ಯಶ್‌ ಟಾಕ್ಸಿಕ್‌ ಚಿತ್ರದಿಂದ ನಟಿ ಕರೀನಾ ಕಪೂರ್‍ ಔಟ್‌! ಬಾಲಿವುಡ್‌ ಬೆಡಗಿಗೆ ಆಗಿದ್ದೇನು?

By Suvarna News  |  First Published May 3, 2024, 4:20 PM IST

ಯಶ್‌ ಟಾಕ್ಸಿಕ್‌ ಚಿತ್ರದಿಂದ ನಟಿ ಕರೀನಾ ಕಪೂರ್‍ ಹೊರಕ್ಕೆ ಬಂದಿದ್ದಾರೆ, ಅಷ್ಟಕ್ಕೂ ಬಾಲಿವುಡ್‌ ಬೆಡಗಿಗೆ ಆಗಿದ್ದೇನು?
 


ನಟ ಯಶ್​ ಫ್ಯಾನ್ಸ್​   ಟಾಕ್ಸಿಸ್​ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ‘ಕೆಜಿಎಫ್’ ಭರ್ಜರಿ ಯಶಸ್ಸಿನ ಬಳಿಕ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವಿದೆ. ಈ ಚಿತ್ರದಲ್ಲಿ  ಬಾಲಿವುಡ್​ ಬೇಬೋ,  ಕರೀನಾ ಕಪೂರ್​ ಖಾನ್​ ಅವರು  ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಸಕತ್​ ಸದ್ದು ಮಾಡಿತ್ತು. ಈ ಮೂಲಕ ನಟಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡುವವರಿದ್ದರು. ನಿರ್ದೇಶಕಿ ಗೀತು ಮೋಹನ್ ದಾಸ್ ಹಾಗೂ  ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಸಂಸ್ಥೆಯ ಜೊತೆಗೆ ಸಿನಿಮಾ ಟೈಟಲ್ ಕೂಡ ಘೋಷಿಸಿ, ಬಳಿಕ ಚಿತ್ರದಲ್ಲಿ ಮೂವರು ನಾಯಕಿಯರು ಎನ್ನುವ ಗುಸುಗುಸು ಶುರುವಾಯಿತು. ಅದರಲ್ಲಿ ಕರೀನಾ ಕಪೂರ್ ಒಬ್ಬರು ಎನ್ನಲಾಯಿತು.  ಈ ವಿಷಯ ತಿಳಿದಾಗಿನಿಂದಲೂ ಅತ್ತ ಕರೀನಾ ಕಪೂರ್​ ಅಭಿಮಾನಿಗಳು ಹಾಗೂ ಯಶ್​ ಅವರ ಫ್ಯಾನ್ಸ್​ ಈ ಸುದ್ದಿ ನಿಜನಾ ಎನ್ನುವ ಗೊಂದಲದಲ್ಲಿದ್ದರು. ಕೊನೆಗೂ ಅದು ನಿಜ ಎಂದು ಗೊತ್ತಾಗಿತ್ತು, 

ಕಾಫಿ ವಿತ್ ಕರಣ್ ಟಾಕ್‌ ಶೋನಲ್ಲಿ ಕರೀನಾ ಕಪೂರ್ ಹಾಗೂ ಆಲಿಯಾ ಭಟ್ ಅತಿಥಿಗಳಾಗಿ ಕಾಣಿಸಿಕೊಂಡಿದ್ದರು. ಆಗ ಕರಣ್​ ಅವರು, ಕರೀನಾರನ್ನು ಕುರಿತು ನಿಮಗೆ ಪ್ರಭಾಸ್, ರಾಮ್‌ಚರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಹಾಗೂ ಯಶ್ ಈ ಸೌತ್ ನಟರಲ್ಲಿ ಯಾರೊಟ್ಟಿಗೆ ನಟಿಸೋಕೆ ಇಷ್ಟ ಎಂದು ಪ್ರಶ್ನಿಸಿದ್ದರು. ಆಗ ಕರೀನಾ ಅವರು,  ತಕ್ಷಣ 'ಯಶ್' ಎಂದಿದ್ದರು.  ನೀವು ಹೇಳಿದ ಎಲ್ಲಾ ಸ್ಟಾರ್​ಗಳೂ ಸೂಪರ್​...  ಆದ್ರೆ ನಾನು ಕೆಜಿಎಫ್​ ಹುಡುಗಿ. ಹಾಗಾಗಿ ಯಶ್ ಜೊತೆ ನಟಿಸೋಕೆ ಇಷ್ಟ ಎಂದಿದ್ದರು. ತಾವು ಈ ಚಿತ್ರವನ್ನು ನೋಡಿರುವುದಾಗಿಯೂ ತಿಳಿಸಿದ್ದರು. ಅದರ ಬೆನ್ನಲ್ಲೇ ಯಶ್​ ಅವರ ಮುಂಬರುವ ಚಿತ್ರದಲ್ಲಿ ನಟಿ ನಟಿಸುತ್ತಿದ್ದಾರೆ ಎಂದು ಸಾಕಷ್ಟು ಸುದ್ದಿಯಾಗಿತ್ತು.

Tap to resize

Latest Videos

ಅವ್ನ ಜೊತೆ ಮದ್ವೆಯಾಯ್ತು, ನಾಲ್ಕು ಸಲ ಗರ್ಭಪಾತವಾಗಿ ಸತ್ತೇ ಹೋಗಿದ್ದೆ... ನಟಿ ಭಾವನಾ ಶಾಕಿಂಗ್‌ ಹೇಳಿಕೆ

ಆದರೆ ಚಿತ್ರಕ್ಕೆ ಸಂಬಂಧಿಸಿದಂತೆ ಬಿಗ್‌ ಅಪ್‌ಡೇಟ್‌ ಒಂದು ಹೊರಬಂದಿದೆ. ಅದೇನೆಂದರೆ ಕರೀನಾ ಕಪೂರ್‌ ಟಾಕ್ಸಿಕ್‌ ಚಿತ್ರದಿಂದ ಹೊರನಡೆದಿದ್ದಾರೆ ಎನ್ನುವುದು. ಅಷ್ಟಕ್ಕೂ ಆಗಿದ್ದೇನೆಂದರೆ,  ಕರೀನಾ ಮತ್ತು ಯಶ್ ಅವರ ಡೇಟ್ಸ್ ಹೊಂದಿಕೆಯಾಗಲಿಲ್ಲ ಎನ್ನುವುದು. ಇಬ್ಬರ ಡೇಟ್ಸ್‌ ಮ್ಯಾಚ್‌ ಆಗದ ಹಿನ್ನೆಲೆಯಲ್ಲಿ  ಕರೀನಾ ಅವರು ಪ್ಯಾನ್-ಇಂಡಿಯಾ ಸಿನಿಮಾ ಟಾಕ್ಸಿಕ್​ನಿಂದ ಹೊರಬಂದಿದ್ದಾರೆ ಎಂದು ಸುದ್ದಿಯಾಗಿದೆ. ಇದೀಗ ಇವರ ಜಾಗಕ್ಕೆ ಬೇರೆಯವರನ್ನು ಹುಡುಕಲು ಚಿತ್ರತಂಡ ರೆಡಿಯಾಗಿದೆ ಎನ್ನಲಾಗುತ್ತಿದೆ. 

ಅಷ್ಟಕ್ಕೂ ಕರೀನಾ ಇದರಲ್ಲಿ ನಾಯಕಿಯಾಗಿರಲಿಲ್ಲ.  ಯಶ್​ಗೆ ನಾಯಕಿಯಾಗಿ  ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕೇಳಿಬಂದಿದೆ.    ಚಿತ್ರದಲ್ಲಿ ಯಶ್ ಅವರ ಸಹೋದರಿಯಾಗಿ ಕರೀನಾ ನಟಿಸಬೇಕಿತ್ತು.  ಕಿಯಾರಾ ನಾಯಕಿಯಾಗಲಿದ್ದಾರೆ ಎಂದು ಸುದ್ದಿಯಾಗುತ್ತಿದ್ದರೂ,  ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ. ಕಿಯಾರಾ ನಟಿಸುವುದು  ನಿಜವಾಗಿದ್ದರೆ, ಕಿಯಾರಾ ಅಡ್ವಾಣಿ ಅವರಿಗೂ ಇದು ಮೊದಲ ಕನ್ನಡ ಸಿನಿಮಾ ಆಗಲಿದೆ. ಅವರು ಈಗಾಗಲೇ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ಸದ್ಯ, ಕಿಯಾರಾ ಈಗಾಗಲೇ ರಾಮ್ ಚರಣ್ ಜೊತೆ ಗೇಮ್ ಚೇಂಜರ್ ಎಂಬ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ.  

ಕಗ್ಗತ್ತಲಿನಲಿ, ಸುರಂಗದಾಳದಲೂ ಮಿನುಗುವ ಬೆಳಕು ನೀನು: 7ನೇ ವಿವಾಹ ವಾರ್ಷಿಕೋತ್ಸವಕ್ಕೆ ಭಾವುಕ ಪೋಸ್ಟ್‌
 

click me!