ನಟಿ ಪವಿತ್ರಾ ಜಯರಾಂ ಅಪಘಾತದಲ್ಲಿ ನಿಧನರಾದ ಬಳಿಕ ಅವರ ಸ್ನೇಹಿತ, ಪ್ರೇಮಿ ನಟ ಚಂದು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತೇ ಇದೆ. ಚಂದು ಸಾವಿನ ಬಳಿಕ ಅವರ ಪತ್ನಿ ಶಿಲ್ಪಾ ಮಾತನಾಡಿ ಹಲವು ಸಂಗತಿಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.
ತೆಲುಗಿನ 'ತ್ರಿನಯನಿ' ಧಾರಾವಾಹಿ ನಟಿ ಕನ್ನಡತಿ, ಮಂಡ್ಯದ ಪವಿತ್ರಾ ಜಯರಾಂ (Pavithra Jayaram) ಅಪಘಾತದಲ್ಲಿ ನಿಧನರಾದ ಬಳಿಕ ಅವರ ಸ್ನೇಹಿತ, ಪ್ರೇಮಿ ನಟ ಚಂದು (Chandrakanth) ನಿನ್ನೆ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತೇ ಇದೆ. ಚಂದು ಸಾವಿನ ಬಳಿಕ ಅವರ ಪತ್ನಿ ಶಿಲ್ಪಾ ಮಾತನಾಡಿ ಹಲವು ಸಂಗತಿಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. 'ಪವಿತ್ರಾ ಜಯರಾಂ ನನಗೆ ಕರೆ ಮಾಡಿ ನಿನ್ನ ಗಂಡ ಚಂದ್ರಕಾಂತ್‌ನನ್ನು ಮರೆತು ಬಿಡು ಎಂದು ಬೆದರಿಕೆ ಹಾಕಿದ್ದರು' ಎಂದು ಹೇಳಿಕೊಂಡು ಶಿಲ್ಪಾ ಕಣ್ಣೀರು ಹಾಕಿದ್ದಾರೆ.
ಇತ್ತೀಚೆಗೆ ತೆಲುಗಿನ ತ್ರಿನಯನಿ (Trinayani) ಧಾರಾವಾಹಿ ನಟಿ ಮಂಡ್ಯದ ಪವಿತ್ರಾ ಜಯರಾಂ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಇದರ ಬೆನ್ನಲ್ಲೇ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಚಂದ್ರಕಾಂತ್ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಲ್ಪಾ, 'ನಟಿ ಪವಿತ್ರಾ ಜಯರಾಂ ನನಗೆ ಕರೆ ಮಾಡಿ ನಿನ್ನ ಗಂಡ ಚಂದ್ರಕಾಂತ್‌ನನ್ನು ಮರೆತು ಬಿಡಿ ಎಂದು ಬೆದರಿಕೆ ಹಾಕುತ್ತಿದ್ದರು' ಎಂದು ಹೇಳಿ, ಪವಿತ್ರಾ ಮತ್ತು ಚಂದ್ರಕಾಂತ ನಡುವಿನ ರಹಸ್ಯ ಪ್ರೇಮಸಂಬಂಧವನ್ನು ಬಿಚ್ಚಿಟ್ಟಿದ್ದಾರೆ.
ಡಿಸ್ಕೋ ಶಾಂತಿ ತಂಗಿಯನ್ನು ಡಿವೋರ್ಸ್ ಮಾಡಿದ್ಯಾಕೆ ನಟ ಪ್ರಕಾಶ್ ರಾಜ್? ಹೊಸ ಪತ್ನಿ ಜೊತೆಗಿದ್ದಾರಾ?
ಜೊತೆಗೆ, ಶಿಲ್ಪಾ ಪ್ರೇಮಾ ಚಂದ್ರಕಾಂತ್ ಸಾವಿನ ಬಳಿಕ 'ಪವಿತ್ರಾ ಜಯರಾಂ ಅಪಘಾತವಾಗಿ ನಿಧನರಾದ ಬಳಿಕ ನನ್ನ ಪತಿ ಚಂದ್ರಕಾಂತ್ ಕೂಡ ಅನಾರೋಗ್ಯಕ್ಕೆ ಒಳಗಾಗಿ ಹಾಸಿಗೆ ಹಿಡಿದಿದ್ದರು. ಚಂದ್ರಕಾಂತ್ ಚಿಕಿತ್ಸೆ ಪಡೆಯುವ ವೇಳೆ ನಮ್ಮೆದುರಿಗೆ ಪವಿತ್ರಾಳ ಬಗ್ಗೆಯೇ ಮಾತನಾಡುತ್ತಾ ಅಳಲು ತೋಡಿಕೊಂಡಿದ್ದರು. ಪವಿತ್ರಾ ಸಾವಿನ ನಂತರವಾದರೂ ಜೀವನವನ್ನು ಅರ್ಥ ಮಾಡಿಕೊಂಡು ನಮ್ಮೊಂದಿಗೆ ಸುಖ ಜೀವನ ಕಳೆಯುತ್ತಾರೆ ಎಂದುಕೊಂಡಿದ್ದೆವು. ಆದರೆ, ಈಗ ಅವರು ಆತ್ಮಹತ್ಯೆಗೆ ಶರಣಾಗಿದ್ದು ನಮಗೆ ಜೀವನದ ಮೇಲಿನ ನಂಬಿಕೆಯೇ ಹೊರಟು ಹೋಗಿದೆ' ಎಂದಿದ್ದಾರೆ ಶಿಲ್ಪಾ.
ಗುರುಕಿರಣ್‌ಗೆ ಯಾಕೆ 'ಕಿಲಾಡಿ' ಅಂದ್ಬಿಟ್ರು ಉಪೇಂದ್ರ; ಅವರಿಬ್ಬರ ಸ್ನೇಹಕ್ಕೆ ಅಂಥದ್ದೇನಾಯ್ತು?
ಅಂದರೆ, 'ಪವಿತ್ರಾ ಜಯರಾಂ ಸಾವಿನ ಬಳಿಕ ನಟ ಚಂದ್ರಕಾಂತ್, ಮತ್ತೆ ಪತ್ನಿಯ ಜೊತೆಗೆ ಮಾತನಾಡಿದ್ದಾರೆ, ಸಮಯ ಕಳೆದಿದ್ದಾರೆ. ಚಂದು ಅವರ ಗಮನವನ್ನು ಆ ನೋವಿನಿಂದ ಬೇರೆಡೆ ಸೆಳೆದು, ಸ್ವಂತ ಹೆಂಡತಿ-ಮಕ್ಕಳ ಪರವಾಗಿ ಮಿಡಿಯುವಂತೆ ಮಾಡಬಹುದಿತ್ತೇನೋ! ಇದಕ್ಕೆ ಕೌನ್ಸಿಲಿಂಗ್ ಸಹಾಯ ಪಡೆಯಬಹುದಿತ್ತೇನೋ! ಪವಿತ್ರಾ ಸಾವಿನ ಬಳಿಕ ನಾಲ್ಕು ದಿನಗಳ ಸಮಯ ಚಂದುವನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ಲಭ್ಯವಿತ್ತು. ಈ ಸಮಯವನ್ನು ಚಂದು ಪತ್ನಿ, ಕುಟುಂಬಸ್ಥರು ಅಥವಾ ಸ್ನೇಹಿತರು ಉಪಯೋಗಿಸಿಕೊಂಡು ಚಂದು ಪ್ರಾಣ ಕಾಪಾಡಬಹುದಿತ್ತು' ಎನ್ನುವ ಮಾತುಗಳು ಚಂದು ಆಪ್ತವಲಯದಿಂದ ಈಗ ಕೇಳಿ ಬರುತ್ತಿವೆ. \
ಪವಿತ್ರಾ ಜಯರಾಂ ಸಂಬಂಧಿ ಮಂಡ್ಯದ ಲೋಕೇಶ್ ಚಂದು ಲವ್, ಆತ್ಮಹತ್ಯೆ ಬಗ್ಗೆ ಹೇಳಿದ್ದೇನು?
ಆದರೆ, ಇದೀಗ ನಟ ಚಂದ್ರಕಾಂತ್ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಮತ್ತೆ ಮರಳಿ ಬಾರದ ಲೋಕಕ್ಕೆ ಪವಿತ್ರಾ ಹಾಗೂ ಚಂದ್ರಕಾಂತ್ ಹೋಗಿದ್ದಾರೆ. ಆದರೆ, ಚಂದು ಪತ್ನಿ ಅವರಬ್ಬರ ಪ್ರೇಮಪ್ರಕರಣವನ್ನು ಎಳೆಎಳೆಯಾಗಿ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಶಿಲ್ಪಾ ಪ್ರೇಮಾ ಈ ಬಗ್ಗೆ 'ನಾನು ಮತ್ತು ಚಂದ್ರಕಾಂತ್ ಪ್ರೀತಿಸಿ ಮದುವೆ ಆಗಿದ್ದೆವು. ನಮ್ಮ ಪ್ರೀತಿಗೆ ಮೊದಲು ಒಪ್ಪದ ಹಿರಿಯರನ್ನು ಚಂದ್ರಕಾಂತ ಅವರೇ ಒಪ್ಪಿಸಿ 2015ರಲ್ಲಿ ಮದುವೆಯಾಗಿದ್ದರು. ಮದುವೆಯಾದ ನಂತರ ತುಂಬಾ ಪ್ರೀತಿಯಿಂದ ಸಂಸಾರ ಸಾಗುತ್ತಿತ್ತು. ನಮಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ.
ಡಾ ರಾಜ್ ನೇತೃತ್ವದ ಗೋಕಾಕ್ ಚಳುವಳಿಗೆ ವಿಷ್ಣುವರ್ಧನ್ ಬಂದಿರಲಿವೇ? ರಿಯಲ್ ಸೀಕ್ರೆಟ್ ಏನು?
ಆದರೆ, ತ್ರಿನಯನಿ ಸೀರಿಯಲ್‌ನಲ್ಲಿ ನನ್ನ ಗಂಡನಿಗೆ ಚಾನ್ಸ್ ಸಿಕ್ಕಿದ್ದೇ ತಡ, ನನ್ನ ಕುಟುಂಬದ ಶಾಂತಿ, ನೆಮ್ಮದಿ, ಸುಖ-ಸಂತೋಷ ಎಲ್ಲವೂ ಹಾಳಾಯಿತು. ಆ ಧಾರಾವಾಹಿಯ ಖಳನಾಯಕಿ ಪವಿತ್ರಾ ಜಯರಾಂ ನಮ್ಮ ಸಂಸಾರಕ್ಕೆ ನಿಜವಾದ ವಿಲನ್ ಆಗಿಬಿಟ್ಟಳು. ಪವಿತ್ರಾ ಜಯರಾಂ ಜೊತೆ ಸಂಬಂಧ ಹೊಂದಿದ್ದ ನನ್ನ ಪತಿ ಚಂದ್ರಕಾಂತ್, ಧಾರಾವಾಹಿ ಶೂಟಿಂಗ್ ಮುಗಿಸಿಕೊಂಡು ಬರುವಾಗ ಪ್ರತಿದಿನ ಕುಡಿದು ಬರುತ್ತಿದ್ದರು. ನನಗೆ ಚಿತ್ರಹಿಂಸೆ ಕೊಡಲು ಆರಂಭಿಸಿದರು.
ಪವಿತ್ರಾ ಜಯರಾಂ ಸಾವಿನ ಬೆನ್ನಲ್ಲೇ 'ತ್ರಿನಯನಿ' ನಟ ಚಂದು ಆತ್ಮಹತ್ಯೆ!
ನಂತರ, ಪ್ರೀತಿಸಿ ಮದುವೆಯಾದ ನನ್ನನ್ನು, ಮಕ್ಕಳನ್ನು ಹಾಗೂ ಇಡೀ ಕುಟುಂಬದ ಬಗ್ಗೆ ಕಾಳಜಿ ಮಾಡುವುದನ್ನೇ ನಿಲ್ಲಿಸಿಬಿಟ್ಟರು. ಪವಿತ್ರಾ ಅವರ ಸಂಬಂಧದಲ್ಲಿ ಸಿಲುಕಿದ ನಂತರ ನನ್ನ ಪತಿ ಚಂದ್ರಕಾಂತ್ ಮನೆಯಲ್ಲಿದ್ದರೂ ಕಟುಂಬಕ್ಕೆಂದು ಸಮಯ ಕೊಡುತ್ತಿರಲಿಲ್ಲ. ಪವಿತ್ರಾ ಮೇಲೆಯೇ ಇಡೀ ದಿನ ಫೋಕಸ್ ಮಾಡುತ್ತಾ ಅವರೊಂದಿಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದರು.
ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಾ ನನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೀಯಾ' ಎಂದೆಲ್ಲಾ ಕೇಳುತ್ತಿದ್ದರು. ಮುಂದುವರೆದು ಅವರಿಬ್ಬರು ಕೆಟ್ಟದಾಗಿ ಮಾತನಾಡಿಕೊಳ್ಳುವುದನ್ನು ನನಗೆ ಕೇಳಿಸಿಕೊಳ್ಳಲೂ ಆಗುತ್ತಿರಲಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ನನಗೆ ಹೊಡೆದು ಹಿಡಿಶಾಪ ಹಾಕುತ್ತಿದ್ದನು' ಎಂದು ಶಿಲ್ಪಾ ಹೇಳಿಕೊಂಡಿದ್ದಾರೆ.