ಧನುಷ್‌ ವಿರುದ್ಧ ಸಿಡಿದೆದ್ದ ನಯನತಾರಾ, ಲೇಡಿ ಸೂಪರ್‌ಸ್ಟಾರ್‌ ಬೆಂಬಲಕ್ಕೆ ನಿಂತ ಮೇಘನಾ ರಾಜ್!

Published : Nov 16, 2024, 07:56 PM IST
ಧನುಷ್‌ ವಿರುದ್ಧ ಸಿಡಿದೆದ್ದ ನಯನತಾರಾ, ಲೇಡಿ ಸೂಪರ್‌ಸ್ಟಾರ್‌ ಬೆಂಬಲಕ್ಕೆ ನಿಂತ ಮೇಘನಾ ರಾಜ್!

ಸಾರಾಂಶ

ನಟಿ ನಯನತಾರಾ, ಧನುಷ್‌ ವಿರುದ್ಧ ಸಾರ್ವಜನಿಕವಾಗಿ ವಾಗ್ದಾಳಿ ನಡೆಸಿದ್ದಾರೆ. ನಾನುಮ್ ರೌಡಿ ದಾನ್ ಸಿನಿಮಾದ ದೃಶ್ಯಗಳ ಬಳಕೆ ವಿವಾದಕ್ಕೆ ಕಾರಣವಾಗಿದ್ದು, ಹಳೆಯ ದ್ವೇಷ ಮರುಕಳಿಸಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ದಕ್ಷಿಣ ಭಾರತದ ಹಲವು ನಟಿಯರು ನಯನತಾರಾಗೆ ಬೆಂಬಲ ಸೂಚಿಸಿದ್ದಾರೆ.

ಮಿಳಿನ ಪ್ರಖ್ಯಾತ ನಟ, ನಿರ್ಮಾಪಕ ಧನುಷ್‌ ವಿರುದ್ದ ನಟಿ ನಯನತಾರಾ ಸಿಡಿದೆದ್ದಿದ್ದಾರೆ. ಶನಿವಾರ ಅವರ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ಬಹಿರಂಗ ಪತ್ರ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಮೂರು ಪುಟಗಳ ಪತ್ರದಲ್ಲಿ ನಯನತಾರಾ, ಧನುಷ್‌ ಅವರ ವರ್ತನೆಯನ್ನು ಅಕ್ಷರ ಅಕ್ಷರಗಳಲ್ಲಿ ಟೀಕೆ ಮಾಡಿದ್ದಾರೆ. ನಯನತಾರಾ ಅವರ ನೆಟ್‌ಫ್ಲಿಕ್ಸ್‌ ಡಾಕ್ಯುಮೆಂಟರಿ, 'ನಯನತಾರಾ: ಬಿಯಾಂಡ್‌ & ಫೇರಿಟೇಲ್‌' ನಲ್ಲಿ ಧನುಷ್‌ ನಿರ್ಮಾಣದ ನಾನುಮ್‌ ರೌಡಿ ದಾನ್‌ ಸಿನಿಮಾದ ಮ್ಯೂಸಿಕ್‌ ಹಾಗೂ ವಿಡಿಯೋಗಳನ್ನು ಬಳಸಿಕೊಳ್ಳುವ ವಿಚಾರದಲ್ಲಿ ನಡೆದಿರುವ ಈ ಮನಸ್ತಾಪ ದೊಡ್ಡ ವಿವಾದಕ್ಕೆ ಕಾರಣವಾಗುವ ಲಕ್ಷಣ ತೋರಿದೆ. ಇದರ ನಡುವೆ ಇವರಿಬ್ಬರ ನಡುವಿನ ಗಲಾಟೆಗೆ ನಿಜವಾದ ಕಾರಣ ಡಾಕ್ಯುಮೆಂಟರಿ ಮಾತ್ರವೇ? ಅಥವಾ ಹಳೆಯ ದ್ವೇಷ ಏನಾದರೂ ಇವರ ನಡುವೆ ಇತ್ತಾ ಎನ್ನುವ ಪ್ರಶ್ನೆಗಳು ಬಂದಿವೆ. 

ಈ ನಡುವೆ ನಯನತಾರಾ ಪೋಸ್ಟ್‌ಗೆ ಸಿನಿಮಾರಂಗದ ಯಾರೂ ಕೂಡ ಈವರೆಗೂ ಕಾಮೆಂಟ್‌ ಮಾಡಿಲ್ಲ. ಆದರೆ, ಕನ್ನಡದ ನಟಿ ಮೇಘನಾ ರಾಜ್‌,  ಅನುಪಮಾ ಪರಮೇಶ್ವರನ್, ಪಾರ್ವತಿ ತಿರುವೊತ್ತು, ಐಶ್ವರ್ಯ ರಾಜೇಶ್, ಐಶ್ವರ್ಯ ಲಕ್ಷ್ಮಿ, ಶ್ರುತಿ ಹಾಸನ್ ಲೈಕ್ ಮಾಡಿದ್ದಾರೆ. ಇವರ ಪೈಕಿ ಶ್ರುತಿ ಹಾಸನ್‌ ಧನುಷ್‌ ಅವರೊಂದಿಗೆ '3' ಸಿನಿಮಾದಲ್ಲಿ ನಟಿಸಿದ್ದು ಮಾತ್ರವಲ್ಲದೆ, ಅವರೊಂದಿಗೆ ರಿಲೇಷನ್‌ಷಿಪ್‌ನಲ್ಲಿದ್ದರೂ ಎಂದು ವರದಿಯಾಗಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಕೂಡ ಲೈಕ್ ಕೊಟ್ಟು ಬೆಂಬಲಿಸಿದ್ದಾರೆ.

ಇನ್ನು ಧನುಷ್‌ ವಿರುದ್ಧ ಸಿನಿಮಾ ಮಂದಿ ತಿರುಗಿ ಬಿದ್ದಿದ್ದು ಇದೇ ಮೊದಲೇನಲ್ಲ. ಆದರೆ, ಲೇಡಿ ಸೂಪರ್‌ಸ್ಟಾರ್‌, ತಮಿಳು ಸಿನಿಮಾದ ಸೂಪರ್‌ ಸ್ಟಾರ್‌ ಧನುಷ್‌ ವಿರುದ್ಧ ಸಾರ್ವಜನಿಕವಾಗಿ ಪೈಪೋಟಿಗೆ ಬಿದ್ದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬಹಿರಂಗ ಪತ್ರದಲ್ಲಿ ಸಾಕಷ್ಟು ವಿಚಾರವನ್ನು ನಯನತಾರಾ ಹೇಳಿಕೊಂಡಿದ್ದಾರೆ. ಯಾವುದೇ ಸಿನಿಮಾ ಬ್ಯಾಕ್‌ಗ್ರೌಂಡ್‌ ಕುಟುಂಬ ಅಲ್ಲದೇ ಇದ್ದರೂ, ಸಿನಿಮಾ ರಂಗದಲ್ಲಿ ಅಭಿಮಾನಿಗಳ ಸಹಾಯದಿಂದ ತಾನು ಮೇಲೆದಿದ್ದೇನೆ ಎಂದು ಅವರು ಹೇಳಿದ್ದಾರೆ. ಅದರೊಂದಿಗೆ ಧನುಷ್‌ ಅವರ ವರ್ತನೆಯನ್ನು ಟೀಕೆ ಕಟುವಾಗಿ ಟೀಕೆ ಮಾಡಿದ್ದಾರೆ.

ಸಿನಿಮಾದಲ್ಲಿ ಸೋಲುಗಳು ಮಾತ್ರವಲ್ಲ ವೈಯಕ್ತಿಕ ಜೀವನದಲ್ಲೂ ನಯನತಾರಾ ಸಾಕಷ್ಟು ಸೋಲು ಕಂಡು ಹಲವು ವರ್ಷಗಳ ಕಾಲ ಮದುವೆಯಾಗದೇ ಉಳಿದುಕೊಂಡಿದ್ದು ಇದೆ. ಕೊನೆಗೆ ತಮಿಳು ನಿರ್ದೇಶಕ ವಿಘ್ನೇಶ್‌ ಶಿವನ್‌ ಅವರೊಂದಿಗೆ 2022ರಲ್ಲಿ ಮಹಾಬಲಿಪುರಂನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟಟಿದ್ದರು. ವಿವಾಹದ ಪ್ರಸಾರವನ್ನು ನೆಟ್‌ಫ್ಲಿಕ್ಸ್‌ ಪಡೆದುಕೊಂಡಿತ್ತು. ಇವೆಲ್ಲವನ್ನೂ ನಟಿಯ ಡಾಕ್ಯುಮೆಂಟರಿಯಲ್ಲಿ ತಿಳಿಸುವುದು ನೆಟ್‌ಫ್ಲಿಕ್ಸ್‌ನ ಉದ್ದೇಶವಾಗಿತ್ತು. ಆದರೆ, ಇದಕ್ಕೆ ಧನುಷ್‌ ಅಡ್ಡಗಾಲು ಹಾಕಿದ್ದಾರೆ.

'ಮುಗ್ಧ ಮನಸ್ಸಿನ ಮನುಷ್ಯ..' ಬಿಎಸ್‌ ಯಡಿಯೂರಪ್ಪ ಜೊತೆ ವಿಮಾನದಲ್ಲಿ ಸೋನು ಗೌಡ ಪ್ರಯಾಣ!

ಹತ್ತು ವರ್ಷಗಳ ಹಿಂದೆ ನಯನತಾರಾ ನಾನುಮ್‌ ರೌಡಿ ಧಾನ್‌ ಸಿನಿಮಾದಲ್ಲಿ ನಟಿಸಿದ್ದರು. ವಿಜಯ್‌ ಸೇತುಪತಿ ಹಾಗೂ ನಯನತಾರಾ ಮುಖ್ಯಭೂಮಿಕೆಯಲ್ಲಿದ್ದ ಈ ಸಿನಿಮಾವನ್ನು ಧನುಷ್‌ ನಿರ್ಮಾಣ ಮಾಡಿದ್ದರು. ಧನುಷ್‌ ನಿರ್ಮಾಣ ಮಾಡಿದ್ದ ಸಿನಿಮಾಗಳ ಪೈಕಿ ಇದು ಆ ಕಾಲದಲ್ಲಿ ಅತಿದೊಡ್ಡ ಬ್ಲಾಕ್‌ಬಾಸ್ಟರ್‌ ಎನಿಸಿತ್ತು. ಅದಕ್ಕೆ ಮೂಲ ಕಾರಣವಾಗಿದ್ದು ನಯನತಾರಾ. ಆದರೆ, ಧನುಷ್‌ ಈ ಸಿನಿಮಾದ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಈಗ ನೆಟ್‌ಫ್ಲಿಕ್ಸ್‌ ಡಾಕ್ಯುಮೆಂಟರಿಯಲ್ಲಿ ಈ ಸಿನಿಮಾದ ದೃಶ್ಯ ಹಾಗೂ ಮ್ಯೂಸಿಕ್‌ ಬಳಸಿಕೊಳ್ಳಲು ಧನುಷ್‌ ಆಕ್ಷೇಪ ಮಾಡಿದ್ದಲ್ಲದೆ, ನಯನತಾರಾ ತಮ್ಮ ಮೊಬೈಲ್‌ನಲ್ಲಿ ಶೂಟ್‌ ಮಾಡಿದ್ದ ಕೆಲ 3 ಸೆಕೆಂಡ್‌ನ ಕ್ಲಿಪ್‌ ಬಳಸಿಕೊಂಡಿದ್ದಕ್ಕೆ 10 ಕೋಟಿಯ ಮೊಕದ್ದಮೆ ಹೂಡಿದ್ದಾರೆ. ನಯನತಾರಾ ಹಂಚಿಕೊಂಡ ಈ ಪೋಸ್ಟ್‌ಗೆ ದಕ್ಷಿಣ ಭಾರತದ ನಟಿಯರು ಲೈಕ್ ಕೊಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

Bengaluru:'ಜನಗಣಮನ..' ಹಾಡುವ ಮೂಲಕ ಪ್ರತಿದಿನದ ಕೆಲಸ ಆರಂಭಿಸುವ ರಾಮೇಶ್ವರಂ ಕೆಫೆ!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!