
ಹೊಸಪೇಟೆ(ಮೇ.19): ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ, ಉದ್ಯೋಗದಲ್ಲಿ ಅವಕಾಶಕ್ಕಾಗಿ ಸಂವಿಧಾನ ತಿದ್ದುಪಡಿ ಮಾಡಿ 371 (ಜೆ) ಸೌಲಭ್ಯ ಕಲ್ಪಿಸಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ್ ಹೇಳಿದರು. ಈಶಾನ್ಯ ಕರ್ನಾಟಕ ವಿಧಾನಪರಿಷತ್ ಚುನಾವಣೆ ನಿಮಿತ್ತ ಬಳ್ಳಾರಿ ಗ್ರಾಮೀಣ ಹಾಗೂ ವಿಜಯನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಗೌತಮ್ ಬುದ್ಧ ಪಂಕ್ಷನ್ ಹಾಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅನುಕೂಲವಾಗಲು ಸಂವಿಧಾನ ತಿದ್ದುಪಡಿ ಮಾಡಿ ಕಲಂ 371 (ಜೆ) ಮುಖಾಂತರ ಲಕ್ಷಾಂತರ ಜನರಿಗೆ ಮೆಡಿಕಲ್, ಎಂಜಿನಿಯರಿಂಗ್, ಡೆಂಟಲ್, ಫಾರ್ಮಸಿ, ಅಗ್ರಿಕಲ್ಚರ್ ಮುಖಾಂತರ ಈ ಭಾಗದ ಜನರಿಗೆ ಸೀಟುಗಳನ್ನು ಸಿಗುವಂತೆ ಮಾಡಿದ ಕೀರ್ತಿ ಎಐಸಿಸಿ ಅಧ್ಯಕ್ಷೆ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ದಿ.ಧರ್ಮಸಿಂಗ್ ಅವರಿಗೆ ಸಲ್ಲುತ್ತದೆ ಎಂದರು.
ವಿಧಾನ ಪರಿಷತ್ ಚುನಾವಣೇಲೂ ಕೋಟಿ ಕುಳಗಳು..!
ಕಲ್ಯಾಣ ಕರ್ನಾಟಕ ಭಾಗದ ಯುವ ಜನರು, ಮಹಿಳೆಯರು, ಬಡವರು, ದಲಿತರು, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಏಳ್ಗೆಗೆ ಹಲವು ಯೋಜನೆಗಳ ಮೂಲಕ ಶಾಲಾ, ಕಾಲೇಜು, ಕೈಗಾರಿಕೆ, ವಿಶ್ವವಿದ್ಯಾಲಯ, ಬೃಹತ್ ಸಾರ್ವಜನಿಕ ಆಸ್ಪತ್ರೆಗಳು, ಕೃಷಿ ಮಾರುಕಟ್ಟೆಗಳನ್ನು ಕಾಂಗ್ರೆಸ್ ಸರ್ಕಾರದ ಅಧಿಕಾರದ ಅವಧಿಯಲ್ಲಿ ಆಗಿವೆ ಎಂದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ವಿದ್ಯಾನಿಧಿ, ಪಧವೀಧರರಿಗೆ ಮಾಸಿಕ ಸಹಾಯ ಧನ ಪಾವತಿಯಾಗುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಕಾಳಜಿಯಾಗಿದೆ. ಪದವೀಧರರು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ್ ಪಾಟೀಲ್ ಗೆಲುವಿಗೆ ಕಾರ್ಯಕರ್ತರು ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚಂದ್ರಶೇಖರ ಪಾಟೀಲ, ವಿಪ ಮಾಜಿ ಸದಸ್ಯ ಶರಣಪ್ಪ ಮಟ್ಟೂರು, ಬಳ್ಳಾರಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ. ಶಿವಯೋಗಿ, ಕೆಪಿಸಿಸಿ ಪದವೀಧರ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಬಿ. ಶ್ರೀನಿವಾಸ ರೆಡ್ಡಿ, ಮುಖಂಡರಾದ ಪಿ. ವೀರಾಂಜನೇಯ್ಯ, ನಿಂಬಗಲ್ ರಾಮಕೃಷ್ಣ, ಬಿ. ಮಾರೆಣ್ಣ, ಬಣ್ಣದ ಮನೆ ಸೋಮಶೇಖರ್, ಡಿ. ವೆಂಕಟರಮಣ, ತಮ್ಮನಳ್ಳೆಪ್ಪ, ಕೆ. ರಮೇಶ್, ಪತ್ರೇಶ್ ಹಿರೇಮಠ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವಿನಾಯಕ ಶೆಟ್ಟರ್, ಖಾಜಾ ಹುಸೇನ್, ಅಟವಾಳಗಿ ಕೊಟ್ರೇಶ್, ಕ್ವಾಲ್ವಿ ಹನುಮಂತಪ್ಪ, ಕೋರಿ ಗೋಣಿ ಬಸಪ್ಪ, ವಿ. ಅಂಜಿನಪ್ಪ, ಕುಬೇರಪ್ಪ, ಚನ್ನಬಸಪ್ಪ, ಸಣ್ಣ ಈರಪ್ಪ, ಮಹಿಳಾ ಅಧ್ಯಕ್ಷರಾದ ಯೋಗ ಲಕ್ಷ್ಮೀ, ಬಾನು ಬೀ ಮತ್ತಿತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.