ಸ್ಟೈಲ್‌ ಕ್ವೀನ್‌ ಅನುಷ್ಕಾ ಶರ್ಮಾರ ಹಾಟ್ ಫೋಟೋಗಳು!

First Published | Sep 7, 2021, 6:07 PM IST

ಅನುಷ್ಕಾ ಶರ್ಮಾ ಹಿಂದಿ ಸಿನಿಮಾದ ಟಾಪ್‌ ನಟಿ ಹಾಗೂ ದೇಶದ ಸಕ್ಕತ್‌ ಪವರ್‌ಫುಲ್‌ ಸೆಲೆಬ್ರೆಟಿಯರಲ್ಲಿ ಒಬ್ಬರು. ಅನುಷ್ಕಾ ಶರ್ಮ ಪ್ರತಿಭಾವಂತ ಮತ್ತು ಅತ್ಯಂತ ಅದ್ಭುತ ನಟಿ  ಜೊತೆಗೆ ಅನುಷ್ಕಾ ಸ್ಟೈಲ್‌ ಕ್ವೀನ್‌ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿವೆ ಅನುಷ್ಕಾರ ಕೆಲವು ಹಾಟ್‌ ಫೋಟೋಗಳು. 

ಉತ್ತರಪ್ರದೇಶದಲ್ಲಿ ಜನಿಸಿದ ಅನುಷ್ಕಾ ಬೆಳೆದಿದ್ದು ಬೆಂಗಳೂರಿನಲ್ಲಿ. ನಂತರ ಮಾಡೆಲಿಂಗ್‌ ಕ್ಷೇತ್ರದಲ್ಲಿ ಆದೃಷ್ಟ ಪರೀಕ್ಷಿಸಲು ಮುಂಬೈಗೆ ಶಿಫ್ಟ್‌ ಆದರು. ಮಾಡೆಲಿಂಗ್‌ ಮೂಲಕ ತಮ್ಮ ಕೆರಿಯರ್‌ ಶುರು ಮಾಡಿದ ಅನುಷ್ಕಾ ನಿಧಾನವಾಗಿ ಬಾಲಿವುಡ್‌ಗೆ ಕಾಲಿಟ್ಟರು. 

ಅನುಷ್ಕಾ ಶರ್ಮ ಬಾಲಿವುಡ್‌ನ ಟಾಪ್‌ ನಟಿಯರಲ್ಲಿ ಒಬ್ಬರು. ತಮ್ಮ ಅಭಿನಯ, ಲುಕ್‌ ಹಾಗೂ ಜೊತೆ ಕ್ಯೂಟ್‌ ಸ್ಮೈಲ್‌ನಿಂದ ಜನರ ಮನ ಗೆದ್ದಿದ್ದಾರೆ. ಅನುಷ್ಕಾ ಹಿಂದಿ ಸಿನಿಮಾದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.

Tap to resize

2008ರಲ್ಲಿ ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌ ಜೊತೆ ರಬ್‌ನೇ ಬನಾದಿ ಜೋಡಿ ಮೂಲಕ ಸಿನಿಮಾಕ್ಕೆ ಎಂಟ್ರಿ ಕೊಟ್ಟರು. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಹಿಟ್‌ ಆಯಿತು ಹಾಗೂ ಅನುಷ್ಕಾ ಎಲ್ಲರ ಗಮನ ಸೆಳೆಯಲು ಪ್ರಾರಂಭಿಸಿದರು.

ತಮ್ಮ ಎರಡನೇ ಸಿನಿಮಾ ಸೂಪರ್‌ ಹಿಟ್‌ ಬ್ಯಾಂಡ್‌ ಬಾಜ ಬರಾತ್‌ ನಂತರ ಅನುಷ್ಕಾ ಶರ್ಮ ಹಿಂದಿರುಗಿ ನೋಡಲಿಲ್ಲ. ಜಬ್‌ ತಕ್‌ ಹೈ ಜಾನ್‌, ಪಿಕೆ, ಸೂಯಿ ದಾಗಾ, ದಿಲ್‌ ಧಡಕ್ನೇ ದೋ, ಏ ದಿಲ್‌ ಹೇ ಮುಶಿಕೀಲ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ ನಟಿ.  

ನಟಿ ಜೊತೆ ಅನುಷ್ಕಾ ಶರ್ಮ ಅವರು ಕ್ಲೀನ್ ಸ್ಲೇಟ್ ಫಿಲ್ಮ್ಜ್ ಎಂಬ ಪ್ರೊಡಕ್ಷನ್‌ ಕಂಪನಿಯ ಸಹ-ಸಂಸ್ಥಾಪಕರಾಗಿದ್ದು, ಇದರ ಅಡಿಯಲ್ಲಿ ಅವರು NH10 ಸೇರಿ ಹಲವಾರು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.

ಅವರು ಅನೇಕ ಬ್ರಾಂಡ್‌ಗಗಳಿಗೆ ರಾಯಭಾರಿಯಾಗಿದ್ದಾರೆ. ಅನುಷ್ಕಾ ತಮ್ಮದೇ ಆದ  ನುಶ್ ಎಂಬ ಮಹಿಳೆಯರ ಉಡುಪಿನ ಬ್ರಾಂಡ್‌ ಹೊಂದಿದ್ದಾರೆ. ಇವುಗಳ ಜೊತೆ ಅನುಷ್ಕಾ ತಮ್ಮನ್ನು ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. 

ಪತಿ ವಿರಾಟ್‌ ಕೊಹ್ಲಿ ಅವರನ್ನು ಆಡ್‌ ಶೂಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದರು ಅನುಷ್ಕಾ. ಬಹಳ ದಿನಗಳ ಡೇಟಿಂಗ್ ವದಂತಿ ನಂತರ, ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 12 ಡಿಸೆಂಬರ್ 2017 ರಂದು ಇಟಲಿಯಲ್ಲಿ ವಿವಾಹವಾದರು. ಈ ವರ್ಷ ಜನವರಿಯಲ್ಲಿ ಈ ದಂಪತಿ ಮಗಳು ವಮಿಕಾಳನ್ನು ಸ್ವಾಗತಿಸಿದರು. 

Latest Videos

click me!