ರಶ್ಮಿಕಾ ಮಂದಣ್ಣ ಕನ್ನಡಿಗರ ಮಟ್ಟಿಗೆ ಕಿರಿಕ್ ಹುಡುಗಿ. ಇದೀಗ ರಶ್ಮಿಕಾ ಮತ್ತು ಶ್ರೀಲೀಲಾ ಕನ್ನಡದ ಬಗೆಗೆ ಆಡಿದ ಮಾತುಗಳು ಟ್ರೋಲ್ ಆಗ್ತಿವೆ. ರಶ್ಮಿಕಾ ವಿರುದ್ಧ ಮತ್ತೆ ನೆಟ್ಟಿಗರು ಕಿಡಿಕಿಡಿಯಾಗಿದ್ದಾರೆ.
ಪುಷ್ಪ 2 ಸಿನಿಮಾ ಸದ್ಯ ಸಾವಿರ ಕೋಟಿ ಕ್ಲಬ್ ಸೇರಿದೆ. ಇದಕ್ಕೆ ರಶ್ಮಿಕಾ ಕನ್ನಡ ಖುಷಿಯಿಂದ ಕಾಮೆಂಟ್ ಮಾಡಿದ್ದಾರೆ. ಆದರೆ ನೆಟ್ಟಿಗರು ಮತ್ತೊಂದು ವಿಚಾರಕ್ಕೆ ಕನ್ನಡ ನೆಲದ ಹುಡುಗಿಯರಾದ ರಶ್ಮಿಕಾ ಮಂದಣ್ಣ ಹಾಗೂ ಶ್ರೀಲೀಲಾಗೂ ನಡುವೆ ಹೋಲಿಕೆ ಮಾಡಿ ರಶ್ಮಿಕಾಗೆ ಕ್ಲಾಸ್ ತಗೊಳ್ತಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಹೇಳಿದ್ದರಲ್ಲಿ ಹೊಸತೇನೂ ಇಲ್ಲ. ಆದರೆ ನೆಟ್ಟಿಗರ ಸಿಟ್ಟು ಜಾಸ್ತಿ ಆಗೋದಕ್ಕೆ ಕಾರಣ ಇನ್ನೊಬ್ಬ ಹುಡುಗಿ ಶ್ರೀಲೀಲಾ ಉತ್ತರ. ಹೌದು, 'ಪುಷ್ಪ ೨'ನಲ್ಲಿ ಮಿಂಚಿರೋ ಈ ಇಬ್ಬರು ಲೇಡೀಸ್ ವೀಡಿಯೋ ಸದ್ಯ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಹಾಗೆ ನೋಡಿದರೆ ರಶ್ಮಿಕಾ ಮೊದಲಿಂದಲೂ ಕನ್ನಡಿಗರ ಕೋಪಕ್ಕೆ ಕಾರಣ ಆಗ್ತನೇ ಬಂದಿದ್ದಾರೆ. ಕಾರಣ ಅವರಿಗೆ ತನಗೆ ಇಂಡಸ್ಟ್ರಿಗೆ ಬರಲು ಅವಕಾಶ ನೀಡಿದ ಇಂಡಸ್ಟ್ರಿ ಬಗ್ಗೆ ಇರುವ ತಾತ್ಸಾರ.
ಈಕೆ ಈಗ ಸೌತ್ ಇಂಡಿಯಾ ಮಾತ್ರ ಅಲ್ಲ, ಬಾಲಿವುಡ್‌ನಲ್ಲೂ ಬೇಡಿಕೆ ಇರುವ ಹೀರೋಯಿನ್. ಈಕೆಯ ಸಂಭಾವನೆ ಹದಿನಾರು ಕೋಟಿಗಳಷ್ಟಾಗಿದೆ ಅನ್ನೋದು ಲೇಟೆಸ್ಟ್ ನ್ಯೂಸ್. ಏನಾದ್ರೇನು ಹುಟ್ಟಿ ಬೆಳೆದ ನೆಲದ ಬಗ್ಗೆ ಅಭಿಮಾನ ಇಲ್ಲದೇ ಹೋದ್ರೆ ಅಂತ ನೆಟ್ಟಿಗರು ಲಟಿಕೆ ಮುರೀತಿದ್ದಾರೆ.
ಮುಂದಿನ ವರ್ಷ ಪೂರ್ತಿ ನಟಿ ಪೂಜಾ ಹೆಗ್ಡೆ ಅವರದ್ದೇ ಆರ್ಭಟವಂತೆ: ಹೇಗೆ ಗೊತ್ತಾ?
ರಶ್ಮಿಕಾ ಬಗ್ಗೆ ಈ ಲೆವೆಲ್‌ನಲ್ಲಿ ಕಿಡಿ ಕಾರೋದಕ್ಕೆ ಕಾರಣ ಶ್ರೀಲೀಲಾ. 'ಪುಷ್ಪಾ 2' ರಿಲೀಸ್ ಟೈಮಲ್ಲಿ ಈ ಇಬ್ಬರು ನಟಿಯರು ಬೇರೆ ಬೇರೆ ಯೂಟ್ಯೂಬ್‌ಗೆ ಇಂಟರ್‌ವ್ಯೂ ಕೊಡ್ತಾ ಬಂದರು. ಅದರಲ್ಲೊಂದು ಕಡೆ ರಶ್ಮಿಕ ಮಂದಣ್ಣ ಮಾತಾಡ್ತಾ ಡಬ್ಬಿಂಗ್ ವಿಚಾರ ಹೇಳಿದರು. 'ನನಗೀಗ ಡಬ್ಬಿಂಗ್‌ನದೇ ತಲೆನೋವು. ಕನ್ನಡ, ತಮಿಳು ಎಲ್ಲ ಭಾಷೆಗೂ ಡಬ್ಬಿಂಗ್ ಮಾಡ್ಬೇಕಲ್ಲಾ..' ಅಂದರು. ಆಗ ಆ ಸಂದರ್ಶಕ, 'ಕನ್ನಡ ನಿಮಗೆ ಸುಲಭ ಆಗಬಹುದು' ಅಂದರು. ಆದರೆ ಕಿರಿಕ್ ಬೆಡಗಿ ಸುಮ್ಮನಿದ್ದರೆ ನಡೀತಿತ್ತು. ಆಕೆ ಅಡ್ಡಡ್ಡ ತಲೆ ಆಡಿಸಿದರು. ಹೇಳಿಕೇಳಿ ಅದು ತಮಿಳು ಮೂಲದ ಚಾನೆಲ್. ಆತ ತಮಿಳಿನಲ್ಲಿ ರಶ್ಮಿಕಾ ಜೊತೆಗೆ ಮಾತಾಡ್ತಿದ್ದರು. ತಮಿಳನ್ನು ಪಟ ಪಟ ಮಾತನಾಡಿದ ರಶ್ಮಿಕಾ ಕನ್ನಡದ ವಿಚಾರಕ್ಕೆ ಮಾತ್ರ 'ನೋ' ಅಂತ ತಲೆ ಆಡಿಸಿದ್ದು ಆ ಸಂದರ್ಶಕನಿಗೂ ತಲೆನೋವಾಯ್ತು.
undefined
'ಹೌದಾ? ಕನ್ನಡವೂ ನಿಮಗೆ ಕಷ್ಟನಾ?' ಅಂತ ಕೇಳಿಬಿಟ್ಟರು. ರಶ್ಮಿಕಾ, 'ಹೌದು' ಅಂದುಬಿಟ್ಟರು. 'ಮತ್ತೆ, ತಮಿಳು ಇಷ್ಟು ಚೆನ್ನಾಗಿ ಮಾತಾಡ್ತೀರಿ' ಅಂತ ಆ ನಿರೂಪಕ ಕೇಳಿದಾಗ ರಶ್ಮಿಕಾಗೆ ಏನು ಹೇಳಲೂ ತೋಚಲಿಲ್ಲ. ಆಮೇಲೆ ಸಾವರಿಸಿಕೊಂಡು, 'ನಂಗೆ ಎಲ್ಲ ಭಾಷೆಗಳನ್ನೂ ಮಾತನಾಡೋಕೆ ಕಷ್ಟ ಆಗುತ್ತೆ. ಕಷ್ಟಪಟ್ಟೇ ಮಾತಾಡ್ತೀನಿ. ನಂಗೆ ಯಾವ ಭಾಷೆಯನ್ನೂ ಸರಿಯಾಗಿ ಮಾತನಾಡಲು ಬರೋದಿಲ್ಲ' ಅಂದುಬಿಟ್ಟರು. ಆತ ಕಕ್ಕಾಬಿಕ್ಕಿಯಾದ.
ಇಷ್ಟು ದಿನ ಸಹಿಸಿಕೊಂಡೆ, ಇನ್ನು ಮುಂದೆ ಇಂತಹ ಕೆಟ್ಟ ವರದಿಗಳನ್ನು ಸಹಿಸಲ್ಲ: ನಟಿ ಸಾಯಿ ಪಲ್ಲವಿ
ರಶ್ಮಿಕಾ ಈ ಮಾತು ಮತ್ತೆ ಟ್ರೋಲಿಗರಿಗೆ ಆಹಾರವಾಗಿದೆ. ಇನ್ನೊಂದೆಡೆ ಇದೇ ಸಿನಿಮಾದಲ್ಲಿ 'ಕಿಸಕ್' ಅನ್ನೋ ಸ್ಪೆಷಲ್ ನಂಬರ್‌ಗೆ ಬಿಂದಾಸ್ ಆಗಿ ಹೆಜ್ಜೆ ಹಾಕಿರೋ ಶ್ರೀಲೀಲಾಗೂ ಕನ್ನಡದ ಬಗ್ಗೆ ಪ್ರಶ್ನೆ ಮಾಡಲಾಯ್ತು. ಅದು ಪ್ರೆಸ್ ಮೀಟ್‌ನಲ್ಲಿ,' ಮೇಡಂ ಕನ್ನಡ ಬರುತ್ತಾ ನಿಮಗೆ?' ಅಂತ ಕೇಳಿದಾಗ, ಶ್ರೀಲೀಲಾ ಹೆಮ್ಮೆಯಿಂದ, 'ನಾನು ಕನ್ನಡದವಳೇ. ಕನ್ನಡ ಬರದೇ ಇರುತ್ತಾ' ಅಂದುಬಿಟ್ಟರು. ಹೀಗೆ ಬೇರೆ ಭಾಷೆಗೆ ಹೋಗಿರೋ ನಟಿಯರಿಂದ ಕನ್ನಡತನ ಬಿಟ್ಟು ಹೆಚ್ಚೇನನ್ನೂ ಎಕ್ಸ್‌ಪೆಕ್ಟ್ ಮಾಡದ ಕನ್ನಡಿಗರಿಗೆ ಇದರಿಂದ ಖುಷಿಯಾಗಿದೆ. ಒಂದೇ ಸಿನಿಮಾದಲ್ಲಿ ಮಾಡಿರೋ ಇಬ್ಬರು ನಟಿಯರಿಗೆ ಅದೆಷ್ಟು ವ್ಯತ್ಯಾಸ.. ಒಬ್ಬರು ತನ್ನ ತಾಯ್ನುಡಿ ಬಗ್ಗೆ ತಾತ್ಸಾರದಿಂದ ಮಾತಾಡ್ತಾರೆ. ಮತ್ತೊಬ್ಬರು ಅಭಿಮಾನದಿಂದ ಮಾತಾಡ್ತಾರೆ. ಸದ್ಯ ರಶ್ಮಿಕಾಗೆ ಚೆನ್ನಾಗಿ ಕ್ಲಾಸ್ ತಗೊಂಡಿರೋ ಮಂದಿ ಶ್ರೀಲೀಲಾ ಚಿನ್ನದಂಥಾ ಹುಡುಗಿ ಅಂತ ಮುದ್ದಿನ ಮಾತು ಹೇಳ್ತಿದ್ದಾರೆ.