
'ಮಿ. ನಟವರ್‌ಲಾಲ್', 'ದೋ ಅಂಜಾನೆ', 'ಮುಕದ್ದರ್ ಕಾ ಸಿಕಂದರ್', 'ಇಮಾನ್ ಧರಂ', 'ಖೂನ್ ಪಸಿನ' , 'ಗಂಗಾ ಕಿ ಸೌಗಂಧ್',- ಹೀಗೆ ಸಾಕಷ್ಟು ಬಾಲಿವುಡ್ ಸಿನಿಮಾಗಳಲ್ಲಿ ಅಮಿತಾಬ್ ಮತ್ತು ರೇಖಾ ಒಟ್ಟಿಗೇ ನಟಿಸಿದ್ದರು. 'ಸಿಲ್ಸಿಲಾ' ಅಮಿತಾಬ್ ಮತ್ತು ರೇಖಾ ಅವರನ್ನು ಒಳಗೊಂಡ ಕೊನೆಯ ಚಿತ್ರ. ದೋ ಅಂಜಾನೆ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗಿನಿಂದಲೂ ಇವರಿಬ್ಬರ ಸುದ್ದಿ ಬಿ-ಟೌನ್ದಲ್ಲಿ ಹರಿದಾಡುತ್ತಲೇ ಇತ್ತು. ಇಬ್ಬರೂ ಪ್ರೀತಿಸುತ್ತಿದ್ದುದು ಕೂಡ ನಿಜವೇ ಆಗಿತ್ತು.
ಇವರಿಬ್ಬರ ನಡುವೆ ಜಯಾ ಬಾಧುರಿ (Jaya Badhuri) ಎಂಟ್ರಿ ಕೊಟ್ಟಿದ್ದರು. ಅಮಿತಾಭ್ ಬಚ್ಚನ್ ಹಾಗೂ ಜಯಾ ಅವರು 1973ರಲ್ಲಿ ಮದುವೆಯಾದರು. ಅಮಿತಾಭ್ ಬಚ್ಚನ್ ಅವರ ಮದುವೆ ಜಯಾ ಅವರ ಜೊತೆಗೆ ಆದ ನಂತರ ರೇಖಾ ಜರ್ಜರಿತರಾಗಿದ್ದರು. ಹಾಗೆಯೇ ಇವರಿಬ್ಬರ ಪ್ರೀತಿ ವಿಷಯ ಜಯಾ ಅವರಿಗೆ ಸಹಜವಾಗಿಯೇ ಅಸುರಕ್ಷತೆಯ ಭಾವನೆ ಹುಟ್ಟುಹಾಕಿತ್ತು.
1978ರಲ್ಲಿ ಸ್ಟಾರ್‌ಡಸ್ಟ್‌ಗೆ ನೀಡಿದ ವಿವಾದಾತ್ಮಕ ಸಂದರ್ಶನದಲ್ಲಿ, ರೇಖಾ ಅವರು ಪ್ರಕಾಶ್ ಮೆಹ್ರಾ ಅವರ ಚಲನಚಿತ್ರ 'ಮುಕದ್ದರ್ ಕಾ ಸಿಕಂದರ್' ನಲ್ಲಿ ಅಮಿತಾಭ್ ಅವರೊಂದಿಗಿನ ತಮ್ಮ ಪ್ರೇಮ ದೃಶ್ಯಗಳನ್ನು ನೋಡುವಾಗ ಅಮಿತಾಬ್ ಅವರ ಪತ್ನಿ, ನಟಿ ಜಯಾ ಬಚ್ಚನ್ ಕಣ್ಣೀರು ಹಾಕುತ್ತಿದ್ದರು ಎಂದು ಹೇಳಿದ್ದರು.
'ಒಮ್ಮೆ, ಮುಕದ್ದರ್ ಕಾ ಸಿಕಂದರ್ ಚಿತ್ರದ ಟ್ರಯಲ್ ಶೋ ನೋಡಲು ಬಂದಾಗ ನಾನು ಇಡೀ (ಬಚ್ಚನ್) ಕುಟುಂಬವನ್ನು ಪ್ರೊಜೆಕ್ಷನ್ ಕೋಣೆಯ ಮೂಲಕ ನೋಡುತ್ತಿದ್ದೆ. ಜಯಾ ಮುಂದಿನ ಸಾಲಿನಲ್ಲಿ ಕುಳಿತಿದ್ದರು ಮತ್ತು ಅವರು (ಅಮಿತಾಭ್) ಮತ್ತು ಅವರ ಪೋಷಕರು ಅವಳ ಹಿಂದಿನ ಸಾಲಿನಲ್ಲಿ ಇದ್ದರು. ನನಗೆ ಕಾಣುತ್ತಿದ್ದಷ್ಟು ಸ್ಪಷ್ಟವಾಗಿ ಅವರಿಗೆ ಅವಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಮತ್ತು ನಮ್ಮ ಪ್ರೀತಿಯ ದೃಶ್ಯಗಳ ಸಮಯದಲ್ಲಿ, ಅವಳ ಮುಖದ ಮೇಲೆ ಕಣ್ಣೀರು ಸುರಿಯುವುದನ್ನು ನಾನು ನೋಡಿದೆ,' ಎಂದು ರೇಖಾ ಹೇಳಿದ್ದರು.
ಇದಾದ ಬಳಿಕ ರೇಖಾ ಜೊತೆ ನಟಿಸೋದಿಲ್ಲ ಎಂದು ಅಮಿತಾಭ್ ಬಚ್ಚನ್ ಘೋಷಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.