Taimur Ali Khan Points Toy Gun: ಗನ್ ತೋರಿಸಿದ ತೈಮೂರ್, ತಾಲೀಬಾನ್ ಎಂದ ನೆಟ್ಟಿಗರು

First Published Jan 18, 2022, 6:31 PM IST

ಕರೀನಾ ಕಪೂರ್ (Kareena Kapoor) ಮತ್ತು ಸೈಫ್ ಅಲಿ ಖಾನ್ (Saif Ali Khan) ಅವರ ಮೊದಲ ಮಗ ತೈಮೂರ್‌ ಆಲಿ ಖಾನ್‌ (Taimur Ali Khan) ಬಾಲಿವುಡ್‌ನ ಫೇಮಸ್‌  ಸ್ಟಾರ್ ಕಿಡ್. ತೈಮೂರ್‌ನ ಮುದ್ದಾದ ಫೋಟೋ ಮತ್ತು ವಿಡಿಯೋಗಳು ಯಾವಾಗಲೂ ವೈರಲ್‌ ಆಗುತ್ತಿರುತ್ತವೆ. ಕರೀನಾ ಮತ್ತು ಸೈಫ್‌ ಪುತ್ರ  ಆಗಾಗ ಸುದ್ದಿಯಲ್ಲಿರುವುದು ಕಾಮನ್. ಆದರೆ, ಈ ಬಾರಿ ಮಗು ತಪ್ಪು ಕಾರಣಕ್ಕೆ ಸುದ್ದಿಯಲ್ಲಿದೆ. ತೈಮೂರ್ ಅಲಿ ಖಾನ್ ನನ್ನು 'ಭಯೋತ್ಪಾದಕ' ಮತ್ತು 'ತಾಲಿಬಾನ್' ಎಂದು ನೆಟಿಜನ್ಸ್‌ ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ?

ಕಳೆದ ವಾರಾಂತ್ಯದಲ್ಲಿ, ತೈಮೂರ್ ಅವರ ಅಜ್ಜ ರಣಧೀರ್ ಕಪೂರ್ ಅವರ ಮನೆಯ ಹೊರಗೆ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರೊಂದಿಗೆ ಕಾಣಿಸಿಕೊಂಡರು. ಈ ಸಮಯದ ಹಲವು ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗಿವೆ.
 
 

ಸೆಲೆಬ್ರಿಟಿ ಛಾಯಾಗ್ರಾಹಕ ವೈರಲ್ ಭಯಾನಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತೈಮೂರ್‌ ಆಲಿ ಖಾನ್‌ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕ್ಯಾಮೆರಾದತ್ತ ತೈಮೂರ್‌ ಟಾಯ್‌ ಗನ್ ತೋರಿಸಿರುವುದು ಕಾಣಬಹುದು. ಇದದ್ದಕ್ಕಾಗಿ ನೆಟಿಜನ್ಸ್‌ ತೈಮೂರ್‌ ಅನ್ನು ಟ್ರೋಲ್ ಮಾಡಲು ಮತ್ತು ಟೀಕಿಸಲು ಪ್ರಾರಂಭಿಸಿದರು. 
 

ಒಬ್ಬರು 'ಮುಂದೆ ಇದೇ ತಾನೇ ಮಾಡಬೇಕಾಗಿರುವುದು' ಎಂದು ಬರೆದರೆ, ಮತ್ತೊಬ್ಬರು 'ಈಗಿನಿಂದಲೇ ತರಬೇತಿ ಶುರುವಾಗಿದೆ' ಎಂದು ಬರೆದಿದ್ದಾರೆ. ಟ್ರೋಲ್‌ಗಳು ತೈಮೂರ್‌ ನನ್ನು 'ಭಯೋತ್ಪಾದಕ' ಎಂದು ಕರೆಯಲು ಪ್ರಾರಂಭಿಸಿದರು. 

ಒಬ್ಬರು 'ದೊಡ್ಡವನಾದ ಮೇಲೆ ಇದೇ ಆಗಬೇಕಾಗಿರುವುದು' ಎಂದು ಕಾಮೆಂಟ್‌ ಮಾಡಿದ್ದಾರೆ. 'ತಾಲಿಬಾನ್‌ನಂತೆ ಕಾಣುತ್ತಿದ್ದಾನೆ' ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಇನ್ನೊಬ್ಬರು 'ಅಪ್ಪ ಜಿಹಾದಿಯ ಹೆಸರು ಇಟ್ಟಿದ್ದಾರೆ. ಆದರೆ ನಾನೊಬ್ಬ ಜಿಹಾದಿ ಎನ್ನುತ್ತಿದ್ದಾನೆ' ಎಂದು ಬರೆದಿದ್ದಾರೆ. 

ಅದೇ ಸಮಯದಲ್ಲಿ  ತೈಮೂರ್ ಅನ್ನು ಟ್ರೋಲ್ ಮಾಡಿದ  ಜನರನ್ನು ಅನೇಕರು ಟೀಕಿಸಿದರು. 'ಮಗುವನ್ನು ಬಿಟ್ಟುಬಿಡಿ' ಎಂದು ಒಬ್ಬರು  ಹೇಳಿದ್ದಾರೆ. 'ದೇವರ ಸಲುವಾಗಿ, ಅವನು ಮಗು' ಎಂದು ಇನ್ನೊಬ್ಬರು ಬರೆದಿದ್ದಾರೆ. 'ಬಾಲ್ಯದಲ್ಲಿ ನಾವೆಲ್ಲರೂ ಅಂತಹ ಆಟದ ಬಂದೂಕುಗಳನ್ನು ಹೊಂದಿರಲಿಲ್ಲವೇ?' ಎಂದು ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್‌ ಮಾಡಿದ್ದಾರೆ.

click me!