ಬ್ಯಾಕ್ ಲೆಸ್ ಡ್ರೆಸ್‌ನಲ್ಲಿ 'ನಟಸಾರ್ವಭೌಮ' ನಟಿಯ ಹಾಟ್ ಪೋಸ್

First Published Jul 23, 2022, 1:51 PM IST

ಸದ್ಯ ಅನುಪಮಾ ಪರಮೇಶ್ವರನ್ ಬ್ಯಾಕ್ ಲೆಸ್ ಡ್ರೆಸ್ ಧರಿಸಿರುವ ಫೋಟೋ ಶೇರ್ ಮಾಡಿದ್ದಾರೆ. ಸದಾ ಕ್ಯೂಟ್ ವಿಡಿಯೋಗಳನ್ನು ಮತ್ತು ಫೋಟೋಗಳನ್ನು ಶೇರ್ ಮಾಡುತ್ತಿದ್ದ ನಟಿ ಇದೀಗ ಬೋಲ್ಡ್ ಪೋಸ್ಟ್ ಹಂಚಿಕೊಂಡಿದ್ದಾರೆ. 

 ಮಲಯಾಳಂನ ಕ್ಯೂಟ್  ಆಂಡ್ ಕರ್ಲಿ ಹೇರ್ ಸುಂದರಿ ಅನುಪಮಾ ಪರಮೇಶ್ವರನ್ ಇತ್ತೀಚಿನ ದಿನಗಳಲ್ಲಿ ತನ್ನ ಗ್ಲಾಮರ್ ಲುಕ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಅನುಪಮಾ ಪರಮೇಶ್ವರ್ ಅವರು ಇತ್ತೀಚಿಗೆ ಸಖತ್ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. 

ಸದ್ಯ ಅನುಪಮಾ ಪರಮೇಶ್ವರನ್ ಬ್ಯಾಕ್ ಲೆಸ್ ಡ್ರೆಸ್ ಧರಿಸಿರುವ ಫೋಟೋ ಶೇರ್ ಮಾಡಿದ್ದಾರೆ. ಸದಾ ಕ್ಯೂಟ್ ವಿಡಿಯೋಗಳನ್ನು ಮತ್ತು ಫೋಟೋಗಳನ್ನು ಶೇರ್ ಮಾಡುತ್ತಿದ್ದ ನಟಿ ಇದೀಗ ಬೋಲ್ಡ್ ಪೋಸ್ಟ್ ಹಂಚಿಕೊಂಡಿದ್ದಾರೆ. ಫೋಟೋ ಶೇರ್ ಮಾಡಿ ಅನುಪಮಾ ನೀಡಿರುವ ಕ್ಯಾಪ್ಷನ್ ಗಮನ ಸೆಳೆಯುತ್ತಿದೆ.

ಯಾವಾಗ ನಿಮ್ಮನ್ನು ಹೇಗೆ ನಗಿಸುವುದು ಹೇಗೆಂದು ಅವನಿಗೆ ತಿಳಿದಾಗ ಎಂದು ಹೇಳಿದ್ದಾರೆ. ಇನ್ನು  ಮತ್ತೊಂದು ಫೋಟೋ ಶೇರ್ ಮಾಡಿ 2017 ಫೋಟೋ ಮತ್ತು  ಈಗಿನ ಫೋಟೋಗೆ ಹೋಲಿಕೆ ಮಾಡಿ ಪೋಸ್ಟ್ ಹಾಕಿದ್ದಾರೆ. ಅದರಲ್ಲಿ 5 ವರ್ಷಗಳಲ್ಲಿ  ಎಷ್ಟು ಬದಲಾಗಿದ್ದೀನಿ. ದೇಹ ಅಲ್ಲ, ಮೈಂಡ್ ಎಂದು ಹೇಳಿದ್ದಾರೆ

ಮಲಯಾಳಿ ನಟಿ ಅನುಪಮಾ ಪರಮೇಶ್ವರ್ ಸದ್ಯ ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಕಾರ್ತಿಕೇಯಾ-2, 18 ಪೇಜ್. ಬಟರ್‌ಫ್ಲೈ ಸಿನಿಮಗಳಲ್ಲಿ ನಟಿಸುತ್ತಿದ್ದಾರೆ. ಕೊನೆಯದಾಗಿ ಅನುಪಮಾ ಅಂತೆ ಸುಂದರಾನಿಕಿ ಸಿನಿಮಾದಲ್ಲಿ ನಟಿಸಿದ್ದರು. ನಾನಿ ನಾಯಕನಾಗಿ ಕಾಣಿಸಿಕೊಂಡಿದ್ದ ಈ ಸಿನಿಮಾದಲ್ಲಿ ಅನುಪಮಾ ವಿಶೇಷ ಪಾತ್ರದಲ್ಲಿ ನಟಿಸಿದ್ದರು. 

ಇನ್ನು ಕನ್ನಡದಲ್ಲಿ ಅನುಪಮಾ ಪರಮೇಶ್ವರ್ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ನಟಸಾರ್ವಭೌಮ ಸಿನಿಮಾದಲ್ಲಿ ನಟಿಸಿದ್ದರು. ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುವ ಮೂಲಕ ಕನ್ನಡ ಅಭಿಮಾನಿಗಳ ಮುಂದೆ ಬಂದಿದ್ದರು. 

ಈ ಸಿನಿಮಾ ಬಳಿಕ ಅನುಪಮಾ ಮತ್ತೆ ಕನ್ನಡಕ್ಕೆ ಬರಲಿ, ಕನ್ನಡ ಸಿನಿಮಾ ಮಾಡಲಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಆದರೆ ನಟಸಾರ್ವಭೌಮ ಬಳಿಕ ಅನುಪಮಾ ಮತ್ತೆ ಕನ್ನಡದಲ್ಲಿ ಸಿನಿಮಾ ಮಾಡಿಲ್ಲ. ಮತ್ತೆ ಕನ್ನಡದಲ್ಲಿ ಯಾವಾಗ ನಟಿಸುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.     

click me!