ಲಕ್ಷ ದುಡಿದು ಎಣಿಸೋಕೆ ಕಷ್ಟ ಪಡ್ತಿದ್ದೆ ಈಗ ಕೋಟಿ ಕೋಟಿ ಬರ್ತಿದೆ; ಹಿಂದಿ ಬಿಗ್ ಬಾಸ್‌ಗೆ ಲಾಯರ್ ಜಗದೀಶ್ ಜಂಪ್

By Vaishnavi Chandrashekar  |  First Published Nov 16, 2024, 11:35 AM IST

ಬಾಲಿವುಡ್ ಅಂಗಳಕ್ಕೆ ಕಾಲಿಡಲು ಸಜ್ಜಾದ ಲಾಯರ್ ಜಗದೀಶ್. ಪಕ್ಕದಲ್ಲಿ ಸುದೀಪ್ ಅಲ್ಲ ಸಲ್ಮಾನ್ ಖಾನ್ ಇರ್ತಾರೆ.....
 


ಲಾಯರ್ ಅಂದ್ರೆ ಭಯ ಇರುತ್ತೆ, ಖಾನೂನು ತಿಳಿದುಕೊಂಡವರು ಎಂದು ಸಾಮಾನ್ಯರು ಮಾತನಾಡಿಲು ಹೆದರಿಕೊಳ್ಳುತ್ತಾರೆ ಹೀಗಾಗಿ ಜನರ ತಲೆಯಲ್ಲಿ ಇರುವ ಯೋಚನೆಗಳನ್ನು ಮುರಿಯಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಕೂಲ್ ಲಾಯರ್ ಆಗಿ ಗುರುತಿಸಿಕೊಂಡಿರುವವರು ಲಾಯರ್ ಜಗದೀಶ್. ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸಿರುವ ಲಾಯರ್ ಜಗದೀಶ್ ದೊಡ್ಡ ಜಗಳದಿಂದ ಎರಡನೇ ವಾರಕ್ಕೆ ಮನೆಯಿಂದ ಹೊರ ಬರುತ್ತಾರೆ. ಹೊರ ಬಂದು ಬೇಸರದಲ್ಲಿ ಇರುತ್ತಾರೆ ಅಂದುಕೊಂಡರೆ ಪ್ರತಿಯಿಂದು ಚಾನೆಲ್‌ನಲ್ಲಿ ಸಂದರ್ಶನ ಕೊಡುತ್ತಾ ಬ್ಯುಸಿಯಾಗಿದ್ದಾರೆ. ಇದೇ ಫೇಮ್‌ ಇಟ್ಟುಕೊಂಡು ಹಿಂದಿ ಬಿಗ್ ಬಾಸ್‌ಗೆ ಕಾಲಿಡುತ್ತಿದ್ದಾರೆ. ಸ್ವತಃ ಲಾಯರ್ ಜಗದೀಶ್ ಸ್ಪಷ್ಟನೆ ಕೊಟ್ಟಿದ್ದಾರೆ. 

'ಕರ್ನಾಟಕದ ಬಾಲಿವುಡ್‌ ಎಂಟ್ರಿ ನಮ್ಮ ಐಶ್ವರ್ಯ ರೈಯಿಂದ ಆಗಿದ್ದು ನಂತರ ಶಿಲ್ಪಾ ಶೆಟ್ಟಿ, ಪ್ರಕಾಶ್ ರೈ, ಸುದೀಪ್ ಎಂಟ್ರಿ ಕೊಟ್ಟರು. ಈಗ ಅದೃಷ್ಟ ನಮಗೂ ಕೂಡಿ ಬರುತ್ತಿದೆ ಇದು 6 ಕೋಟಿ ಕನ್ನಡಿಗರ ಆಶೀರ್ವಾದ....ಬಾಲಿವುಡ್‌ನಲ್ಲಿ ಮಿಂಚಲು ನಾನು ಸಜ್ಜಾಗಿರುವೆ. ಬಿಗ್ ಬಾಸ್ ಬಾಲಿವುಡ್‌ ಆಫರ್‌ಗಿಂತ ಮುಂಚೆ ನನಗೆ ಮುಂಬೈನಿಂದ ದೊಡ್ಡ ಜಾಹೀರಾತು ಸಂಸ್ಥೆಯಿಂದ ಆಫರ್ ಬಂದಿತ್ತು...ಇದಕ್ಕೆ ವಂದನೆಗಳನ್ನು ತಿಳಿಸಬೇಕು ನಾನು ನಿಮ್ಮ ಪ್ರೀತಿಯ ಜಗ್ಗುದಾದ. ಎಲ್ಲರೂ ನನ್ನನ್ನು ಜಗ್ಗುದಾದ ಮತ್ತು ಜಗ್ಗಿ ಎಂದು ಕರೆಯುತ್ತಾರೆ ನಿಜಕ್ಕೂ ಇಷ್ಟವಾಗುತ್ತದೆ, ಮಹಾರಾಣಿ ಕಾಲೇಜ್‌ನ BMW ಬೈಕ್‌ನಲ್ಲಿ ಹೋಗುತ್ತಿರುವಾಗ ಫೋನ್‌ ಬಂತು ಎಂದು ನಿಲ್ಲಿಸಿ ಮಾತನಾಡುತ್ತಿರುವಾಗ ಹೆಣ್ಣು ಮಕ್ಕಳ ಗುಂಪು ಜಗ್ಗಿ ಜಗ್ಗಿ ಎಂದು ಓಡಿ ಬಂದಿತ್ತು, ಇದನ್ನು ಕ್ರಿಯೇಟ್‌ ಸೃಷ್ಟಿ ಮಾಡಿ ಕೊಟ್ಟಿದ್ದು ಬಿಗ್ ಬಾಸ್. ನನ್ನನ್ನು ಮಾತನಾಡಿಸುವ ಪ್ರತಿಯೊಬ್ಬರು ನಮ್ಮ ಮನೆ ಹೆಣ್ಣುಮಕ್ಕಳು ಅವರನ್ನು ನಾನು ಯಾವತ್ತೂ ಕೆಟ್ಟ ಭಾವನೆಯಲ್ಲಿ ನೋಡಿಲ್ಲ ಅವರೇ ನಮ್ಮ ಆಸ್ತೆ' ಎಂದು ಲಾಯರ್ ಜಗದೀಶ್ ಮಾತನಾಡಿದ್ದಾರೆ.

Tap to resize

Latest Videos

undefined

ಮತ್ತೆ ಪ್ರಥಮ್ ಜೊತೆ ದರ್ಶನ್ ಫ್ಯಾನ್ಸ್‌ ಕಿರಿಕ್;ಮುಚ್ಕೊಂಡು ಇರೋಕೆ ಏನೋ ರೋಗ ನಿಮ್ಗೆ ಎಂದು ವಾರ್ನಿಂಗ್ ಕೊಟ್ಟ ನಟ!

'ಕರ್ನಾಟಕದಿಂದ ಸಾಕಷ್ಟು ಜನ ಬಾಲಿವುಡ್‌ಗೆ ಹೋಗಿದ್ದಾರೆ ಈಗ ನಿಮ್ಮ ಜಗ್ಗು ದಾದ ಎಂಟ್ರಿ ಕೊಡುವ ಸಮಯ ಬಂದಿದೆ. ಇಷ್ಟು ದಿನ ಬಿಗ್ ಬಾಸ್‌ನ ಕಥೆ ಸುದೀಪ್‌ ದಾದ ಆಂಡ್ ಜಗ್ಗು ದಾದ ಜೊತೆ ಆಗಿತ್ತು...ಇನ್ನು ಮುಂದೆ ಬಾಲಿವುಡ್‌ನ ಕಥೆ ಸಲ್ಮಾನ್ ಖಾನ್ ವಿತ್ ಜಗ್ಗು ದಾದ ಜೊತೆ ಆಗಲಿದೆ. ಕನ್ನಡಿಗರು ಬೆಳೆಯಬೇಕು....ಕ್ರಶ್ ಆಫ್ ಕರ್ನಾಟಕದ ಆಗಿರುವ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲಿ ಇದ್ದಾರೆ. ಪಾಸಿಟಿವ್ ಆಗಿರಲಿ ನೆಗೆಟಿವ್ ಆಗಿರಲಿ ನನ್ನನ್ನು ಸದಾ ನ್ಯೂಸ್‌ ಟ್ರೆಂಡಿಂಗ್‌ನಲ್ಲಿ ಇಟ್ಟಿದ್ದು ನೀವು ಇದನ್ನು ಆತ್ಮ ತೃಪ್ತಿಯಿಂದ ಹೇಳುತ್ತಿದ್ದೀನಿ. ಲಕ್ಷ ದುಡಿಯಲು ಕಷ್ಟ ಪಡುತ್ತಿದ್ದೆ ಎಣಿಸಲು ಕಷ್ಟ ಪಡುತ್ತಿದ್ದೆ ಆದರೆ ಈಗ ಕೋಟಿಗಳನ್ನು ಎಣಿಸಲು ಆಗದಷ್ಟು ಬ್ಯುಸಿಯಾಗಿರುವೆ ..ಒಳ್ಳೆ ಮಟ್ಟಕ್ಕೆ ಆರ್ಥಿಕತೆ ನನಗೆ ಸಿಕ್ಕಿದೆ' ಎಂದು ಲಾಯರ್ ಜಗದೀಶ್ ಹೇಳಿದ್ದಾರೆ. 

 

click me!