ ಮೇಲೆ ಬೆಟ್ಟವನ್ನು ಹತ್ತುತ್ತಾರಂತೆ. ಈ ಕುರಿತು ಅವರೇ ಈಗ ಸಂದರ್ಶನವೊಂದರಲ್ಲಿ ರಿವೀಲ್​ ಮಾಡಿದ್ದಾರೆ. 

Tap to resize

Latest Videos

undefined

ಕೆಬಿಸಿ ಷೋನಲ್ಲಿ ಅಮಿತಾಭ್​ ಟೇಕ್ವಾಂಡೋ ಕಿಕ್! 82ರ ನಟನ ಎನರ್ಜಿಗೆ ಪ್ರೇಕ್ಷಕರು ಬೆರಗು- ವಿಡಿಯೋ ವೈರಲ್

ಇನ್ನು ಜಾಹ್ನವಿ ಸದ್ಯ ಮದುವೆಯ ವಿಷಯದಲ್ಲಿ ಸಕತ್​ ಸದ್ದು ಮಾಡುತ್ತಿದ್ದಾರೆ. ಶಿಖರ್​ ಪಹಾರಿಯಾ ಜೊತೆ ನಟಿಯ ಎಂಗೇಜ್​ಮೆಂಟ್​ ಗುಟ್ಟಾಗಿ ನಡೆದೇ ಹೋಗಿದೆ ಎನ್ನುವಂಥ ಫೋಟೋಗಳು ವೈರಲ್​ ಆಗ್ತಿವೆ. ಇದರಲ್ಲಿ ಜಾಹ್ನವಿ ಕಪೂರ್​ ಮದುಮಗಳಂತೆ ಮಿಂಚುತ್ತಿದ್ದಾರೆ. ಹಾಗೂ ಅಲ್ಲಿ ಕೆಲವು ಸೆಲೆಬ್ರಿಟಿಗಳನ್ನೂ ಫೋಟೋಗಳಲ್ಲಿ ನೋಡಬಹುದು. ಅಷ್ಟಕ್ಕೂ ಇವರಿಬ್ಬರ ಸಂಬಂಧ  ಸಂಬಂಧ ನಿಜ ಎಂಬುದಾಗಿ ಪರೋಕ್ಷವಾಗಿಯೇ ಹೇಳಿದ್ದಾರೆ ಜಾಹ್ನವಿ ಕಪೂರ್​ ತಂದೆ, ಶ್ರೀದೇವಿ ಪತಿ ಬೋನಿ ಕಪೋರ್​. ಜೂಮ್​ಗೆ ನೀಡಿದ ಸಂದರ್ಶನದಲ್ಲಿ ಅವರು,  ‘ನನಗೆ ಶಿಖರ್ ಅಂದರೆ ಪ್ರೀತಿ. ಜಾಹ್ನವಿ ಶಿಖರ್​ ಜೊತೆ  ಕಾಣಿಸಿಕೊಳ್ಳುವುದಕ್ಕಿಂತಲೂ ಅಂದರೆ ಓಡಾಡ ಶುರು ಮಾಡುವುದಕ್ಕಿಂತಲೂ ಮೊದಲು  ನನಗೆ ಅವನ ಜೊತೆ ಒಳ್ಳೆಯ ಫ್ರೆಂಡ್​ಶಿಪ್ ಇತ್ತು. ಅವನು ಎಂದಿಗೂ ನನ್ನ ಮಗಳನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ನನಗೆ ಅನಿಸಿತು. ಯಾವುದಾದರೂ ಸಹಾಯ ಬೇಕಾದರೆ ಆತ ಯಾವಾಗಲೂ ಓಡಿ ಬರುತ್ತಾನೆ. ಅವನು ನನ್ನೊಂದಿಗೆ, ಜಾಹ್ನವಿ ಮತ್ತು ಅರ್ಜುನ್ ಅವರೊಂದಿಗೆ ಒಳ್ಳೆಯ ಸ್ನೇಹ ಹೊಂದಿದ್ದಾರೆ. ಹಾಗಾಗಿ ಅವರಂತಹ ವ್ಯಕ್ತಿ ನಮ್ಮ ಜೀವನದಲ್ಲಿ ಸಿಕ್ಕಿರುವುದು ನಮ್ಮ ಅದೃಷ್ಟ ಎಂದಿದ್ದಾರೆ. ಈ ಮೂಲಕ ಮಗಳು ಮತ್ತು ಶಿಖರ್​ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. 

ಅದಕ್ಕೆ ಇನ್ನಷ್ಟು ಪುಷ್ಟಿ ನೀಡಲು ಎಂಬಂತೆ, ಕೆಲ ದಿನಗಳ ಹಿಂದೆ ಜಾಹ್ನವಿ ಕಪೂರ್​ ಫುಡ್​ ಪಾಯ್ಸನ್​ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಟ್ರೀಟ್​ಮೆಂಟ್​ ಬಳಿಕ ಅವರನ್ನು ಡಿಸ್​ಚಾರ್ಜ್ ಮಾಡಲಾಗಿತ್ತು. ಅಂಬಾನಿ ಮದ್ವೆಯಲ್ಲಿ ನಟಿಗೆ ಫುಡ್​ ಪಾಯ್ಸನ್​ ಆಗಿದೆ ಎಂಬ ಸುದ್ದಿ ಹರಡಿತ್ತು. ನಂತರ ತಂದೆ ಬೋನಿ ಕಪೂರ್​ ವಿಮಾನ ನಿಲ್ದಾಣದ ಒಳಗಿರುವ ಆಹಾರ ಸೇವಿಸಿ ಮಗಳಿಗೆ ಹೀಗೆ ಆಗಿದೆ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ಕುತೂಹಲ ಎನ್ನುವ ಅಂಶವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ ಜಾಹ್ನವಿ ಕಪೂರ್​ ಆಸ್ಪತ್ರೆಗೆ ಸೇರಿದ್ದ ಸಂದರ್ಭದಲ್ಲಿ ಬೋನಿ ಕಪೂರ್ ಬೇರೆ ಊರಿಗೆ ಹೋಗಿದ್ದರು. ಆದ್ದರಿಂದ ಆಸ್ಪತ್ರೆಯಲ್ಲಿ  ನಟಿಯನ್ನು ಶಿಖರ್​ ಪಹರಿಯಾ ಅಮ್ಮನೇ ನೋಡಿಕೊಂಡಿರುವುದಾಗಿ ವರದಿಯಾಗಿದೆ. ರಾತ್ರಿಯಿಡೀ ಭಾವಿ ಸೊಸೆಯನ್ನು ಶಿಖರ್​ ಅವರ ತಾಯಿ ಸ್ಮೃತಿ ಶಿಂಧೆ ಉಪಚರಿಸಿದ್ದರು ಎನ್ನುವ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ, ಜಾಹ್ನವಿ ಮತ್ತು ಶಿಖರ್​ ಮದುವೆಯಾಗುವುದು ಬಹುತೇಕ ನಿಶ್ಚಿತವಾಗಿದೆ ಎಂದು ಬಿ-ಟೌನ್​ ಮೂಲಗಳು ತಿಳಿಸುತ್ತಿವೆ. 

ಆ್ಯಕ್ಟಿಂಗ್​ ಬರಲ್ಲ ಅಂತ ರಿಜೆಕ್ಟ್​ ಮಾಡಿಬಿಟ್ರು, ನಾನ್ ಬಿಡ್ತೀನಾ? ಆ ದಿನಗಳ ನೆನಪಿಸಿಕೊಂಡ 'ಅಮೃತಧಾರೆ' ಭೂಮಿಕಾ!

click me!