90ರ ದಶಕದ ಬಾಲಿವುಡ್ ಚೆಲುವೆ ಕಾಜೋಲ್ ಇಂದಿಗೂ ತಮ್ಮದೇ ಆದ ಫ್ಯಾನ್ಸ್ ಬಳಗ ಹೊಂದಿದ್ದಾರೆ. 49ನೇ ವರ್ಷದಲ್ಲೂ ಸಖತ್ ಕ್ಯೂಟ್ ಆಂಡ್ ಹಾಟ್ ಆಗಿದ್ದಾರೆ. ಹಾಗೆಯೇ ಈ ಸ್ಟಾರ್ ಕಿಡ್ ಮಗಳು ಸಹ ಬ್ಯೂಟಿಯಲ್ಲೇನು ಕಮ್ಮಿಯಿಲ್ಲ. ಹಾಟ್‌ನೆಸ್‌ನಲ್ಲಿ ತಾಯಿಯನ್ನೇ ಮೀರಿಸುವಂತಿದ್ದಾಳೆ ಮಗಳು ನೈಸಾ ದೇವಗನ್.
ಅಜಯ್ ದೇವಗನ್ ಮತ್ತು ಕಾಜೋಲ್ ಮಗಳು ನೈಸಾ ದೇವಗನ್ ಬಾಲಿವುಡ್‌ನ ಫೇಮಸ್ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರು. ಸಿನಿಮಾಕ್ಕೆ ಎಂಟ್ರಿ ಕೊಂಡುವ ಮೊದಲೇ ನೈಸಾ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇಂದು ಈಕೆಯ ಹುಟ್ಟುಹಬ್ಬವಾಗಿದ್ದು, ಕಾಜೋಲ್ ತಮ್ಮ ಮಗಳಿಗೆ ಹಾರೈಸಿ ಫೋಟೋಸ್ ಶೇರ್ ಮಾಡಿದ್ದಾರೆ.
ಕಾಜೋಲ್ ಮತ್ತು ಅಜಯ್ ದೇವಗನ್ ಪುತ್ರಿ ನೈಸಾ ದೇವಗನ್ ಮುಂಬೈನ ಅತ್ಯಂತ ಪ್ರತಿಷ್ಠಿತ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ವ್ಯಾಸಂಗ ಮಾಡಿದಳು. ತನ್ನ ಶಾಲಾ ಶಿಕ್ಷಣದ ನಂತರ, ಅವಳು ತನ್ನ ಹೆಚ್ಚಿನ ಅಧ್ಯಯನಕ್ಕಾಗಿ ಸಿಂಗಾಪುರಕ್ಕೆ ಹೋದಳು. ಸೌತ್ ಈಸ್ಟ್ ಏಷ್ಯಾದ ಯುನೈಟೆಡ್ ವರ್ಲ್ಡ್ ಕಾಲೇಜ್‌ಗೆ ಸೇರಿಕೊಂಡಳು.
ನೈಸಾ ಪ್ರಸ್ತುತ ಸ್ವಿಟ್ಜರ್ಲೆಂಡ್‌ನ ಗ್ಲಿಯಾನ್ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್‌ನಲ್ಲಿ ಇಂಟರ್ನ್ಯಾಷನಲ್ ಹಾಸ್ಪಿಟಾಲಿಟಿಯಲ್ಲಿ ತನ್ನ ಪದವಿಯನ್ನು ಮಾಡುತ್ತಿದ್ದಾಳೆ.
ಸಿಂಗಾಪುರ ಮತ್ತು ಯುರೋಪ್‌ನಲ್ಲಿ ಅಧ್ಯಯನ ಮಾಡಿದ ನೈಸಾ, ಆಗಾಗ ಬಾಲಿವುಡ್‌ನ ಇತರ ಸ್ಟಾರ್ ಕಿಡ್‌ಸ್ ಜೊತೆ ಪಾರ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ.
ನೈಸಾ ದೇವಗನ್ ಸೋಶಿಯಲ್ ಮೀಡಿಯಾದಲ್ಲಿ ಸಹ ತುಂಬಾನೆ ಸದ್ದು ಮಾಡುತ್ತಿರುತ್ತಾರೆ. ಫ್ರೆಂಡ್ಸ್ ಜೊತೆ ಪಾರ್ಟಿ, ತಮ್ಮ ಮಾಡರ್ನ್ ಡ್ರೆಸ್ ಹೀಗೆ ಹಲವಾರು ವಿಷಯಗಳಿಂದ ಅವರು ಸದಾ ಸುದ್ದಿಯಲ್ಲಿ ಇರುತ್ತಾರೆ.
ಒಂದೊಮ್ಮೆ ಕಾಜೋಲ್ ಮಗಳ ಆ್ಯಟಿಟ್ಯೂಡ್ ಬದಲಾಯಿಸಿಕೊಳ್ಳಲು ಹೇಳಿದ್ದರಂತೆ. ಇದಕ್ಕೆ ನ್ಯಾಸಾ, ಏನೇ ಬದಲಾವಣೆ ಬೇಕಿದ್ದರೂ ನನ್ನ ಮ್ಯಾನುಫ್ಯಾಕ್ಚರರ್‌ನ್ನು ಸಂಪರ್ಕಿಸಿ ಎಂದಳಂತೆ. ಇದನ್ನು ಕಾಜೋಲ್ ಹೊಗಳಿಕೊಂಡು ಬರೆದಿದ್ದನ್ನು ಇಲ್ಲಿ ನೆನೆಸಿಕೊಳ್ಳಬಹುದು.
ಈ ಹಿಂದೆ ಹಿಂದಿ ಸರಿಯಾಗಿ ಮಾತನಾಡದೇ ನೀಸಾ ಟ್ರೋಲ್ಗೆ ಒಳಗಾಗಿದ್ದರು. ಹಿಂದಿ ರಾಷ್ಟ್ರಭಾಷೆಯ ಪರವಾಗಿ ನಟ ಅಜಯ್ ದೇವಗನ್ ಮಾತನಾಡಿದ್ದರಿಂದ ಅವರ ಪುತ್ರಿ ನೀಸಾ ಮಾತು ಬಹಳ ಟ್ರೋಲ್ ಆಗಿತ್ತು. ಇವೆಂಟ್‌ವೊಂದರಲ್ಲಿ ಹಿಂದಿ ಮಾತನಾಡಲಾಗದೆ ಅಜಯ್- ಕಾಜೋಲ್ ಪುತ್ರಿ ನೀಸಾ ಪೇಚಿಗೆ ಸಿಲುಕಿದ್ದರು.
ಫೆಬ್ರವರಿ 1999 ರಲ್ಲಿ ವಿವಾಹವಾದ ಕಾಜೋಲ್ ಮತ್ತು ಅಜಯ್ ದೇವಗನ್ ಅವರು ಏಪ್ರಿಲ್ 2003 ರಲ್ಲಿ ನೈಸಾ ಮತ್ತು ಸೆಪ್ಟೆಂಬರ್ 2010 ರಲ್ಲಿ ಮಗ ಯುಗ್ ದೇವಗನ್ ಅವರನ್ನು ಸ್ವಾಗತಿಸಿದರು.