'ಸರ್ಕಸ್‌'ಗಾಗಿ ಹಾಟ್ ಆದ ಕರಾವಳಿ ಸುಂದರಿ; ಕೆಂಪು ಸೀರೆಯಲ್ಲಿ ಪೂಜಾ ಹೆಗ್ಡೆಯ ಮಾದಕ ನೋಟ

First Published Dec 3, 2022, 5:24 PM IST

ನಟಿ ಪೂಜಾ ಹೆಗ್ಡೆ ಸರ್ಕಸ್ ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ಕೆಂಪು ಸೀರೆಯಲ್ಲಿ ಮಿಂಚಿದ್ದರು. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಪೂಜಾ ಹೆಗ್ಡೆ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ಮತ್ತು ಸೌತ್ ಎರಡೂ ಕಡೆ ಬ್ಯುಸಿ ಇರುವ ಪೂಜಾ ಸದ್ಯ ಸರ್ಕಸ್‌ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ರೋಹಿತ್ ಶೆಟ್ಟಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸರ್ಕಸ್ ಸಿನಿಮಾದಲ್ಲಿ ಪೂಜಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.  

ಇತ್ತೀಚಿಗಷ್ಟೆ ಸರ್ಕಸ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಇಡೀ ಸಿನಿಮಾತಂಡ ಕಾರ್ಯಕ್ರಮದಲ್ಲಿ ಹಾಜರಾಗಿತ್ತು. ಅಂದಹಾಗೆ ಸರ್ಸಸ್ ಸಿನಿಮಾದಲ್ಲಿ ರಣವೀರ್ ಸಿಂಗ್, ವರುಣ್ ಶರ್ಮಾ ಪೂಜಾ ಹೆಗ್ಡೆ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 

ಸರ್ಕಸ್ ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ಪೂಜಾ ಮತ್ತು ಜಾಕ್ವೆಲಿನ್ ಕೆಂಪು ಬಣ್ಣದ ಡ್ರೆಸ್ ನಲ್ಲಿ ಮಿಂಚಿದ್ದರು. ಪೂಜಾ ಹೆಗ್ಡೆ ಸೀರೆ ನೋಟ ಅಭಿಮಾನಿಗಳ ಹೃದಯ ಕದ್ದಿದೆ. ತೆಳ್ಳಗೆ ಬಳಕುವ ಬಳ್ಳಿಯ ಹಾಗೆ ಇರುವ ಪೂಜಾ ಕೆಂಪು ಸೀರೆಯಲ್ಲಿ ಕಂಗೊಳಿಸಿದ್ದರು. ಪೂಜಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ವೇದಿಕೆ ಮೇಲೆ ಪೂಜಾ ನಟ ರಣವೀರ್ ಸಿಂಗ್ ಜೊತೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಸರ್ಕಸ್ ಕಾಮಿಡಿ ಸಿನಿಮಾವಾಗಿದ್ದು ಸದ್ಯ ರಿಲೀಸ್ ಆಗಿರುವ ಟ್ರೈಲರ್ ಅಭಿಮಾನಿಗಳ ಹೃದಯ ಗೆದ್ದಿದೆ. ರಣವೀರ್ ಸಿಂಗ್ ವಿಭಿನ್ನ ಡ್ರೆಸ್ ಮೂಲಕವೇ ಅಭಿಮಾನಿಗಳ ಹೃದಯ ಗೆಲ್ಲುತ್ತಿರುತ್ತಾರೆ. ಸರ್ಕಸ್ ಟ್ರೈಲರ್ ರಿಲೀಸ್ ‌ನಲ್ಲೂ ಅಭಿಮಾನಿಗಳ ಗಮನ ಸೆಳೆದರು. 
 

ಅಂದಹಾಗೆ ಪೂಜಾ ಹೆಗ್ಡೆ ಇತ್ತೀಚಿಗಷ್ಟೆ ಕಾಲಿಗೆ ಏಟು ಮಾಡಿಕೊಂಡಿದ್ದರು. ಚಿತ್ರೀಕರಣ ವೇಳೆ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಪೂಜಾ ವಿಶ್ರಾಂತಿ ಪಡೆಯುತ್ತಿದ್ದರು. ಸದ್ಯ ಚೇತರಿಸಿಕೊಂಡಿದ್ದು ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. 

ಅಂದಹಾಗೆ ಸರ್ಕಸ್ ಸಿನಿಮಾ ಡಿಸೆಂಬರ್ 23 ರಂದು ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ರೋಹಿತ್ ಶೆಟ್ಟಿ ನಿರ್ದೇಶನದ ಜೊತೆಗೆ ಅವರದ್ದೇ ಆದ ರೋಹಿತ್ ಶೆಟ್ಟಿ ಪಿಕ್ಚರ್ಸ್ ನಿರ್ಮಿಸಿದೆ. 

click me!