ಬಿಗ್‌ ಬಾಸ್‌ ವೇದಿಕೆಯಲ್ಲೇ ಭಾರತ್‌ ಪೇ ಫೌಂಡರ್‌ ಅಶ್ನೀರ್‌ ಗ್ರೋವರ್‌ ಚಳಿ ಬಿಡಿಸಿದ ಸಲ್ಮಾನ್‌ ಖಾನ್‌

By Santosh Naik  |  First Published Nov 18, 2024, 8:23 PM IST

ಭಾರತ್‌ ಪೇ ಫೌಂಡರ್‌ ಅಶ್ನೀರ್‌ ಗ್ರೋವರ್‌ ತಮ್ಮ ಬಗ್ಗೆ ಮಾತನಾಡಿದ್ದ ವಿಚಾರಕ್ಕೆ ಬಿಗ್‌ ಬಾಸ್‌ ವೇದಿಕೆಯಲ್ಲಿಯೇ ನಟ ಸಲ್ಮಾನ್‌ ಖಾನ್‌ ತಿರುಗೇಟು ನೀಡಿದ್ದಾರೆ.


ಹಿಂದಿ ಬಿಗ್‌ ಬಾಸ್‌ ವೇದಿಕೆಯಲ್ಲಿ ನಟ ಸಲ್ಮಾನ್‌ ಖಾನ್‌, ಉದ್ಯಮಿ ಹಾಗೂ ಭಾರತ್‌ ಪೇ ಫೌಂಡರ್‌ ಅಶ್ನೀರ್‌ ಗ್ರೋವರ್‌ ಪಾಡ್‌ಕಾಸ್ಟ್‌ನಲ್ಲಿ ಅವರ ಬಗ್ಗೆ ಮಾತನಾಡಿದ ಕಾಮೆಂಟ್‌ಗಾಗಿ ತರಾಟೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಬಿಗ್‌ ಬಾಸ್‌ ವೇದಿಕೆಗೆ ಬಂದಿದ್ದ ಶಾರ್ಕ್ ಟ್ಯಾಂಕ್ ಇಂಡಿಯಾದ ಮಾಜಿ ಜಡ್ಜ್‌ ಅಶ್ನೀರ್‌ ಗ್ರೋವರ್‌ಗೆ ಯಾವ ರೀತಿಯಲ್ಲಿ ಸಲ್ಮಾನ್‌ ಖಾನ್‌ ತರಾಟೆಗೆ ತೆಗೆದುಕೊಂಡರೆಂದರೆ, ಅಶ್ನೀರ್‌ ಗ್ರೋವರ್‌ ಮುಖ ಪೆಚ್ಚಾಗಿದ್ದು ಮಾತ್ರವಲ್ಲದೆ, ಅಲ್ಲಿಯೇ ಸಲ್ಮಾನ್‌ ಖಾನ್‌ಗೆ ಕ್ಷಮೆ ಕೋರಿದ್ದಾರೆ.

ಬಿಗ್ ಬಾಸ್ 18 ರ ವೀಕೆಂಡ್ ಕಾ ವಾರ್‌ನ ಪ್ರೋಮೋ ವೈರಲ್ ಆಗಿದ್ದು, ಭಾರತ್‌ಪೇ ಟೀಮ್‌ ನಟನನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಲು ಸಂಪರ್ಕಿಸುವ ಕುರಿತು ಅವರ ಕಾಮೆಂಟ್‌ಗಳ ಬಗ್ಗೆ ಸಲ್ಮಾನ್, ಅಶ್ನೀರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರೋವರ್ ಅವರೊಂದಿಗೆ ತಾನು ಎಂದಿಗೂ ಖಾಸಗಿ ಸಭೆಯನ್ನು ನಡೆಸಿಲ್ಲ ಮತ್ತು ಬಿಗ್‌ ಬಾಸ್‌ ಶೋ ಟೀಮ್‌ ಮೂಲಕ ಮಾತ್ರವೇ ನಿಮ್ಮ ಹೆಸರು ನನಗೆ ಗೊತ್ತಾಗಿದೆ ಎಂದು ಸಲ್ಮಾನ್‌ ಹೇಳಿದ್ದಾರೆ.

Tap to resize

Latest Videos

undefined

ನೀವು ಮಾತನಾಡುತ್ತಿದ್ದ ಒಂದು ವಿಡಿಯೋ ನೋಡುತ್ತಿದ್ದೆ. ಅಲ್ಲಿ ನೀವು ಕೆಲವೊಂದು ಹೇಳಿಕೆಗಳನ್ನು ನೀಡಿದ್ದೀರಿ. ಅದರೊಂದಿಗೆ ಕೆಲವು ಸಂಖ್ಯೆಗಳನ್ನು ಹೇಳಿ, ನನ್ನನ್ನು ಅಷ್ಟು ಮೊತ್ತಕ್ಕೆ ಸೈನ್‌ ಮಾಡಿಸಿಕೊಂಡಿದ್ದೀರಿ ಎಂದು ಹೇಳಿದ್ದಾರೆ. ಇದೆಲ್ಲವೂ ನಿಜವಲ್ಲ. ಇಂಥ ಸುಳ್ಳು ಚಿತ್ರಣವನ್ನು ಸೃಷ್ಟಿ ಮಾಡುವುದು ನಿಜಕ್ಕೂ ತಪ್ಪು ಎಂದು ಹೇಳಿದರು. ಈ ಹಂತದಲ್ಲಿ ಗ್ರೂವರ್‌, ತಮ್ಮ ಹಿಂದಿನ ಕಾಮೆಂಟ್‌ಗಳು ಸಲ್ಮಾನ್ ಅವರನ್ನು ತಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡುವ ಯಶಸ್ಸನ್ನು ಎತ್ತಿ ತೋರಿಸಲು ಉದ್ದೇಶಿಸಿವೆ ಎಂದು ವಿವರಿಸಿದರು.

'ನಮ್ಮ ಬ್ರ್ಯಾಂಡ್‌ಗೆ ನಿಮ್ಮನ್ನು ರಾಯಭಾರಿನ್ನಾಗಿ ಆಯ್ಕೆ ಮಾಡಿಕೊಳ್ಳುವ ನಿರ್ಧಾರ, ನಮ್ಮ ಸ್ಮಾರ್ಟ್‌ ಆದ ಮೂವ್‌ಗಳಲ್ಲಿ ಒಂದಾಗಿತ್ತು. ಇದು ನಮಗೆ ಲಾಭದಾಯಕವೂ ಆಗಿತ್ತು. ನಿಮ್ಮನ್ನು ರಾಯಭಾರಿಯನ್ನಾಗಿ ಮಾಡಿದ್ದು, ಕಂಪನಿಯ ಗ್ರೇಟ್‌ ನಿರ್ಧಾರ ಆಗಿತ್ತು ಎಂದು ಜನರಿಗೆ ತಿಳಿಸುವ ಪ್ರಯತ್ನ ಮಾತ್ರ ಅದಾಗಿತ್ತು' ಎಂದು ಗ್ರೋವರ್‌ ಹೇಳಿದರು.

Breaking: ಸಮುದ್ರದಲ್ಲಿ ಭಾರತ-ಪಾಕಿಸ್ತಾನ ಹಡಗಿನ ನಡುವೆ ಭಾರೀ ಫೈಟ್‌, 7 ಮಂದಿ ಮೀನುಗಾರರ ರಕ್ಷಣೆ!

ಇದಕ್ಕೆ ಮತ್ತೆ ಪ್ರಕ್ರಿಯೆ ನೀಡಿದ ಸಲ್ಮಾನ್‌, ಈಗ ನೀವು ಯಾವ ರೀತಿಯಲ್ಲಿ ನನ್ನೊಂದಿಗೆ ಮಾತನಾಡುತ್ತಿದ್ದೀರೋ, ಅದೇ ರೀತಿಯಲ್ಲಿ ನೀವಿ ಆ ವಿಡಿಯೋ ಕ್ಲಿಪ್‌ಗಳಲ್ಲಿ ಮಾತನಾಡಿರಲಿಲ್ಲ. ಅಲ್ಲಿ ನಿಮ್ಮ ಆಟಿಟ್ಯೂಡ್‌ ಬೇರೆ ರೀತಿಯಲ್ಲಿ ಕಾಣುತ್ತಿದೆ' ಎಂದು ಸಲ್ಮಾನ್‌ ಹೇಳಿದರು. ಹೀಗೆ ಹೇಳುತ್ತಿದ್ದಂತೆ ಪೆಚ್ಚಾದ ಅಶ್ನೀರ್‌ ಗ್ರೋವರ್‌, ಸಾರಿ ಸರ್‌, ನಿಮಗೆ ಆ ರೀತಿಯಲ್ಲಿ ಫೀಲ್‌ ಆಗಿದ್ದರೆ, ಅದು ನನ್ನ ಉದ್ದೇಶವಾಗಿರಲಿಲ್ಲ' ಎಂದಿದ್ದಾರೆ.

ಅಡುಗೆಮನೆಯಲ್ಲಿ ಗ್ಯಾಸ್‌ ಸ್ಟವ್‌ ವಾಸ್ತು ನೋಡಿ ಇಡಿ, ಈ ತಪ್ಪುಗಳು ಮಾಡಿದ್ರೆ ಸುತ್ತಿಕೊಳ್ಳುತ್ತೆ ದರಿದ್ರ!

ko q pela gya ?
Kya h ye pic.twitter.com/ZjJhA6jd34

— Prashant Saraswat (@saraswat_pk)
click me!