ರಾಖಿ ಆಪರೇಷನ್​ ಸಕ್ಸಸ್​: 10 ಸೆಂ.ಮೀ. ಉದ್ದದ ಗಡ್ಡೆ ತೋರಿಸಿ ಟ್ರೋಲಿಗರ ಬಾಯಿ ಮುಚ್ಚಿಸಿದ ಮಾಜಿ ಪತಿ

By Suchethana D  |  First Published May 18, 2024, 5:14 PM IST

ನಟಿ ರಾಖಿ ಸಾವಂತ್​ ಅವರ ಆಪರೇಷನ್​ ಸಕ್ಸಸ್​ ಆಗಿದೆ. ಅವರ ಗರ್ಭಕೋಶದಿಂದ ತೆಗೆದಿರುವ 10 ಸೆಂ.ಮೀ ಉದ್ದದ ಗಡ್ಡೆಯನ್ನು ಅವರ ಮಾಜಿ ಪತಿ ರಿತೇಶ್​ ತೋರಿಸಿದ್ದಾರೆ. 
 


ಕೊನೆಗೂ ಬಾಲಿವುಡ್​ ನಟಿ ರಾಖಿ ಸಾವಂತ್​ ಆಪರೇಷನ್​ ಮುಗಿದಿದೆ. ಮೊನ್ನೆ ಮೊನ್ನೆಯವರೆಗೂ ಚಿತ್ರ-ವಿಚಿತ್ರ ಡ್ರೆಸ್​ ತೊಟ್ಟು ಡ್ರಾಮಾ ಮಾಡುತ್ತಿದ್ದ ನಟಿ ಏಕಾಏಕಿ ಆಸ್ಪತ್ರೆಗೆ ಅಡ್ಮಿಟ್​ ಆಗಿದ್ದರಿಂದ ಇದು ಕೂಡ ಡ್ರಾಮಾ ಎಂದೇ ಮಾತನಾಡಿಕೊಳ್ಳುವವರ ಬಾಯಿ ಮುಚ್ಚಿಸಿದ್ದಾರೆ ಮೊದಲ ಮಾಜಿ ಪತಿ ರಿತೇಶ್ ರಾಜ್ ಸಿಂಗ್. ದಿಢೀರ್​ ಎಂದು ಆಸ್ಪತ್ರೆಗೆ ದಾಖಲಾಗಿದ್ದರಿಂದ ಸೋಷಿಯಲ್​  ಮೀಡಿಯಾಗಳಲ್ಲಿ ನಟಿಯನ್ನು ಟ್ರೋಲ್​ ಮಾಡಿದವರೇ ಹೆಚ್ಚು. ಸುಪ್ರೀಂಕೋರ್ಟ್​ ತೀರ್ಪಿನ ಹಿನ್ನೆಲೆಯಲ್ಲಿ, ನಟಿ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇರುವ ಕಾರಣ, ಈಕೆ ನಾಟಕ ಮಾಡುತ್ತಿದ್ದಾರೆ ಎಂದು ಎರಡನೆಯ ಮಾಜಿ ಪತಿ ಆದಿಲ್​ ಖಾನ್​ ದುರ್ರಾನಿ ಕೂಡ ಸೋಷಿಯಲ್​ ಮೀಡಿಯಾದಲ್ಲಿ ತಿಳಿಸಿದ್ದರು. ಮಾತ್ರವಲ್ಲದೇ ಹಲವಾರು ಮಂದಿ ಇದನ್ನೇ ಹೇಳಿದ್ದರು.

ಅವರ ಬಾಯಿ ಮುಚ್ಚಿಸಿರೋ ಮೊದಲ ಮಾಜಿ ಪತಿ ರಿತೇಶ್​, ತಮ್ಮ ಮೊಬೈಲ್​ ಫೋನ್​ನಲ್ಲಿ ತೆಗೆದಿರುವ ಗಡ್ಡೆಯನ್ನು ತೋರಿಸಿದ್ದಾರೆ. ಗರ್ಭಕೋಶದಲ್ಲಿ ತುಂಬಾ ದೊಡ್ಡದಾದ ಗಡ್ಡೆ ಇತ್ತು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ರಾಖಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ರಿತೇಶ್​ ಹೇಳಿದ್ದಾರೆ. ಮೂರು ಗಂಟೆ ಶಸ್ತ್ರ ಚಿಕಿತ್ಸೆ ನಡೆಯಿತು. ರಾಖಿಗೆ ಇನ್ನೂ ಎಚ್ಚರವಾಗಿಲ್ಲ ಎಂದಿದ್ದಾರೆ. ಎದೆ ಮತ್ತು ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  ಹಲವಾರು ಪರೀಕ್ಷೆಗಳನ್ನು ನಡೆಸಿದ ನಂತರ ವೈದ್ಯರು ರಾಖಿಯ ಗರ್ಭಾಶಯದಲ್ಲಿ ಗಡ್ಡೆಯನ್ನು ಪತ್ತೆ ಮಾಡಿದ್ದಾರೆ. ಇದು ಕ್ಯಾನ್ಸರ್ ಇರಬಹುದೆಂಬ ಶಂಕೆಗಳಿವೆ, ಆದರೆ ದೃಢೀಕರಿಸಲು ಹೆಚ್ಚಿನ ಪರೀಕ್ಷೆಯ ಫಲಿತಾಂಶಗಳು ಕಾಯುತ್ತಿವೆ. ರಾಖಿ ಶೀಘ್ರ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುವಂತೆ ರಿತೇಶ್ ಈ ಹಿಂದೆ ಕೋರಿದ್ದರು. ಇದರ ಹೊರತಾಗಿಯೂ ರಾಖಿ ಸಕತ್​ ಟ್ರೋಲ್​ಗೆ ಒಳಗಾಗಿದ್ದರು.

Tap to resize

Latest Videos

ತೋಳ ಬಂತು ತೋಳ ಆಯ್ತಾ ರಾಖಿ ಕಥೆ? ಇಂದು ಆಪರೇಷನ್- ನಟಿ ಕಣ್ಣೀರಿಟ್ರೂ ನೆಟ್ಟಿಗರು ಹೀಗೆಲ್ಲಾ ಹೇಳೋದಾ?

ಈಗ ರಿತೇಶ್​ ಪುನಃ ಫೋಟೋ ತೋರಿಸುತ್ತಾ, ಇನ್ನಾದರೂ ಟ್ರೋಲ್​ ಮಾಡುವುದನ್ನು ನಿಲ್ಲಿಸಿ, ಡ್ರಾಮಾ ಎಂದು ಹೇಳಬೇಡಿ ಎಂದಿದ್ದಾರೆ. ಇದೇ ವೇಳೆ ಆದಿಲ್​ ಖಾನ್​ ದುರ್ರಾನಿ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿರುವ ಅವರು ರಾಖಿ ವಿರುದ್ಧ ಸುಳ್ಳು ಆಪಾದನೆ ಮಾಡಿದವರಿಗೆ ಸರಿಯಾದ ಶಿಕ್ಷೆಯಾಗುತ್ತದೆ. ಸಮಯ ಒಂದೇ ರೀತಿ ಇರುವುದಿಲ್ಲ. ತಕ್ಕ ಶಿಕ್ಷೆ ಆಗಿಯೇ ಆಗುತ್ತದೆ ಎಂದಿದ್ದಾರೆ. 

ನಟಿ ಸುಪ್ರೀಂಕೋರ್ಟ್​ ಆದೇಶದ ಮೇರೆಗೆ ಬಂಧನದ ಭೀತಿಯನ್ನೂ ಎದುರಿಸುತ್ತಿದ್ದಾರೆ. ಮಾಜಿ ಪತಿ ಆದಿಲ್​ ಖಾನ್​ರ  ಖಾಸಗಿ ವಿಡಿಯೋಗಳನ್ನು ಲೀಕ್​ ಮಾಡಿದ ಆರೋಪ ಇವರ ಮೇಲಿದೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನಿಂದ ಬಂಧನದ ಭೀತಿ ಇವರಿಗಿದೆ.  ಈ ಪ್ರಕರಣದಲ್ಲಿ ತನ್ನದೇನೂ ತಪ್ಪಿಲ್ಲ ಎಂದುಕೊಂಡು  ಬುರ್ಖಾದಲ್ಲಿ ಕಾಣಿಸಿಕೊಂಡಿದ್ದ ರಾಖಿ ಈಚೆಗೆ, ಮೊದಲ ಪತಿ ರೀತೇಶ್​ ಬಳಿ ಓಡಿ ಹೋಗಿದ್ದರು.  ತಮ್ಮ ವಿರುದ್ಧ ಆದಿಲ್​ ಖಾನ್​ ದೂರು ದಾಖಲು ಮಾಡುತ್ತಿದ್ದಂತೆಯೇ ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದುಕೊಂಡಿದ್ದ ರಾಖಿ, ತಮ್ಮನ್ನು ಬಂಧಿಸದಂತೆ ಕೋರಿ ನಿರೀಕ್ಷಣಾ ಜಾಮೀನು ಕೋರಿದ್ದರು. ಆದರೆ ಇವರ ಅರ್ಜಿ ತಿರಸ್ಕರಿಸಿರುವ ಸುಪ್ರೀಂಕೋರ್ಟ್​ ನಾಲ್ಕು ವಾರಗಳಲ್ಲಿ ಸರೆಂಡರ್​ ಆಗುವಂತೆ ಆದೇಶಿಸಿತ್ತು. ಇದರ ಬೆನ್ನಲ್ಲೇ ನಟಿ ಆಸ್ಪತ್ರೆಗೆ ಸೇರಿದ್ದರಿಂದ ಡ್ರಾಮಾ ಎಂದೇ ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಇನ್ನೋರ್ವ ಮಾಜಿ ಪತಿ ಆದಿಲ್​ ಖಾನ್​ ದುರ್ರಾನಿ ಕೂಡ ಜೈಲಿನಿಂದ ತಪ್ಪಿಸಿಕೊಳ್ಳಲು ಈಕೆ ಡ್ರಾಮಾ ಮಾಡುತ್ತಿದ್ದಾಳೆ ಎಂದು ಪ್ರತಿಕ್ರಿಯೆ ನೀಡಿದ್ದರು. 

ಕುರುಡನ ಮಾಡಯ್ಯಾ ತಂದೆ... ಈ ಫೋಟೋ ನೋಡಲಾಗ್ತಿಲ್ಲಾ ಅಂತಿದ್ದಾರೆ ಐಶ್​ ಫ್ಯಾನ್ಸ್​!

 

click me!