ನಟಿ ಮೇಘನಾ ರಾಜ್ ಮನೆಯ ಗೃಹಪ್ರವೇಶ ಫಂಕ್ಷನ್‌ನಲ್ಲಿ ಕನ್ನಡ ಚಿತ್ರರಂಗದ ಆಪ್ತರು ಮತ್ತು ಕನ್ನಡ ಕಿರುತೆರೆಯ ಹಲವರು ಭಾಗಿಯಾಗಿ ನಟಿ ಮೇಘನಾಗೆ ಶುಭ ಹಾರೈಸಿದ್ದಾರೆ. ನೀಲಿ ಬಣ್ಣದ ಜರಿತಾರಿ ಸೀರೆಯಲ್ಲಿ ಮೇಘನಾ ಅಂದು ಮಿಂಚಿದ್ದಾರೆ. ಮೇಘನಾ ಅಪ್ಪ ಸುಂದರ್ ರಾಜ್, ಅಮ್ಮ ಪ್ರಮೀಳಾ ಜೋಷಾಯ್..
ಸ್ಯಾಂಡಲ್‌ವುಡ್ 'ರಾಜಾ ಹುಲಿ' ನಟಿ ಮೇಘನಾ ರಾಜ್ (Meghana raj Sarja) ಮತ್ತೆ ಸುದ್ದಿಯಲ್ಲಿದ್ದಾರೆ. ಅವರೀಗ ಹೊಸ ಮನೆ ಕಟ್ಟಿಸಿ ಅದರ 'ಗೃಹಪ್ರವೇಶ'ದ ಮೂಲಕ ಕರುನಾಡ ತುಂಬೆಲ್ಲಾ ಸುದ್ದಿಯಲ್ಲಿದ್ದಾರೆ. ಬೆಂಗಳೂರಿನ ಪ್ರತಿಪ್ಠಿತ ಬಡಾವಣೆಯಲ್ಲಿ ಮನೆ ಕಟ್ಟಿಸಿ ಮನೆಯೊಳಕ್ಕೆ ಹೋದ ಮೇಘನಾ ರಾಜ್ ಅವರಿಗೆ ಆಪ್ತರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಈ ವೇಳೆ ಮೇಘನಾ ರಾಜ್ ಮಗ ರಾಯನ್ ರಾಜ್ ಆಟ ಆಡಿಕೊಂಡು ಹಾಯಾಗಿದ್ದ!
ಜಡೆ ತುಂಬಾ ಹೂ ಮುಡಿದು ಫೋಟೋಗೆ ಸ್ಮೈಲ್ ನೀಡಿದ ನ್ಯಾಚುರಲ್ ಬ್ಯೂಟಿ ಮೇಘನಾ ರಾಜ್ ಅವರ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಕರುನಾಡ ಅತ್ತಿಗೆ ಮೇಘನಾ ರಾಜ್, ದೇವತೆ' ಎಂದು ಹಲವು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಕನ್ನಡದಲ್ಲಿ ತುಂಬಾ ಕಡಿಮೆ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಹುಟ್ಟು ಕನ್ನಡತಿ ಆಗಿರುವ ಕಾರಣಕ್ಕೆ ಮೇಘನಾ ರಾಜ್ ಅವರಿಗೆ ಇಲ್ಲಿಯೂ ಫ್ಯಾನ್ಸ್ ಇದ್ದಾರೇನೋ!
undefined
ಹೊಸ ಮನೆ ಗೃಹಪ್ರವೇಶ ಮಾಡಿದ ಮೇಘನಾ ರಾಜ್; ಮನೆಗಿಟ್ಟ ಹೆಸರಲ್ಲಿ ಚಿರುನೇ ಇಲ್ಲ ಎಂದು ಫ್ಯಾನ್ಸ್ ಬೇಸರ
ಇನ್ನು, ಮೇಘನಾ ರಾಜ್ ಮನೆಯ ನಂಬರ್ 42 ಆಗಿದ್ದು, ತಮ್ಮ ಹೊಸ ಮನೆಗೆ 'ಮೇಘನಾ ರಾಜ್ ಸರ್ಜಾ ರಾಯನ್ ರಾಜ್' ಎಂದು ಮನೆಗೆ ಹೆಸರಿಟ್ಟಿದ್ದಾರೆ. ಮನೆ ಪ್ರವೇಶಿಸುತ್ತಿದ್ದಂತೆ ಕಾರ್ ಪಾರ್ಕಿಂಗ್ ಸಿಗುತ್ತದೆ. ಅಚ್ಚರಿ ಎಂಬಂತೆ, ಮನೆಯ ಹೆಸರಲ್ಲಿ ಚಿರು ಇಲ್ಲ. 'ಯಾರದೇ ಮನೆಗೇ ಆದರೂ ಹೆಸರು ಬಹಳ ಮುಖ್ಯವಾಗುತ್ತದೆ ಆದರೆ ಇಲ್ಲಿ ಚಿರು ಹೆಸರನ್ನು ಮರೆತು ನೀವು ಅಮ್ಮ-ಮಗನ ಹೆಸರು ಹಾಕಿರುವುದು ತಪ್ಪು' ಎಂದು ನೆಟ್ಟಿಗರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ಅದಕ್ಕೆ ಮೇಘನಾ ಇನ್ನೂ ಪ್ರತಿಕ್ರಿಯೆ ಕೊಟ್ಟಿಲ್ಲ.
ಇನ್ನು ನಟಿ ಮೇಘನಾ ರಾಜ್ ಮನೆಯ ಗೃಹಪ್ರವೇಶ ಫಂಕ್ಷನ್‌ನಲ್ಲಿ ಕನ್ನಡ ಚಿತ್ರರಂಗದ ಆಪ್ತರು ಮತ್ತು ಕನ್ನಡ ಕಿರುತೆರೆಯ ಹಲವರು ಭಾಗಿಯಾಗಿ ನಟಿ ಮೇಘನಾಗೆ ಶುಭ ಹಾರೈಸಿದ್ದಾರೆ. ನೀಲಿ ಬಣ್ಣದ ಜರಿತಾರಿ ಸೀರೆಯಲ್ಲಿ ಮೇಘನಾ ಅಂದು ಮಿಂಚಿದ್ದಾರೆ. ಮೇಘನಾ ಅಪ್ಪ ಸುಂದರ್ ರಾಜ್, ಅಮ್ಮ ಪ್ರಮೀಳಾ ಜೋಷಾಯ್ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಳೆ ತಂದಿದ್ದಾರೆ. ಕನ್ನಡದ 'ರಾಜಾಹುಲಿ' (Raja Huli) ನಟಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
ನಂದೇನಿದ್ರೂ ಸಿನಿಮಾದಲ್ಲಿ ತೋರಿಸ್ತೀನಿ ಸೆಟ್ಟಲ್ಲಲ್ಲ! ಕೋಳಿ ಜಗಳದಲ್ಲಿ ಈ ಮಾತು ಹೇಳಿದ್ಯಾರು?
ಸದ್ಯ ಮೇಘನಾ ರಾಜ್ ಫೋಟೋ ಹಾಗು ಅವರ ಅಭಿಮಾನಿಗಳ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿವೆ. ಒಟ್ಟಿನಲ್ಲಿ, ಪತಿ ಚಿರಂಜೀವಿ ಸರ್ಜಾ ಕಳೆದುಕೊಂಡಿರುವ ಮೇಘನಾ ರಾಜ್ ಅವರ ಬಾಳಿನಲ್ಲಿ ಹೊಸ ಮನೆ ಬಂದಿರುವುದಕ್ಕೆ ಹಲವರು ಸಂತೋಷ ವ್ಯಕ್ತಪಡಿಸಿ ಯಾವತ್ತೂ ಖುಷಿಖುಷಿಯಾಗಿ ನಲಿಯುತ್ತಾ ಇರಿ ಎಂದು ಹಾರೈಸಿದ್ದಾರೆ.