ಮತ್ತೆ ಸುದ್ದಿಯಾದ ಪೂನಂ ಪಾಂಡೆ, ಫ್ರೆಂಡ್ ಎತ್ತಿದ್ದಕ್ಕೆ ಕಾಣಬಾರ್ದು ಕಾಣ್ತು!

Published : Dec 12, 2024, 11:43 AM ISTUpdated : Dec 20, 2024, 01:23 PM IST
ಮತ್ತೆ ಸುದ್ದಿಯಾದ ಪೂನಂ ಪಾಂಡೆ, ಫ್ರೆಂಡ್ ಎತ್ತಿದ್ದಕ್ಕೆ ಕಾಣಬಾರ್ದು ಕಾಣ್ತು!

ಸಾರಾಂಶ

ಸದಾ ಬಟ್ಟೆಗಳಿಂದಲೇ ಸದ್ದು ಮಾಡುತ್ತಿರುವ ನಟಿ ಪೂನಂ ಪಾಂಡೆ ಈಗ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಅವರ ಸ್ನೇಹಿತೆ ಅವರನ್ನು ಎತ್ತಿಕೊಂಡಾಗ ಕಾಣಬಾರದ್ದೆಲ್ಲಾ ಕಂಡು ಬಿಟ್ಟಿದೆ. ಇದರ ವಿಡಿಯೋ ನೋಡಿ ಟ್ರೋಲ್‌ಗಳ ಸುರಿಮಳೆಯಾಗುತ್ತಿದೆ. 

ಕೆಲವು ಚಿತ್ರ ತಾರೆಯರು ಪ್ರಚಾರಕ್ಕೆ ಯಾವ ಮಟ್ಟಿಗಾದರೂ ಇಳಿಯುತ್ತಾರೆ ಎಂಬ ಗಂಭೀರ ಆರೋಪವೇ ಇದೆ. ಇಂಥ ಆರೋಪಗಳ ನಡುವೆಯೇ ಹಾಟೆಸ್ಟ್​ ನಟಿ, ಮಾದಕ ತಾರೆ ಎಂದೇ ಖ್ಯಾತಿ ಪಡೆದ, ಸದಾ ತಮ್ಮ ಬಟ್ಟೆಗಳಿಂದಲೇ ವಿವಾದದಲ್ಲಿಯೂ ಇರೋ ಬಾಲಿವುಡ್​​ ನಟಿ  ಪೂನಂ ಪಾಂಡೆಯ ಮತ್ತೊಂದು ಅಶ್ಲೀಲತೆಯ ವಿಡಿಯೋ ವೈರಲ್‌ ಆಗಿದೆ. ನಟಿ ದಿವ್ಯಾ ಅಗರ್‍‌ವಾಲ್‌ ಅವರ ಹುಟ್ಟುಹಬ್ಬಕ್ಕೆ ಹೋಗಿದ್ದ ನಟಿ ಕೆಳಗಿನ ಒಳ ಉಡುಪು ಧರಿಸದೇ ಇರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಪೂನಂ ಪಾಂಡೆಯನ್ನು ಕಂಡು ಖುಷಿಯಿಂದ ದಿವ್ಯಾ ತಬ್ಬಿಕೊಂಡಾಗ, ಬಟ್ಟೆ ಮೇಲೆ ಹೋಗಿದೆ. ಆಗ ಒಳ ಉಡುಪು ಧರಿಸದೇ ಇರುವುದು ಕಂಡು ಬಂದಿದೆ. ಇನ್ನು ಪಾಪರಾಜಿಗಳಿಗೆ ಕೇಳಬೇಕಾ? ಜೋರಾಗಿ ಕೂಗಿದ್ದಾರೆ. ಆ ಸಂದರ್ಭದಲ್ಲಿ ನಟಿ ಹಿಂಬದಿ ಕೈಯಿಟ್ಟು ಅದನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಏನೂ ಆಗಿಲ್ಲ ಎನ್ನುವಂತೆ ನಗುತ್ತಿರುವುದನ್ನು ಕೂಡ ಈ ವಿಡಿಯೋದಲ್ಲಿ ನೋಡಬಹುದಾಗಿದೆ!

ಅಷ್ಟಕ್ಕೂ, ಪೂನಂ ಪಾಂಡೆ ಸದಾ ವಿವಾದದಲ್ಲಿ ಇರುವ ನಟಿಯೇ. ಕೆಲ ತಿಂಗಳ ಹಿಂದೆ ಇವರ ಸಾವಿನ ಸುದ್ದಿ ಅಭಿಮಾನಿಗಳನ್ನು ಇನ್ನಿಲ್ಲದಂತೆ ಕಾಡಿತ್ತು. ಈಕೆ ಸತ್ತರೆಂಬ ಸುದ್ದಿ ಇಂಡಸ್ಟ್ರಿಗೆ ಬರಸಿಡಿಲು ಬಡಿದಿತ್ತು. ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ ಎಂಬ ಸುದ್ದಿ ಬಂತು. ಗರ್ಭಕಂಠದ ಕ್ಯಾನ್ಸರ್​ ಅವರನ್ನು ಬಲಿ ತೆಗೆದುಕೊಂಡಿತು ಎನ್ನಲಾಗಿತ್ತು.  ಇದಕ್ಕೆ ಕಾರಣ, ಪೂನಂ ತಂಗಿ ಹೇಳಿದ ಮಾತು.  ಅಕ್ಕ ಗರ್ಭಕಂಠ ಕ್ಯಾನ್ಸರ್ (Cervical Cancer)​ ಸತ್ತಿದ್ದಾಗಿ ಹೇಳಿದ್ದರು. ಆದರೆ ಆಕೆಯ ಮೃತದೇಹ ಸಿಗದ ಕಾರಣ ಹಾಗೂ ಕುಟುಂಬಸ್ಥರ ಫೋನ್​ಗಳು ಸ್ವಿಚ್​ ಆಫ್​ ಆಗಿದ್ದರಿಂದ ಅನುಮಾನ ಹುಟ್ಟಿದ ಬೆನ್ನಲ್ಲೇ ನಟಿ ಖುದ್ದು ವಿಡಿಯೋ ಮೂಲಕ ತಾನು ಸತ್ತಿಲ್ಲ ಎಂದು ಹೇಳಿದರು.

ಬಿಗ್‌ಬಾಸ್ ಖ್ಯಾತಿಯ ಮೋಕ್ಷಿತಾ ಪೈ ಮಕ್ಕಳ ಕಳ್ಳಿ? ಪಾರು ಸೀರಿಯಲ್‌ ನಟಿಯ ಮುಗ್ಧತೆ ಹಿಂದೆ ಕರಾಳ ಮುಖ!

ಅಷ್ಟಕ್ಕೂ, ಸಾವಿನ ಸುಳ್ಳು ಸುದ್ದಿ ಹರಡಿದ್ದ ಈಕೆಯ ವಿರುದ್ಧ ಇದಾಗಲೇ ಹಲವಾರು ಕೇಸ್​ ದಾಖಲಾಗಿದೆ. 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯೂ ದಾಖಲಾಗಿದೆ. ಆದರೆ ಸದ್ಯ ಯಾವ ಕೇಸ್​ಗಳದ್ದೂ ಸುದ್ದಿ ಇಲ್ಲ. ಎಲ್ಲವೂ ಸೈಲೆಂಟ್​ ಆಗಿದೆ.  ಪೂನಂ ಸುಳ್ಳು ಸುದ್ದಿ ಹರಡಿದ್ದು ಗೊತ್ತಾಗುತ್ತಿದ್ದಂತೆಯೇ ಚಿತ್ರನಿರ್ಮಾಪಕ ಅಶೋಕ್​ ಪಂಡಿತ್​ ಅವರು ವಿಡಿಯೋ ಮೂಲಕ ನಟಿಯ ವಿರುದ್ಧ ಕೇಸ್​ ದಾಖಲು ಮಾಡಿ ಈಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.  ಭಾರತೀಯ ದಂಡ ಸಂಹಿತೆಯ 63ನೇ ಕಲಮಿನ ಪ್ರಕಾರ, ಯಾವುದೇ ವ್ಯಕ್ತಿ ಉದ್ದೇಶಪೂರ್ವಕವಾಗಿ ಅಥವಾ ದುರುದ್ದೇಶಪೂರ್ವಕವಾಗಿ ತಪ್ಪು ಮಾಹಿತಿಯನ್ನು ನೀಡಿದರೆ, ಅದು ಅಪರಾಧವೆಂದು ಸಾಬೀತಾದರೆ ಅಂಥವರಿಗೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಅಥವಾ ಐವತ್ತು ಸಾವಿರದವರೆಗೆ ವಿಸ್ತರಿಸಬಹುದಾದ ದಂಡ ಹಾಗೂ ಎರಡೂ ವಿಧಿಸುವ ಅವಕಾಶವಿದೆ.  ಇದೇ ಹಿನ್ನೆಲೆಯಲ್ಲಿ ಕೇಸ್​ ದಾಖಲಾಗಿದ್ದರೂ ಇದುವರೆಗೆ ಏನೂ ಸುದ್ದಿಯಿಲ್ಲ.

ಆದರೆ ನಟಿಯ ವರ್ಚಸ್ಸಿಗೆ ಏನೂ ಕಡಿಮೆ ಇಲ್ಲ. ಇವೆಲ್ಲಾ ಸುದ್ದಿಗಳ ಬಳಿಕವೂ ಸೋಷಿಯಲ್​ ಮೀಡಿಯಾದಲ್ಲಿ ಹಾಟ್​ ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇದ್ದಾರೆ. ಜಾಹೀರಾತು ಕಂಪೆನಿಗಳಿಂದಲೂ ಒಳ್ಳೆಯ ಆಫರ್​ಗಳು ಬರುತ್ತಲೇ ಇವೆ. ಇದೀಗ ನದಿ ತೀರದಲ್ಲಿ ಬಿಕಿನಿ ತೊಟ್ಟು ವಿಡಿಯೋ ಶೂಟ್​ ಮಾಡಿಸಿಕೊಂಡಿದ್ದಾರೆ. ಆದರೆ ಬಹುತೇಕ ನಟಿಯರು ಬಿಕಿನಿ ಧರಿಸಲು ಪೈಪೋಟಿ ಬಿದ್ದವರಂತೆ ಕಾಣುತ್ತಿದ್ದರಿಂದಲೋ ಏನೋ, ಎಲ್ಲರಿಗಿಂತ ಭಿನ್ನವಾಗಿ ಇರುವ ಹಂಬಲದಿಂದ ನಟಿ, ಈಗ ಈ ರೀತಿ ಮಾಡಿದ್ದಾರೆ ಎಂದು ಕಮೆಂಟಿಗರು ಹೇಳುತ್ತಿದ್ದರೆ, ಇದು ಎಡಿಟೆಡ್‌ ಇರಬಹುದೇನೋ ಎನ್ನುವ ಅನುಮಾನವನ್ನೂ ಕೆಲವರು ವ್ಯಕ್ತಪಡಿಸುತ್ತಿದ್ದಾರೆ. 

ಖ್ಯಾತ ನಟಿ ಸಪ್ನಾ ಪುತ್ರನ ಅನುಮಾನಾಸ್ಪದ ಸಾವು: ಬೆಚ್ಚಿಬೀಳಿಸುವ ಕಥೆ ಹೇಳಿದ ಹೈಸ್ಕೂಲ್‌ ಸ್ನೇಹಿತರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?
ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?