ಆಕ್ಷನ್‌ ಕಿಂಗ್‌ ಮಾತ್ರವಲ್ಲ... ಡಾ.ಅರ್ಜುನ್ ಸರ್ಜಾ!

By Govindaraj S  |  First Published Nov 18, 2024, 5:36 PM IST

ಬಹುಭಾಷಾ ನಟ ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಅವರು ಬರೀ ನಟರಾಗಿ ಮಾತ್ರವಲ್ಲದೇ ನಿರ್ದೇಶಕರಾಗಿ, ನಿರ್ಮಾಪಕರಾಗಿ, ಸ್ಕ್ರೀನ್ ರೈಟರ್, ಡಿಸ್ಟಿಬ್ಯೂಟರ್, ವಿಲನ್ ಆಗಿ ಹಾಆಗೂ ​ಪೋಷಕ ನಟರಾಗಿ ಸಿನಿರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಅವರ ಅಪಾರ ಸಾಧನೆಗೆ ಹಿರಿಮೆಯ ಗರಿಯೊಂದು ಸೇರ್ಪಡೆಯಾಗಿದೆ. 


ಬಹುಭಾಷಾ ನಟ ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಅವರು ಬರೀ ನಟರಾಗಿ ಮಾತ್ರವಲ್ಲದೇ ನಿರ್ದೇಶಕರಾಗಿ, ನಿರ್ಮಾಪಕರಾಗಿ, ಸ್ಕ್ರೀನ್ ರೈಟರ್, ಡಿಸ್ಟಿಬ್ಯೂಟರ್, ವಿಲನ್ ಆಗಿ ಹಾಆಗೂ ​ಪೋಷಕ ನಟರಾಗಿ ಸಿನಿರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಅವರ ಅಪಾರ ಸಾಧನೆಗೆ ಹಿರಿಮೆಯ ಗರಿಯೊಂದು ಸೇರ್ಪಡೆಯಾಗಿದೆ. ಹೌದು! ಸಿನಿ ಕ್ಷೇತ್ರದಲ್ಲಿ ಅಪಾರವಾದ ಸಾಧನೆ, ಶ್ರಮವನ್ನು ಪರಿಗಣಿಸಿ ನಟ ಅರ್ಜುನ್‌ ಸರ್ಜಾ ಅವರಿಗೆ ಗೌರವ ಡಾಕ್ಟರೇಟ್‌ ನೀಡಲಾಗಿದೆ. ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಅವರಿಗೆ ಡಾ.ಎಂ.ಜಿ.ಆರ್ ಎಜುಕೇಶನಲ್ ಅಂಡ್ ರಿಸರ್ಚ್ ಇನ್​​ಸ್ಟಿಟ್ಯೂಟ್​ ಸರ್ವೀಸ್ ಕಡೆಯಿಂದ ಡಾಕ್ಟರೇಟ್‌ ಪ್ರದಾನ ಮಾಡಲಾಗಿದೆ.

ಸಿನಿರಂಗದಲ್ಲಿ ತಮ್ಮದೇಯಾದ ಪ್ರತಿಭೆ ಮೂಲಕ ಗುರುತಿಸಿಕೊಂಡು 50 ವರ್ಷಗಳ ಕಾಲ ಬಣ್ಣದ ಲೋಕದಲ್ಲಿ ಅರ್ಜುನ್‌ ಸರ್ಜಾ ಮಿಂಚಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಹಲವಾರು ನಟರೊಂದಿಗೂ ಇವರು ತೆರೆ ಹಂಚಿಕೊಂಡಿದ್ದಾರೆ. ವಿಶೇಷವಾಗಿ ಅರ್ಜುನ್‌ಗೆ ಕನ್ನಕ್ಕಿಂತ ಹೆಚ್ಚಾಗಿ ತಮಿಳು ಸಿನಿಮಾಗಳ ಆಫರ್‌ ಬಂದಿದ್ದರಿಂದ ಅವರು ಕಾಲಿವುಡ್‌ನಲ್ಲೇ ಹೆಚ್ಚು ಸಿನಿಮಾ ಮಾಡಿದ್ದಾರೆ. ಅರ್ಜುನ್ ಸರ್ಜಾ ಅವರ ತಂದೆ ಹಿರಿಯ ನಟ ಶಕ್ತಿ ಪ್ರಸಾದ್, ತಾಯಿ ಲಕ್ಷ್ಮೀ, 1962ರ ಆಗಸ್ಟ್ 15ರಂದು ಕಲ್ಪತರ ನಾಡು ತುಮಕೂರಿನ ಮಧುಗಿರಿಯಲ್ಲಿ ಅರ್ಜುನ್ ಸರ್ಜಾ ಜನಿಸಿದರು. ಇವರ ಅಣ್ಣ ಕಿಶೋರ್ ಸರ್ಜಾ ಹೆಸರಾಂತ ನಿರ್ಮಾಪಕರು ಆಗಿದ್ದರು. 

Tap to resize

Latest Videos

undefined

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಈ ಪ್ರಸಿದ್ಧ ನಟಿ ಹಿಂದೆ ಬಿದ್ದು ಪ್ರೀತಿಸಿದ್ರಂತೆ: ಆದರೆ ಅದು ಒನ್ ವೇ ಲವ್!

ಅರ್ಜುನ್ ಅವರು ಸ್ಯಾಂಡಲ್‌ವುಡ್‌ನಲ್ಲಿ ಬಾಲ ನಟರಾಗಿ ಮೊದಲು ಎಂಟ್ರಿಕೊಟ್ಟರು. 1981 ರಲ್ಲಿ ತೆರೆಕಂಡ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಸಿಂಹದ ಮರಿ ಸೈನ್ಯ ಮೂವಿಯ ಮೂಲಕ ಕನ್ನಡ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿದರು. ಆದರೆ ತಮಿಳು ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶ ದೊರೆತ ಕಾರಣ, ಅಲ್ಲಿಯೇ ಅವರು ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದರು. ಆಶಾ, ಪ್ರೇಮ ಯುದ್ಧ, ಪ್ರೇಮಾಗ್ನಿ ಸೇರಿದಂತೆ ಮುಂತಾದ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ ಅರ್ಜುನ್ ಸರ್ಜಾ, ತಮಿಳಿನಲ್ಲಿ 'ನಂದ್ರಿ' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. 

1984 ರಲ್ಲಿ ರಾಮನಾರಾಯಣನ್ ನಿರ್ದೇಶನದ ಈ ಚಿತ್ರದಲ್ಲಿ ಕಾರ್ತಿಕ್, ನಳಿನಿ, ಮಹಾಲಕ್ಷ್ಮಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರದ ಯಶಸ್ಸಿನ ನಂತರ ಕಡಮೈ, ಇಳಮೈ, ವೇಷಂ, ಎಂಗಲ್ ಕುರಲ್ ಮುಂತಾದ ಹಲವಾರು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದರು. ಚಿಕ್ಕ ವಯಸ್ಸಿನಲ್ಲೇ ನಟನೆಗೆ ಎಂಟ್ರಿ ಕೊಟ್ಟು ದೊಡ್ಡ ಹೆಸರು ಗಳಿಸಿ ಉನ್ನತ ಮಟ್ಟಕ್ಕೇರಿದ ಅರ್ಜುನ್ ತಮ್ಮ 62ನೇ ವಯಸ್ಸಿನಲ್ಲೂ ಯುವ ನಟರಿಗೆ ಪೈಪೋಟಿ ನೀಡುವಂತೆ ನಟಿಸುತ್ತಿದ್ದಾರೆ. ಸದ್ಯ ಅರ್ಜುನ್ ಸರ್ಜಾ ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಹೀಗೆ ಭಾರತದ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. 

ಟಾಕ್ಸಿಕ್ ಅಡ್ಡದ EXCLUSIVE ನ್ಯೂಸ್: ಈ ಹೀರೋಯಿನ್ ಜೊತೆ ರಾಕಿಂಗ್ ಸ್ಟಾರ್ ಯಶ್ ಲವ್ ಡ್ಯುಯೆಟ್!

ಇನ್ನು ದಳಪತಿ ವಿಜಯ್ ನಟಿಸಿದ ಲಿಯೋ ಸಿನಿಮಾ ಅರ್ಜುನ್ ಅವರ ಕೊನೆಯ ಸಿನಿಮಾ. ಇನ್ನು ಅರ್ಜುನ್ ಪುತ್ರಿ ಐಶ್ವರ್ಯ ಮತ್ತು ಉಮಾಪತಿ ಅವರ ಮದುವೆ ಈ ವರ್ಷ ನಡೆದಿದ್ದು, ಅರ್ಜುನ್ ಶೀಘ್ರದಲ್ಲೇ ತಮ್ಮ ಅಳಿಯ ಉಮಾಪತಿ ಅವರನ್ನು ನಾಯಕರನ್ನಾಗಿ ಮಾಡಿ 'ಎಳುಮಲೈ' ಚಿತ್ರದ ಎರಡನೇ ಭಾಗವನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಅರ್ಜುನ್ ಸರ್ಜಾ ಕೂಡ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರಂತೆ. ಶೀಘ್ರದಲ್ಲೇ ಈ ಚಿತ್ರದ ಬಗ್ಗೆ ಮಾಹಿತಿ ಹೊರಬೀಳುವ ಸಾಧ್ಯತೆ ಇರುವುದರಿಂದ ಅಭಿಮಾನಿಗಳು ಕೂಡಾ ಕಾತರದಿಂದ ಕಾಯುತ್ತಿದ್ದಾರೆ.

click me!