ವಿವಾಹಿತ ಹೀರೋ ಜೊತೆ ಡೇಟಿಂಗ್‌, ಮೂರು ಪ್ರೇಮ ವೈಫಲ್ಯ, 41 ಆದರೂ ಒಂಟಿ!

By Bhavani Bhat  |  First Published Dec 12, 2024, 9:02 AM IST

ದಕ್ಷಿಣ ಭಾರತದ ಈ ನಟಿ ಹಲವು ನಟರೊಂದಿಗೆ ಡೇಟಿಂಗ್‌ ಮಾಡಿದ್ದಾಳೆ. ಇತ್ತೀಚೆಗೆ ವಿವಾಹಿತ ಹೀರೋ ಜೊತೆಗೆ ಹೆಸರು ಕೇಳಿಬಂತು. ಒಬ್ಬ ಬ್ಯುಸಿನೆಸ್‌ಮ್ಯಾನ್‌ ಜೊತೆಗೆ ಮದುವೆ ನಿಶ್ಚಿತಾರ್ಥ ಆಗತ್ತು. ಅದೂ ಮುರಿದುಹೋಯಿತು. ವಯಸ್ಸು 41 ಆದರೂ ಮದುವೆಯಾಗಿಲ್ಲ. 


ಸುಶ್ಮಿತಾ ಸೇನ್, ಟಬು, ಅಮಿಶಾ ಪಟೇಲ್ ಮತ್ತಿತರ ಅನೇಕ ಬಿಂದಾಸ್‌ ನಟಿಯರ ಹೆಸರುಗಳು ಹಲವಾರು ನಟರೊಂದಿಗೆ ಜೋಡಿಸಿಕೊಂಡಿದೆ. ಇವರು ಹಲವರ ಜೊತೆಗೆ ಒಡನಾಡಿದ್ದೂ ಹೌದು. ಹಲವು ಸುದ್ದಿಗಳು ಇವರ ಬಗ್ಗೆ ಇದ್ದರೂ ಈ ನಟಿಯರು ಎಂದಿಗೂ ನಿಜವಾದ ಪ್ರೀತಿಯ ವೈವಾಹಿಕ ಜೀವನ ಪಡೆಯಲಿಲ್ಲ ಅಥವಾ ಏಕಾಂಗಿಯಾಗಿ ಉಳಿಯಲು ನಿರ್ಧರಿಸಿದರು. ಹಾಗೇ ಇದು ಅಂಥ ಸೌತ್‌ ಇಂಡಿಯಾದ ಒಬ್ಬಾಕೆ ಹೀರೋಯಿನ್‌ ಕತೆ. ಒಂದಲ್ಲ ಎರಡಲ್ಲ ಮೂರು ಬಾರಿ ಪ್ರೀತಿಯಲ್ಲಿ ಬಿದ್ದರೂ ನಿರಾಸೆ ಎದುರಿಸಿದ ನಟಿಯೀಕೆ. 41 ವರ್ಷ ವಯಸ್ಸಿನ ಈ ಸೌತ್ ಬ್ಯೂಟಿ ಕ್ವೀನ್ ಇನ್ನೂ ಒಂಟಿ. 

ಇದು ಸೌತ್‌ ಇಂಡಿಯಾದ ಫೇಮಸ್‌ ಹೀರೋಯಿನ್‌ಗಳಲ್ಲಿ ಒಬ್ಬಳಾದ ತ್ರಿಶಾ ಕೃಷ್ಣನ್‌ ಕತೆ. ಈಕೆ ತನ್ನ ಬಹುಮುಖ ನಟನೆಯಿಂದ ತಮಿಳು ಚಿತ್ರರಂಗದಲ್ಲಿ ಭಾರಿ ಪ್ರಸಿದ್ಧಿ ಪಡೆದಳು. ಕೆರಿಯರ್‌ನ ಉತ್ತುಂಗದಲ್ಲಿದ್ದಾಗಲೇ ಈಕೆಯ ಹೆಸರು ಹೀರೋಗಳಾದ ದಳಪತಿ ವಿಜಯ್ ಮತ್ತು ರಾಣಾ ದಗ್ಗುಬಾಟಿಯಂತಹ ನಟರೊಂದಿಗೆ ಕೇಳಿಬಂತು. ತ್ರಿಶಾ ದಕ್ಷಿಣದ ಚಿತ್ರಗಳಲ್ಲಿ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದರೂ, ಬಾಲಿವುಡ್‌ನಲ್ಲಿ ಕ್ಲಿಕ್‌ ಆಗಲಿಲ್ಲ. ದುರದೃಷ್ಟವಶಾತ್, ಅದೃಷ್ಟ ಪೊನ್ನಿಯಿನ್ ಸೆಲ್ವನ್ ನಟಿಗೆ ಅಲ್ಲಿ ಒಲವು ತೋರಲಿಲ್ಲ. 

Tap to resize

Latest Videos

ಬಾಲಿವುಡ್‌ನಲ್ಲಿ ತ್ರಿಶಾ ಕೃಷ್ಣನ್ ಅವರ ಚೊಚ್ಚಲ ಚಿತ್ರ ನಟ ಅಕ್ಷಯ್ ಕುಮಾರ್ ಅವರೊಂದಿಗೆ ಬಿಡುಗಡೆಯಾಯಿತು. 2010 ರಲ್ಲಿ ಬಿಡುಗಡೆಯಾದ ಖಟ್ಟಾ ಮೀಠಾ ಎಂಬ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಜಾನಿ ಲಿವರ್, ರಾಜ್ಪಾಲ್ ಯಾದವ್ ಮತ್ತು ಇತರ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅಲ್ಲಿ ಕೇವಲ ಒಂದು ಚಿತ್ರ ಮಾಡಿದ ನಂತರ ತ್ರಿಶಾ ಹಿಂದಿ ಚಿತ್ರಗಳಿಂದ ಹಿಂದೆ ಸರಿದು ದಕ್ಷಿಣದ ಸೌಂದರ್ಯ ರಾಣಿಯಾಗಿ ಮರಳಿದರು.

ತ್ರಿಶಾ ಅವರ ವೈಯಕ್ತಿಕ ಜೀವನವೂ ಗಮನ ಸೆಳೆಯಿತು. ನಟರೊಂದಿಗಿನ ಅವರ ಸುತ್ತಾಟದ ವದಂತಿ ಆಗಾಗ್ಗೆ ಕೇಳಿಬಂತು. ಅವರ ಹೆಸರು ಇಬ್ಬರು ದಕ್ಷಿಣದ ಸೂಪರ್‌ಸ್ಟಾರ್‌ಗಳೊಂದಿಗೆ ಜೋಡಿಕೊಂಡಿದೆ. 2005ರಲ್ಲಿ, ತ್ರಿಶಾ ಕೃಷ್ಣನ್ ಮತ್ತು ದಳಪತಿ ವಿಜಯ್ ಅವರ ಜೋಡಿಯ ವಿಷಯ ಚಿತ್ರೋದ್ಯಮದಲ್ಲಿ ಓಡಾಡಿತು. ಈ ಇಬ್ಬರು ಗಿಲ್ಲಿ ಫಿಲಂನಲ್ಲಿ ನಟಿಸಿದರು.ಆ ಸಮಯದಲ್ಲಿ ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಹತ್ತಿರವಾದರು. ಈ ವದಂತಿಗಳ ನಡುವೆಯೇ, ಜೋಸೆಫ್ ವಿಜಯ್‌ಗೆ ಆಗಲೇ ಮದುವೆಯಾಗಿತ್ತು. ತ್ರಿಶಾ ಜೊತೆಗಿನ ಅವರ ಗಾಸಿಪ್‌ ವಿಜಯ್ ಅವರ ವೈವಾಹಿಕ ಜೀವನದಲ್ಲಿ ಪ್ರಕ್ಷುಬ್ಧತೆಯನ್ನು ಉಂಟುಮಾಡಿತು.

undefined

ಮಾಧ್ಯಮ ವರದಿಗಳ ಆಧಾರದ ಮೇಲೆ ಹೇಳುವುದಾದರೆ, ದಳಪತಿ ವಿಜಯ್ ಅವರ ದಾಂಪತ್ಯದಲ್ಲಿ ಕೋಲಾಹಲ ಉಂಟಾಯಿತು. ಪತ್ನಿಯೊಂದಿಗಿನ ಅವರ ಬಿರುಕು ಸಾರ್ವಜನಿಕವಾಯಿತು. ಆದರೆ ಈ ಎಲ್ಲಾ ಊಹಾಪೋಹಗಳ ಸಮಯದಲ್ಲಿ ದಳಪತಿ ವಿಜಯ್ ಎಂದಿಗೂ ಸಾರ್ವಜನಿಕವಾಗಿ ತಮ್ಮ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಲಿಲ್ಲ. ಆದರೆ ತ್ರಿಶಾ ವಿಜಯ್ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದರು. ನಾವಿಬ್ಬರೂ ಕೇವಲ ಸಹ-ನಟರು ಮತ್ತು ತನ್ನ ಹೆಸರನ್ನು ವಿಜಯ್‌  ಜೊತೆಗೆ ಲಿಂಕ್ ಮಾಡಿದ್ದು ತನ್ನ ಇಮೇಜ್‌ಗೆ ಕಳಂಕ ತಂದಿದೆ ಎಂದಳು.

ವಿಜಯ್ ಜೊತೆಗಿನ ವದಂತಿ ಕೊನೆಗೊಂಡ ನಂತರ, ತ್ರಿಷಾ ಹೆಸರು ಮತ್ತೊಮ್ಮೆ ಬಾಹುಬಲಿ ನಟ ರಾಹಾ ದಗ್ಗುಬಾಟಿಯೊಂದಿಗೆ ಓಡಾಡಲು ಪ್ರಾರಂಭಿಸಿತು. ಇವರು ಹಲವಾರು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುವ ಬಗ್ಗೆ ಊಹಾಪೋಹಗಳು ಹಬ್ಬಿದವು. ಆದರೆ ಈ ವಿಷಯ ಮದುವೆಯ ಹಂತಕ್ಕೆ ಬಂದಾಗ ಈ ಜೋಡಿ ಬೇರೆಯಾದರು ಎಂದು ವರದಿಯಾಗಿದೆ.

ಸುದೀಪ್ ಸುಳ್ಳು ಹೇಳಿಲ್ಲ, ಆದ್ರೆ ಈಗಿನ ಸಮಯಕ್ಕೆ ಆ ವಿಡಿಯೋ ಸುಳ್ಳಾಗಿದೆ ಅಷ್ಟೇ!
 

ತ್ರಿಶಾ ಕೃಷ್ಣನ್ ಅವರು ಒಬ್ಬ ಉದ್ಯಮಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಹೊಸ ಜೀವನವನ್ನು ಪ್ರಾರಂಭಿಸಲು ನಿರ್ಧರಿಸಿದರು. 23 ಜನವರಿ 2015ರಂದು ವರುಣ್ ಮಣಿಯನ್ ಎಂಬವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಈ ಜೋಡಿ ಮದುವೆಯಾಗಲು ಸಿದ್ಧವಾಗುತ್ತಿದ್ದಾಗಲೇ, ಇದ್ದಕ್ಕಿದ್ದಂತೆ ತ್ರಿಶಾ ವಿವಾಹವಾಗದಿರಲು ನಿರ್ಧರಿಸಿದರು.

ತ್ರಿಶಾ ತನ್ನ ಮುರಿದ ನಿಶ್ಚಿತಾರ್ಥದ ಬಗ್ಗೆ ಆಮೇಲೆ ಮಾತನಾಡುತ್ತಾ, ಸಾಮಾಜಿಕ ಒತ್ತಡದಿಂದ ತಾನು ಎಂದಿಗೂ ಮದುವೆಯಾಗಲು ಬಯಸುವುದಿಲ್ಲ ಎಂದರು. ಬಲವಂತದ ಮದುವೆಯ ಎಷ್ಟೋ ಕಾಲದ ನಂತರ ವಿಚ್ಛೇದನ ಪಡೆಯಲು ನಾನು ಬಯಸುವುದಿಲ್ಲ ಎಂದು ಕೂಡ ಹೇಳಿದ್ದಳು. ಅಂದರೆ ಕುಟುಂಬದವರ ಒತ್ತಡದ ಮೇಲೆ ಆದ ನಿಶ್ಚಿತಾರ್ಥ  ಅದಿರಬಹುದು.

ತಾಯಿ ಮತ್ತು ಮಗಳೊಂದಿಗೆ ರೊಮ್ಯಾನ್ಸ್ ಮಾಡಿದ ಏಕೈಕ ಸೌತ್‌ ನಟ!
 

click me!