ತೃಪ್ತಿ ಡಿಮ್ರಿ ಹಳೆ ಫೋಟೋ ವೈರಲ್‌; ಹಿಂಗಿದ್ದವರು, ನೇಕೆಡ್ ಆಗಿ ನಟಿಸಿದ್ರಾ ಅಂತಿದ್ದಾರೆ ನೆಟಿಜನ್ಸ್!

First Published Mar 15, 2024, 5:41 PM IST

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ (Animal) ಚಿತ್ರದ ನಟಿ ತೃಪ್ತಿ ಡಿಮ್ರಿ  (Tripti Dimri) ಸಾಕಷ್ಷು ಜನಪ್ರಿಯತೆ ಗಳಿಸಿದ್ದಾರೆ. ಕೀರ್ತಿಯ ಉತ್ತುಂಗದಲ್ಲಿರುವ ನಟಿಗೆ ಸಿಕ್ಕಾಪಟ್ಟೆ ಆಫರ್ಸ್ ಬರುತ್ತಿದ್ದು, ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ  ನಟಿಯ ಹಳೇ ಫೋಟೋವೊಂದು ವೈರಲ್ ಆಗುತ್ತಿದ್ದೆ, ಇದನ್ನು ನೋಡಿದ ನೆಟ್ಟಿಗ್ಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಹಳೇ ಫೋಟೋದಲ್ಲಿ ಅಡಗೂಲಜ್ಜಿ ರೀತಿ ಕಾಣಿಸುವ ತೃಪ್ತಿ, ನಗ್ನರಾಗಿ ನಟಿಸಿದ್ರಾ? 

ಈ ಹಿಂದೆ ತೃಪ್ತಿ ಡಿಮ್ರಿ ಕೆಲವು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದರು ಆದರೆ ರಣಬೀರ್ ಕಪೂರ್,ಅವರ ಆನಿಮಲ್‌ ಚಿತ್ರದಲ್ಲಿ  ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡ ನಂತರ ಅವರ ಜನಪ್ರಿಯತೆಯು ಬಹುಪಟ್ಟು ಹೆಚ್ಚಾಯಿತು.

ಡಿಮ್ರಿ  ಅನಿಮಲ್‌ನಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಆದರೆ ರಣಬೀರ್ ಕಪೂರ್‌ನೊಂದಿಗಿನ ಅವರ ನಿಕಟ ದೃಶ್ಯಗಳು ಸಾಕಷ್ಟು ಚರ್ಚೆಯಾಯಿತು. 
 

ಇತ್ತೀಚಿನ ವರದಿಗಳ ಪ್ರಕಾರ ಅನಿಮಲ್ ಚಿತ್ರದ ಯಶಸ್ಸಿನ ನಂತರ ನಟಿ ತೃಪ್ತಿ ಡಿಮ್ರಿ ಅವರು  ತನ್ನ ಶುಲ್ಕವನ್ನು ದ್ವಿಗುಣಗೊಳಿಸಿದ್ದಾರೆ.

'ಆನಿಮಲ್‌  ನಂತರ ತೃಪ್ತಿಯ ಯಶಸ್ಸು ಗಗನಕ್ಕೇರಿತು, ಮತ್ತು ಅವರ ಇನ್‌ಸ್ಟಾಗ್ರಾಮ್ ಅನುಯಾಯಿಗಳು ಮೂರು ಪಟ್ಟು ಹೆಚ್ಚಾಗಿದ್ದಾರೆ. ನಟಿಗೆ ಧನಾತ್ಮಕವಾಗಿ ಪ್ರಯೋಜನವನ್ನು ನೀಡಿತು, ಆದರೂ ಅವರು ಎಲ್ಲಾ ಯಶಸ್ಸು ಮತ್ತು ಪ್ರೀತಿಗೆ ಕೃತಜ್ಞರಾಗಿರಬೇಕು' ಎಂದು ಮೂಲವೊಂದು ಬಹಿರಂಗಪಡಿಸಿದೆ. 
 

ಶುಲ್ಕವನ್ನು ಹೆಚ್ಚಿಸಲು ಒಂದು ಕಾರಣವೆಂದರೆ  ಅವರು ಚಿತ್ರದಲ್ಲಿ ಪೂರ್ಣವಾಗಿ ಪಾತ್ರದಲ್ಲಿ ತೊಡಗಿಕೊಂಡಿದ್ದರು. ಡಿಮ್ರಿ ಅವರು ತಮ್ಮ ಮುಂದಿನ ಚಿತ್ರ ಭೂಲ್ ಭುಲೈಯಾ 3 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
 

ಇದರ ನಡುವೆ ತೃಪ್ತಿ ಅವರ  ಹಳೆಯ ಫೋಟೋಗಳು ವೈರಲ್‌ ಆಗಿವೆ.ನೆಟಿಜನ್‌ಗಳು  'ಸಾಕಷ್ಟು ಬೊಟೊಕ್ಸ್ ಮತ್ತು ಫಿಲ್ಲರ್‌ಗಳಿಂದ ಕೂಡಿದೆ' ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

ಅವರ ಹಳೆಯ ಚಿತ್ರಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಸಂಚಲನ ಸೃಷ್ಟಿಸಿದೆ. ಅವರ  ರೂಪಾಂತರದ ಬಗ್ಗೆ ನೆಟಿಜನ್‌ಗಳು ಸ್ಟ್ರಾಂಗ್ ಆಗಿ ಕಾಮೆಂಟ್‌ ಮಾಡುತ್ತಿದ್ದಾರೆ.
 

ತೃಪ್ತಿಯ ಹಳೆ ಫೋಟೋಗಳನ್ನು ನೋಡಿ ಬೊಟೊಕ್ಸ್ ಮತ್ತು ಫಿಲ್ಲರ್ ಚಿಕಿತ್ಸೆಗಳು ಸೇರಿದಂತೆ ಕೆಲವು ರೀತಿಯ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿರಬಹುದು ಎಂದು ಟೀಕಿಸಿದ್ದಾರೆ.

'ತೃಪ್ತಿ ಬಯೋಡಿಗ್ರೆಡಬಲ್‌ ಆಗಿದ್ದಾಗ' ಎಂದು ಒಬ್ಬರು ಅಪಹಾಸ್ಯ  ಮಾಡಿದರೆ, ಇನ್ನೊಬ್ಬ ಇಂಟರ್ನೆಟ್ ಬಳಕೆದಾರರು, 'ಅವಳು ಖಂಡಿತವಾಗಿಯೂ ಅವಳ ಕಣ್ಣುಗಳು, ತುಟಿಗಳು ಮತ್ತು ಮೂಗಿಗೆ ಏನೋ ಮಾಡಿದ್ದಾಳೆ" ಎಂದು ಬರೆದಿದ್ದಾರೆ.

click me!