ಹಾಟ್‌ ಅವತಾರದಲ್ಲಿ ಶಿಲಾಬಾಲಿಕೆಯಂತೆ ಕಂಗೊಳಿಸಿದ ವಾಣಿ ಕಪೂರ್: ಫೋಟೋಸ್ ನೋಡಿದ ಪಡ್ಡೆಹೈಕ್ಳು ಹೀಗಾ ಅನ್ನೋದು!

First Published Dec 30, 2023, 3:00 AM IST

ಬಾಲಿವುಡ್ ನಟಿ ವಾಣಿ ಕಪೂರ್ ಅವರು ಸಿನಿಮಾಗಿಂತ ಆಗಾಗ ಫೋಟೋಶೂಟ್ ಮೂಲಕ ಹೆಚ್ಚುಚ್ಚು ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಬ್ಯಾಕ್‌ಲೆಸ್ ಪೋಸ್ ಕೊಟ್ಟು, ವಾಣಿ ಕಪೂರ್ ಸಖತ್ ಹಾಟ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.

ಪ್ರಸಿದ್ಧ ಬಾಲಿವುಡ್ ನಟಿಯರ ಬಗ್ಗೆ ಚರ್ಚಿಸುವುದಾದರೆ ವಾಣಿ ಕಪೂರ್ ಅವರ ಹೆಸರೂ ಈ ಪಟ್ಟಿಯಲ್ಲಿ ಸೇರಿಕೊಳ್ಳುತ್ತದೆ. ತನ್ನ ಅದ್ಭುತ ನಟನೆಯ ಜೊತೆಗೆ, ಸೌಂದರ್ಯಕ್ಕೂ ಹೆಸರುವಾಸಿಯಾಗಿದ್ದಾರೆ ವಾಣಿ. 

ವಾಣಿ ಕಪೂರ್ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸುವ ಮೂಲಕ ಪಡ್ಡೆಹುಡುಗರ ಗಮನ ಸೆಳೆದಿದ್ದಾರೆ. ಬ್ಯಾಕ್‌ಲೆಸ್ ಆಗಿ ಪೋಸ್ ಕೊಟ್ಟು ಮಾದಕ ನೋಟದಲ್ಲಿ ಕ್ಯಾಮೆರಾ ಕಣ್ಣಿಗೆ ವಿವಿಧ ಭಂಗಿಯಲ್ಲಿ ಪೋಸ್ ನೀಡಿದ್ದಾರೆ. 

Latest Videos


ಫ್ಯಾಷನ್​ ಲೋಕದ ರಾಣಿ ವಾಣಿ ಕಪೂರ್​ ಬ್ಲ್ಯಾಕ್​ ವಿತ್​ ಪಾಚಿ ಗ್ರೀನ್​ ಕಲರ್​ ಗೌನ್​ನಲ್ಲಿ ಅಂದ ಚೆಲ್ಲಿದ್ದಾರೆ. ಶಿಲಾಬಾಲಿಕೆಯಂತೆ ಕ್ಯಾಮರಾ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಇವರ ಅತ್ಯಾಕರ್ಷಣೆಯ ನೋಟ ನೋಡುಗರನ್ನು ಮೋಡಿ ಮಾಡಿದೆ.

ವಾಣಿ ಕಪೂರ್ ಅವರ ಈ ಫೋಟೋಗಳು ಎಷ್ಟು ಹಾಟ್ ಆಗಿವೆ ಎಂದರೆ ಅವುಗಳನ್ನು ನೋಡಿ ನೀವು ಬಾಲಿವುಡ್ ನಟಿ ದಿಶಾ ಪಟಾನಿಗಿಂತ ಒಂದು ಹೆಜ್ಜೆ ಮುಂದೆ, ಅಬ್ಬಬ್ಬಾ ಏನ್​ಕಿಲ್ಲರ್​ ಲುಕ್​ ಗುರೂ! ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. 

ಹಿಂದಿ ಚಿತ್ರರಂಗದ ಹಾಟ್ ವಾಣಿ ಕಪೂರ್ ಅವರು ತಮ್ಮ ನಟನೆಯ ಸಾಕಷ್ಟು ಸಿನಿಮಾಗಳಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟನೆಯ ಜೊತೆಗೆ ಹಾಟ್ ಸೀನ್‌ನಲ್ಲಿ ನಟಿಸಿರೋದಕ್ಕೂ ಸುದ್ದಿಯಾಗಿದ್ದು ಇದೆ. 

ಬಾಲಿವುಡ್‌ನಲ್ಲಿ ಇದೆಲ್ಲಾ ಕಾಮನ್. ಅದರಂತೆ ಈಗ ಹೊಸ ಫೋಟೋಶೂಟ್ ಮೂಲಕ ವಾಣಿ ಕಪೂರ್ ಸಂಚಲನ ಮೂಡಿಸಿದ್ದಾರೆ. ಶಮ್‌ಶೇರಾ, ವಾರ್, ಶುದ್ಧ ದೇಸಿ ರೊಮ್ಯಾನ್ಸ್, ಬೆಲ್ ಬಾಟಮಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿಮಾನಿಗಳ ಮನಗೆದ್ದಿದ್ದಾರೆ.

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ 2013 ರ ಚಿತ್ರ ‘ಶುದ್ಧ್ ದೇಸಿ ರೊಮ್ಯಾನ್ಸ್’ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವಾಣಿ ಕಪೂರ್, ತಮ್ಮ ವೃತ್ತಿಜೀವನದಲ್ಲಿ ಅನೇಕ ಉತ್ತಮ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

click me!