ಬಹುಭಾಷ ನಟಿ ವೇದಿಕಾ ಕುಮಾರ್ ಸದ್ಯ ರಜೆಯ ಮಜೆಯಲ್ಲಿದ್ದಾರೆ. ಸೆಲೆಬ್ರಿಟಿಗಳ ಸ್ವರ್ಗ, ನೆಚ್ಚಿನ ತಾಣ ಮಾಲ್ಡೀವ್ಸ್ ನಲ್ಲಿ ವೇದಿಕಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಮಾಲ್ಡೀವ್ಸ್ ಪ್ರವಾಸಕ್ಕೆ ಹೋದವರು ಬಿಕಿನಿಯಲ್ಲಿ ಪೋಸ್ ಕೊಡದೆ ವಾಪಾಸ್ ಬರಲು ಸಾಧ್ಯನೇ ಇಲ್ಲ ಎನ್ನುವ ಹಾಗಾಗಿದೆ. ಯಾಕೆಂದರೆ ಮಾಲ್ಡೀವ್ಸ್ ಟ್ರಿಪ್ ಹೋದ ಬಹುತೇಕ ನಟಿಯರು ತಮ್ಮ ಬಿಕಿನಿ ಪೋಸ್ ನಿಂದ ಪಡ್ಡೆಗಳ ನಿದ್ದೆಗೆಡಿಸುತ್ತಾರೆ.
ಬಿಕಿನಿಯಲ್ಲಿ ಪೋಸ್ ಕೊಡಲು ತಾನೇನು ಕಮ್ಮಿ ಇಲ್ಲ ಎನ್ನುವ ಹಾಗೆ ಮಿಂಚಿದ್ದಾರೆ ನಟಿ ವೇದಿಕಾ. ಹೌದು ಬಿಕಿನಿ ತೊಟ್ಟು ಸಖತ್ ಪೋಸ್ ನೀಡುವ ಮೂಲಕ ಬಿಕಿನಿ ಬೆಡಗಿಯಾಗಿಯ ಲಿಸ್ಟ್ ಗೆ ಸೇರಿದ್ದಾರೆ. ಪಿಂಕ್ ಬಣ್ಣದ ಬಿಕಿನಿ ಧರಿಸಿರುವ ವೇದಿಕಾ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ವೇದಿಕಾ ಮಸ್ತ್ ಬಿಕಿನಿ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬಂದಿದೆ.
ಅಂದಹಾಗೆ ನಟಿ ವೇದಿಕಾ ಮಲ್ಡೀವ್ಸ್ ನಿಂದ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸ್ವಿಮ್ಮಿಂಗ್ ಮಾಡುತ್ತಿರುವ ವಿಡಿಯೋ, ಕ್ಯಾಮರಾಗೆ ಮಸಸ್ತ್ ಪೋಸ್ ನೀಡಿರುವ ವಿಡಿಯೋ ಸೇರಿದಂತೆ ಅನೇಕ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ನಟಿ ವೇದಿಕಾ ಹೆಚ್ಚಾಗಿ ಸಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚಿಗೆ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.ವೇದಿಕಾರ ಮಸ್ತ್ ಬಿಕಿನಿ ಪೋಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೇದಿಕಾ ಪೋಸ್ ಗೆ ಮೆಚ್ಚುಗೆಯ ಕಾಮೆಂಟ್ ಮಾಡಿ ಬೆಂಕಿ ಇಮೋಜಿ ಇಟ್ಟು ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
ನಟಿ ವೇದಿಕಾ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಶಿವಲಿಂಗ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ವೇದಿಕಾಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು.ಸದ್ಯ ವೇದಿಕಾ ಸಿನಿಮಾಗಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳನ್ನು ಶೇರ್ ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ.
ಇನ್ನು ಸಿನಿಮಾಗಳ ವಿಚಾರಕ್ಕೆ ಬರುವುದಾರೆ ವೇದಿಕಾ ಕನ್ನಡದಲ್ಲಿ ಸಂಗಮಾ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕಟ್ಟರು.ಈ ಸಿನಿಮಾದಲ್ಲಿ ಗಣೇಶ್ ಜೊತೆ ತೆರೆಹಂಚಿಕೊಂಡರು. ಬಳಿಕ ಶಿವರಾಜ್ ಕುಮಾರ್ ಜೊತೆ ಶಿವಲಿಂಗ, ಗೌಡ್ರು ಹೋಟೆಲ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಕನ್ನಡದಲ್ಲಿ ಗಾನಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ರಿಲೀಸ್ ಗೆ ಎದುರು ನೋಡುತ್ತಿದ್ದಾರೆ.