ಡಾ ರಾಜ್‌ ಚಿತ್ರದಲ್ಲಿ ನಟಿಸಿದ್ದ ಈ ನಟಿಗೆ ಮಾಲಾಶ್ರೀ 'ಮಾಂಗಲ್ಯ'ವೇ ಕೊನೆಯಾಗಿದ್ದೇಕೆ?

By Shriram Bhat  |  First Published Nov 16, 2024, 7:17 PM IST

ಡಾ ರಾಜ್‌ಕುಮಾರ್ ಚಿತ್ರದಲ್ಲಿ ನಾಯಕಿಯಾಗಿದ್ದ ನಟಿಯ ಕಥೆ ಇದು..! ಪರಶುರಾಮ್ ಚಿತ್ರದಲ್ಲಿ ಇಬ್ಬರು ನಾಯಕಿಯರಲ್ಲಿ ಈ ನಟಿಯೂ ಒಬ್ಬರು. ಡಾ ರಾಜ್‌ಕುಮಾರ್ ಹಾಗು ಪುನೀತ್ ರಾಜ್‌ಕುಮಾರ್ ಮುಖ್ಯ ಭೂಮಿಕೆಯ ಈ ಚಿತ್ರದಲ್ಲಿ ನಟಿಯರಾದ ಮಹಾಲಕ್ಷ್ಮೀ ..


ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ (Dr Rajkumar) ಅವರೊಂದಿಗೆ ಹಲವಾರು ನಟಿಯರು ನಾಯಕಿಯರಾಗಿ ನಟಿಸಿದ್ದಾರೆ. ಅವರೆಲ್ಲರ ಹೆಸರು ಹೇಳುವುದು ತುಂಬಾ ಕಷ್ಟ. ಏಕೆಂದರೆ, ಬರೋಬ್ಬರಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಡಾ ರಾಜ್‌ ಅವರಿಗೆ ಜೋಡಿಯಾಗಿ ಹಲವು ನಟಿಯರು ಕಾಣಿಸಿಕೊಂಡಿದ್ದಾರೆ. ಹಲವು ಚಿತ್ರಗಳಲ್ಲಿ ನಾಯಕಿಯರಾಗಿ ಇಬ್ಬರು ಕಾಣಿಸಿಕೊಂಡಿದ್ದಾರೆ. ಇಂಥದೇ ಒಂದು ಚಿತ್ರದಲ್ಲಿ ನಾಯಕಿಯಾಗಿದ್ದ ನಟಿಯ ಕಥೆ ಇದು!

ಹೌದು, ಡಾ ರಾಜ್‌ಕುಮಾರ್ ನಟನೆಯ ಪರಶುರಾಮ್ (Parashuram) ಚಿತ್ರದಲ್ಲಿ ಇಬ್ಬರು ನಾಯಕಿಯರಲ್ಲಿ ಈ ನಟಿಯೂ ಒಬ್ಬರು. ಡಾ ರಾಜ್‌ಕುಮಾರ್ ಹಾಗು ಪುನೀತ್ ರಾಜ್‌ಕುಮಾರ್ () ಮುಖ್ಯ ಭೂಮಿಕೆಯ ಈ ಚಿತ್ರದಲ್ಲಿ ನಟಿಯರಾದ ಮಹಾಲಕ್ಷ್ಮೀ (Mahalakshmi) ಹಾಗು ವಾಣಿ ವಿಶ್ವನಾಥ್ (Vani Viswanath) ನಾಯಕಿಯರಾಗಿ ನಟಿಸಿದ್ದಾರೆ. ಅವರಲ್ಲಿ ವಾಣಿ ವಿಶ್ವನಾಥ್ ಅವರು ಹೆಚ್ಚಾಗಿ ತಮಿಳು, ಮಲಯಾಳಂ ಹಾಗು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕನ್ನಡದಲ್ಲಿ ನಟಿಸಿದ್ದು ಕೇವಲ 5 ಚಿತ್ರಗಳಷ್ಟೇ. 

Tap to resize

Latest Videos

undefined

ಡಾ ರಾಜ್‌ ಜೊತೆ ನಟಿಸಿದ್ದ ಕನ್ನಡದ ಹಿರಿಯ ನಟ ಟಿ ತಿಮ್ಮಯ ವಿಧಿವಶ

ಡಾ ರಾಜ್‌ ನಟನೆಯ ಪರಶುರಾಮ್ ಬಳಿಕ ಅವರು ಟೈಗರ್ ಪ್ರಭಾಕರ್ ನಟನೆಯ ಸಿಡಿದೆದ್ದ ಗಂಡು, ಬಾಂಬೆ ದಾದಾ, ಟೈಗರ್ ಪ್ರಭಾಕರ್-ಅಂಬರೀಷ್ ನಟನೆಯ ರಣಭೇರಿ, ಮಾಲಾಶ್ರೀ-ಸುನಿಲ್-ಶ್ರೀಧರ್ ಅಭಿನಯದ 'ಮಾಂಗಲ್ಯ' ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ 5, ಹಿಂದಿಯಲ್ಲಿ 3 ಚಿತ್ರಗಳಲ್ಲಿ ನಟಿಸಿರುವ ನಟಿ ವಾಣಿ ವಿಶ್ವನಾಥ್ ಅವರು  ಹೆಚ್ಚಾಗಿ ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. 

ಮಾಲಾಶ್ರೀ ಅಭಿನಯದ ಮಾಂಗಲ್ಯ ಚಿತ್ರದಲ್ಲಿ ಪ್ರಮುಖ ಪಾತ್ರ ಪೋಷಿಸಿದ್ದ ನಟಿ ವಾಣಿ ವಿಶ್ವನಾಥ್ ಅವರು ಆ ಬಳಿಕ ಯಾವುದೇ ಕನ್ನಡದ ಸಿನಿಮಾಗಳಲ್ಲಿ ನಟಿಸಲಿಲ್ಲ. ಕಾರಣ ಅವರ ವಯಸ್ಸು ಹಾಗೂ ಸಾಕು ಎಂಬ ಆತ್ಮತೃಪ್ತಿ ಎನ್ನಲಾಗಿದೆ. ಸಂದರ್ಶವೊಂದರಲ್ಲಿ ನಟಿ ವಾಣಿ ವಿಶ್ವನಾಥ್ ಅವರು 'ನಾನು ಬಹಳಷ್ಟು ಕಾಲ, ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ಇನ್ನು ಬರುವ ಹೊಸಬರಿಗೆ ಅವಕಾಶ ನೀಡಬೇಕು. ನನಗೆ ಇನ್ನು ಸಾಕು' ಎಂದಿದ್ದಾರೆ. ಹೀಗಾಗಿಯೇ ಅವರು ಮುಂದೆ ಕೆಲವೇ ಕೆಲವು ಸಿನಿಮಾಗಳನ್ನು ಹೊರತುಪಡಿಸಿ ಅಷ್ಟಾಗಿ ಯಾವುದೇ ಭಾಷೆಯ ಚಿತ್ರಗಳಲ್ಲಿ ನಟಿಸಲು ಇಷ್ಟಪಡಲಿಲ್ಲ ಎನ್ನಲಾಗಿದೆ. 

ಡಾ ರಾಜ್‌ ಮೇಲಿದ್ದ ಭಾರೀ ಆರೋಪವೇನು? ಏನೇ ಇದ್ದರೂ ಅವೆಲ್ಲವೂ ಸತ್ಯಕ್ಕೆ ದೂರ ಅಂದ್ರಲ್ಲ!

click me!