ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ತಮ್ಮ ಪ್ರೀತಿ, ಮದುವೆ, ವಿಚ್ಛೇದನ ಹಾಗೂ ಕೊನೆಗೆ ಸಾಯಲು ನಿರ್ಧರಿಸಿರುವ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
ಪತ್ರಕರ್ತ, ಆ್ಯಂಕರ್, ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಕಳೆದ ವರ್ಷದ ಆಗಸ್ಟ್ನಲ್ಲಿ ಪತ್ನಿ ಅರ್ಪಿತಾ ಗೌಡ ಅವರ ಜೊತೆ ಡಿವೋರ್ಸ್ ಪಡೆದುಕೊಂಡಿದ್ದಾರೆ. ಎರಡು ವರ್ಷಗಳ ಪ್ರೀತಿ, ಹತ್ತು ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದಾರೆ. ಇನ್ಮೇಲೆ ಕರಿಮಣಿ ಮಾಲೀಕ ನಾನಲ್ಲ ಎಂದು ಕಿರಿಕ್ ಕೀರ್ತಿ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡುವ ಮೂಲಕ ಡಿವೋರ್ಸ್ ಬಗ್ಗೆ ಎಲ್ಲರಿಗೂ ತಿಳಿಸಿದ್ದರು. ಮೊಗವ ಕೊಟ್ಟ ಭಗವಂತ ನಗುವ ಕೊಡದಿರುವನೇ ಎಂದು ಪ್ರಶ್ನಿಸುವ ಮೂಲಕ, "ಅವಳು ಉತ್ತಮ ಜೀವನವನ್ನು ಪಡೆಯಲಿ ಎಂದು ಆಶಿಸುತ್ತೇನೆ ಎಂದು ಹೇಳಿ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ಅಂದಹಾಗೆ ಈ ಜೋಡಿ 2012ರಲ್ಲಿ ಮದುವೆ ಆಗಿತ್ತು. ಈ ದಂಪತಿಗೆ ಓರ್ವ ಪುತ್ರ ಇದ್ದಾನೆ. ಇದಾಗಲೇ ತಮ್ಮ ಜೀವನ, ವಿಚ್ಛೇದನದ ಬಗ್ಗೆ ಕೆಲವು ಶೋಗಳಲ್ಲಿ ಮಾತನಾಡಿರುವ ಕೀರ್ತಿ ಅವರು, ಇದೀಗ ಖಿನ್ನತೆಗೆ ಜಾರಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡಿರುವ ವಿಚಾರವನ್ನು ತಿಳಿಸಿದ್ದಾರೆ.
ರಾಜೇಶ್ ಗೌಡ ಅವರ ಯುಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಕೀರ್ತಿ ಅವರು, ತಮ್ಮ ಬದುಕಿನ ಹಲವು ವಿಷಯಗಳನ್ನು ತೆರೆದಿಟ್ಟಿದ್ದಾರೆ. ಆದರೆ ಎಷ್ಟೇ ಪ್ರಶ್ನಿಸಿದರೂ ತಾವು ವಿಚ್ಛೇದನ ಪಡೆದುಕೊಳ್ಳುವ ನಿರ್ಧಾರ ಯಾಕೆ ಮಾಡಿದ್ವಿ ಎನ್ನುವ ವಿಷಯವನ್ನು ತಿಳಿಸಲಿಲ್ಲ. ತಮ್ಮ ಮತ್ತು ಮಾಜಿ ಪತ್ನಿಯ ಲವ್ ಸ್ಟೋರಿ ಬಗ್ಗೆ ತಿಳಿಸಿದ ಅವರು, ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ, ವಿವೇಕಾನಂದ ಜಯಂತಿ ಅಂಗವಾಗಿ ಯೂತ್ ಡೇ ಸಂಬಂಧ ಕಾಲೇಜಿಗೆ ಹೋಗಿ ವಿದ್ಯಾರ್ಥಿಗಳನ್ನು ಮಾತನಾಡಿಸಬೇಕಿತ್ತು. ಆಗ ಯಾರೂ ಬೈಟ್ ಕೊಡಲು ಮುಂದೆ ಬರಲಿಲ್ಲ. ನಂತರ ಅಲ್ಲಿದ್ದವರೊಬ್ಬರನ್ನು ಕೇಳಿದಾಗ ಅರ್ಪಿತಾಳನ್ನು ತೋರಿಸಿದರು. ಆಕೆ ಬಳಿ ಬೈಟ್ ಪಡೆದೆ, ಅದು ಪ್ರಸಾರ ಆಯ್ತು. ಅಲ್ಲಿಂದ ಶುರುವಾದ ಮಾತುಕತೆ, ಪ್ರೀತಿ-ಪ್ರೇಮ ಎಂದೆಲ್ಲಾ ಮುಂದುವರೆದು ಮದುವೆಯವರೆಗೂ ಬಂತು. ಆದರೆ ಆಕೆಯ ಮನೆಯಲ್ಲಿ ಮದುವೆಗೆ ವಿರೋಧಿಸಿದರು. ಎರಡು ವರ್ಷ ಪ್ರೀತಿಸಿದ್ವಿ. ಆದರೆ ಮದುವೆಗೆ ಅವರ ಮನೆಯಲ್ಲಿ ಸಿದ್ಧರಿರಲಿಲ್ಲ. ಕೊನೆಗೆ ಮನೆಯವರನ್ನು ವಿರೋಧಿಸಿಯೇ ಮದುವೆಯಾದ್ವಿ ಎಂಬ ಪ್ರೀತಿ, ಮದುವೆಯ ವಿಷಯವನ್ನು ತಿಳಿಸಿದ್ದಾರೆ.
ಅಪ್ಪು ನಿಜವಾಗಿ ಸತ್ತಿದ್ದು ಹೇಗೆ? ಈಗ ಎಲ್ಲಿದ್ದಾರೆ? ಆತ್ಮದ ಜೊತೆ ಸಂಭಾಷಿಸಿದ ರಾಮಚಂದ್ರ ಗುರೂಜಿ
ಮದುವೆಯಾದ ಬಳಿಕ ಅವರ ಮನೆಯವರೂ ನನ್ನನ್ನು ಅವಳಿಗಿಂತಲೂ ಹೆಚ್ಚಾಗಿ ಪ್ರೀತಿಸಿದರು. ನಮ್ಮಿಬ್ಬರ ದಾಂಪತ್ಯ ಜೀವನ ಸುಂದರವಾಗಿಯೇ ನಡೆದಿತ್ತು. ಹತ್ತು ವರ್ಷ ಎಲ್ಲವೂ ಚೆನ್ನಾಗಿತ್ತು. ಆದರೆ ಕೊನೆಗೆ ದಾಂಪತ್ಯ ಜೀವನ ಹೀಗೆಯೇ ಮುಂದುವರೆಯಲು ಸಾಧ್ಯವಿಲ್ಲ ಎನ್ನುವುದು ತಿಳಿದು ಪ್ರತ್ಯೇಕವಾಗಲು ನಿರ್ಧರಿಸಿದೆವು ಎಂದ ಕೀರ್ತಿ ಅವರು, ಅದಕ್ಕೆ ಕಾರಣ ಯಾರಿಗೂ ಹೇಳಲ್ಲ, ನಮ್ಮಿಬ್ಬರಿಗೇ ಗೊತ್ತು ಎಂದಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಾರೆ. ಆದರೆ ನಿಜ ಏನು ಎನ್ನುವುದು ನಮಗಷ್ಟೇ ಗೊತ್ತು ಎಂದಿರುವ ಅವರು, ವಿಚ್ಛೇದನದ ಬಳಿಕ ಖಿನ್ನತೆಗೆ ಜಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಪಟ್ಟೆ ಎಂದೂ ಹೇಳಿದ್ದಾರೆ. ನಾನು ಸತ್ತೇ ಹೋದೆ ಎಂದು ಕೆಲವು ಕಡೆ ಸುದ್ದಿ ಕೂಡ ಬಂತು. ಆದರೆ ಸಾಯಲಿಲ್ಲ. ಬದುಕುವುದು ನನಗೆ ಬೇಡವಾಗಿತ್ತು. ಮನೆಯಲ್ಲಿಯೂ ಯಾರಿಗೂ ಹೇಳದೇ ಎಲ್ಲೋ ಹೋಗುತ್ತೇನೆ ಎಂದು ಹೇಳಿ ಸಾಯಲು ಬಯಸಿದೆ. ಆದರೆ ಬದುಕಿದೆ. ಬಳಿಕ ಈ ನಿರ್ಧಾರ ಸರಿಯಲ್ಲ ಎನಿಸಿ ನನ್ನ ಮನಸ್ಸನ್ನು ಬದಲಿಸಿದೆ. ಈಗ ಎಲ್ಲವೂ ಚೆನ್ನಾಗಿದೆ ಎಂದಿದ್ದಾರೆ.
'ಜಗತ್ತಿಗೆ ವಿದಾಯ ಹೇಳಿಬಿಡಬೇಕು ಅಂತ ನಿರ್ಧಾರ ಮಾಡಿಬಿಟ್ಟಿದ್ದೆ. ಕಾರಣಗಳು ಹಲವು. ವೈಯಕ್ತಿಕ ಜೀವನದಲ್ಲಾದ ಕೆಲವು ಘಟನೆಗಳು ನನ್ನನ್ನು ಇನ್ನಿಲ್ಲದಂತೆ ಕುಗ್ಗಿಸಿತ್ತು. ಜೀವನದ ಮೇಲೊಂದು ಕೆಟ್ಟ ನಿರಾಸಕ್ತಿ ಬಂದಿತ್ತು. ಎಲ್ಲ ಪ್ರಯತ್ನಗಳೂ ಕೈಕೊಡುತ್ತಿತ್ತು. ಒಂದು ಕಡೆ ಜಿಹಾದಿಗಳ ಬೆದರಿಕೆ ಕರೆಗಳು ಕುಟುಂಬವನ್ನು ಡಿಸ್ಟರ್ಬ್ ಮಾಡಿತ್ತು. ಸೋಷಿಯಲ್ ಮೀಡಿಯಾದಿಂದಲೂ ಸ್ವಲ್ಪ ದೂರವೇ ಇದ್ದೆ. ಆದ್ರೆ ಈಗ ಎಲ್ಲದಕ್ಕೂ ಹೆದರಿ ಹೋಗಿಬಿಟ್ರೆ ನನ್ನನ್ನು ಈ ಪರಿಸ್ಥಿತಿಗೆ ತಂದವರಿಗೆ ಉತ್ತರ ಕೊಡೋದು ಹೇಗೆ..? ನನ್ನ ನಂಬಿ ಇನ್ವೆಸ್ಟ್ ಮಾಡಿರೋರಿಗೆ ನ್ಯಾಯ ಸಿಗೋದು ಹೇಗೆ…? ನನ್ನ ಮಗನ ಭವಿಷ್ಯ ಕಟ್ಟೋದು ಹೇಗೆ..? ಈ ಪ್ರಶ್ನೆಗಳು ಕಾಡಿದ್ವು, ಟೈಪ್ ಮಾಡಿದ ಡೆತ್ ನೋಟ್ ಡಿಲೀಟ್ ಮಾಡ್ದೆ’ ಎಂದು ಈ ಹಿಂದೆ ಕೀರ್ತಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಈಗ ಸಾವಿನ ಬಗ್ಗೆ ಮತ್ತೊಮ್ಮೆ ತಿಳಿಸಿರುವ ಕೀರ್ತಿ ಅವರು, ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಬಿಗ್‌ಬಾಸ್ ಖ್ಯಾತಿಯ ಮೋಕ್ಷಿತಾ ಪೈ ಮಕ್ಕಳ ಕಳ್ಳಿ? ಪಾರು ಸೀರಿಯಲ್ ನಟಿಯ ಮುಗ್ಧತೆ ಹಿಂದೆ ಕರಾಳ ಮುಖ!
ಹತ್ತು ವರ್ಷಗಳ ಅದ್ಭುತ ಜರ್ನಿ ನನ್ನ ಮುಂದಿದೆ. ಮುಂದೆ ಐವತ್ತು ವರ್ಷಗಳೂ ಅದನ್ನು ನೆನೆದೇ ಬದುಕುತ್ತೇನೆ. ಮಗುವಿಗಾಗಿ ಇಬ್ಬರೂ ಬದುಕುತ್ತಿದ್ದೇವೆ. ನನ್ನ ಮಗನಿಗೂ ಮೆಚುರಿಟಿ ಬಂದಿದೆ. ಒಂದು ದಿನ ಅವನೇ ಬಂದು ನೀವಿಬ್ಬರೂ ಬೇರೆಯಾದ್ರಾ ಕೇಳಿದ. ಹೌದು ಎಂದೆ. ಅಪ್ಪ ಖುಷಿಯಾಗಿರು ಎಂದು ಹೇಳಿದ. ಅಲ್ಲಿಗೆ ನನ್ನ ಎಲ್ಲಾ ಸಮಸ್ಯೆ ಪರಿಹಾರ ಆದಂತೆ ಆಯಿತು. ಅವನಿಗೆ ಹೇಗೆ ವಿಷಯ ಹೇಳುವುದು ಎಂದು ಚಿಂತೆಯಾಗಿತ್ತು. ಆದರೆ ಅವನೇ ಅದನ್ನು ಬಗೆಹರಿಸಿಬಿಟ್ಟಿದ್ದ. ಈಗಲೂ ಅವನು ನನ್ನ ವಿಷಯ ಅವಳಿಗೆ, ಅವಳ ವಿಷಯ ನನ್ನ ಬಳಿ ಮಾತನಾಡಲ್ಲ. ಅವನಿಗಾಗಿ ಬದುಕಿದ್ದೇನೆ ಎಂದಿದ್ದಾರೆ ಕೀರ್ತಿ.