ಬ್ಲ್ಯಾಕ್ ಗೌನ್‌ನಲ್ಲಿ ಸಖತ್ ಹಾಟ್ ಆದ ಜಾನ್ವಿ ಕಪೂರ್: ಶ್ರೀದೇವಿ ಪುತ್ರಿ ಎದೆಯ ಮೇಲೆ ನೆಟ್ಟಿಗರ ಕಣ್ಣು!

First Published Feb 3, 2024, 4:50 PM IST

ಬಾಲಿವುಡ್‌ನ ಮಾದಕ ಬ್ಯೂಟಿ ಹಾಗೂ ದಿವಂಗತ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಹೊಸ ಲುಕ್‌ನಲ್ಲಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗ್ತಿವೆ.

ಬಾಲಿವುಡ್ ಬ್ಯೂಟಿ, ಜೂನಿಯರ್ ಎನ್​ಟಿಆರ್ ಸಿನಿಮಾದ ನಾಯಕಿ ಜಾನ್ವಿ ಕಪೂರ್ ಇದೀಗ ಸಖತ್ ಬೋಲ್ಡ್ ಆಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾವನ್ನು ಶ್ರೀದೇವಿ ಪುತ್ರಿ ಶೇಕ್ ಮಾಡಿದ್ದಾರೆ.

ಬ್ಲ್ಯಾಕ್‌​​ ಕಲರ್​ ಗೌನ್​ ತೊಟ್ಟು ನಟಿ ಜಾನ್ವಿ ಮಿಂಚುತ್ತಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಜಾನ್ವಿ ಕಪೂರ್​ಗೆ ಆಫರ್​ಗಳ ಸುರಿಮಳೆ ಆಗ್ತಿದೆ. ಇದೀಗ ಲೇಟೆಸ್ಟ್​ ಫೋಟೋಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ.

ಜಾನ್ವಿ ಕಪೂರ್ ​ ಫೋಟೋಗಳು  ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಫೋಟೋ ನೋಡಿದ ಫ್ಯಾನ್ಸ್​ ಲೈಕ್​ಗಳ ಸುರಿಮಳೆಗೈದಿದ್ದಾರೆ. ಅನೇಕರು ಹಾಟ್ ಬ್ಯೂಟಿ ಎಂದು ಕಮೆಂಟ್ ಮಾಡ್ತಿದ್ದಾರೆ.

ಜಾನ್ವಿ ಕಪೂರ್ ಅವರು ಸದ್ಯ ಸೌತ್​ನ ದೇವರ ಸಿನಿಮಾ ಮೂಲಕ ದಕ್ಷಿಣ ಚಿತ್ರರಂಗಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಜೂನಿಯರ್ ಎನ್​ಟಿಆರ್ ನಾಯಕನಾಗಿ ನಟಿಸಿರುವ ಸಿನಿಮಾದಲ್ಲಿ ಜಾನ್ವಿ ಹೀರೋಯಿನ್.

ಜಾನ್ವಿ ಕಪೂರ್ ಅವರ ತಂದೆ ಬೋನಿ ಕಪೂರ್ ಅವರು ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಸಕ್ರಿಯರಾಗಿದ್ದರೂ ಅವರ ಪುತ್ರಿಯರು ಇನ್ನೂ ದಕ್ಷಿಣದ ಚಿತ್ರರಂಗದತ್ತ ಒಲವು ತೋರಿಸಿರಲಿಲ್ಲ. ಇದು ಜಾನ್ವಿಗೆ ಮೊದಲ ಸೌತ್ ಸಿನಿಮಾ.

ಜಾನ್ವಿ ಕಪೂರ್ ಅವರು ಬಾಲಿವುಡ್​ನಲ್ಲಿ ಸಕ್ರಿಯ ನಟಿ. ಅವರು ಯಾವುದೇ ಬ್ರೇಕ್ ಇಲ್ಲದೆ ಸಾಲು ಸಾಲು ಪ್ರಾಜೆಕ್ಟ್ ಒಪ್ಪಿಕೊಂಡು ಮಾಡುತ್ತಲೇ ಇರುತ್ತಾರೆ. ಆದರೆ ಅವರ ಮೊದಲ ಸೌತ್ ಸಿನಿಮಾವನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ.

ಜಾನ್ವಿ ಸಾಮಾನ್ಯವಾಗಿ ಹಿಂದಿ ಚಿತ್ರಕ್ಕೆ 3.5 ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ ತೆಲುಗಿನಲ್ಲಿ ನಟಿಸಲು ಶ್ರೀದೇವಿ ಮಗಳು 5 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜಾನ್ವಿ ಕಪೂರ್ ಶ್ರೀದೇವಿ ಅವರ ಮಗಳಾಗಿರುವುದರಿಂದ ಅವರ ಸಿನಿಮಾಗಳ ಕುರಿತು ದಕ್ಷಿಣದ ಪ್ರೇಕ್ಷಕರು ನಿರೀಕ್ಷೆ ಹೊಂದಿದ್ದಾರೆ. ಅವರ ಸಿನಿಮಾ ಕುರಿತು ಭಾವನಾತ್ಮಕವಾಗಿಯೂ ಜನ ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ.

click me!